- Advertisement -


- Advertisement -
ಬೆಂಗಳೂರು: ಬಿಜೆಪಿ ಶಾಸಕರ ತಂಡ ವಾರಾಂತ್ಯದಲ್ಲಿ ಧರ್ಮಸ್ಥಳಕ್ಕೆ ತೆರಳಿ ಮಂಜುನಾಥ ಸ್ವಾಮಿಗೆ ಪೂಜೆ ಸಲ್ಲಿಸುವ ನಿರ್ಧಾರ ತೆಗೆದುಕೊಂಡಿದೆ.ಆಗಸ್ಟ್ 17 ರಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಬಿಜೆಪಿ ಶಾಸಕರು ಧರ್ಮಸ್ಥಳಕ್ಕೆ ತೆರಳಿ ಪೂಜೆ ಸಲ್ಲಿಸಲಿದ್ದಾರೆ. ಅವರೊಂದಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕೂಡಾ ಭೇಟಿ ನೀಡಲಿದ್ದಾರೆ.
ಉಜಿರೆಯಿಂದ ಧರ್ಮಸ್ಥಳ ದೇವಸ್ಥಾನದವರೆಗೆ ವಾಹನಗಳಲ್ಲಿ ತೆರಳಲು ತೀರ್ಮಾನಿಸಿದ್ದು, ಸುಮಾರು 20-30 ಬಿಜೆಪಿ ಶಾಸಕರು ಭಾಗವಹಿಸಲಿದ್ದಾರೆ.ಮತ್ತೊಂದೆಡೆ ಆಗಸ್ಟ್ 16 ರಂದು ಬೆಂಗಳೂರಿನ ಯಲಹಂಕ ವಿಧಾನಸಭಾ ಕ್ಷೇತ್ರದಿಂದ ಶಾಸಕ ಎಸ್.ಆರ್. ವಿಶ್ವನಾಥ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು 300 ಕಾರುಗಳಲ್ಲಿ ಧರ್ಮಸ್ಥಳಕ್ಕೆ ತೆರಳಲಿದ್ದಾರೆ.
ಸೋಮವಾರ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದಿದ್ದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಧರ್ಮಸ್ಥಳ ವಿಚಾರದಲ್ಲಿ ಪಕ್ಷ ಗಂಭೀರ ಹೆಜ್ಜೆ ಇಡಬೇಕು ಎಂದು ಚರ್ಚೆ ನಡೆದಿತ್ತು.
- Advertisement -


