Thursday, May 9, 2024
Homeಕರಾವಳಿಮಂಗಳೂರು : ಬಿಜೆಪಿ MLA ಟಿಕೆಟ್ ಕೋಡಿಸುದಾಗಿ 2.03 ಕೋಟಿ ವಂಚನೆ: ವಿಜಯಪುರದ ರೇವಣಸಿದ್ದಪ್ಪ ಮತ್ತು...

ಮಂಗಳೂರು : ಬಿಜೆಪಿ MLA ಟಿಕೆಟ್ ಕೋಡಿಸುದಾಗಿ 2.03 ಕೋಟಿ ವಂಚನೆ: ವಿಜಯಪುರದ ರೇವಣಸಿದ್ದಪ್ಪ ಮತ್ತು ಪುತ್ತೂರಿನ ಶೇಖರ್ ವಿರುದ್ಧ ಪ್ರಕರಣ ದಾಖಲು

spot_img
- Advertisement -
- Advertisement -

ಮಂಗಳೂರು: MLA ಟಿಕೆಟ್ ನೀಡುವುದಾಗಿ ಚೈತ್ರ ಕುಂದಾಪುರ ಕೋಟ್ಯಾಂತರ ರೂಪಾಯಿ ಹಣ ಪಡೆದು ವಂಚಿಸಿದ ಪ್ರಕರಣದ ಬಳಿಕ ರಾಜ್ಯದಲ್ಲಿ ಇದೀಗ ಎರಡನೇ ಪ್ರಕರಣ ವಿಜಯನಗರದಲ್ಲಿ ಎರಡು ಕೋಟಿ ವಂಚಿಸಿರುವ ಬೆಳಕಿಗೆ ಬಂದಿದೆ‌‌. ಈ ಬಗ್ಗೆ ಇಬ್ಬರ ವಿರುದ್ಧ ವಿಜಯನಗರ ಜಿಲ್ಲೆಯ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ಆಕ್ಟೋಬರ್19 ರಂದು ಪ್ರಕರಣ ದಾಖಲಾಗಿದ್ದು. ಈ ಪ್ರಕರಣದಲ್ಲಿ ಯಾರೆಲ್ಲ ಬಂಧನವಾಗಲಿದ್ದಾರೆ.ಯಾವ ನಾಯಕರ ಕುತ್ತಿಗೆಗೆ ಈ ಪ್ರಕರಣ ಬರಲಿದೆ ಎಂಬುವುದನ್ನು ಕಾದು ನೋಡಬೇಕಾಗಿದೆ‌.

ಪ್ರಕರಣದ ವಿವರ: ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಹನಸಿ ಗ್ರಾಮದ ಬಸವೇಶ್ವರ ನಗರದ ನಿವೃತ್ತ ಸಹಾಯಕ ಅಭಿಯಂತರರು (PWD ಇಲಾಖೆ) ಶಿವಮೂರ್ತಿ.ಸಿ(61) ಎಂಬವರಿಗೆ 2023 ರ ವಿಜಯನಗರ ಜಿಲ್ಲೆಯ ಹಗರಿಬೊಮ್ಮಹಳ್ಳಿ(ಎಸ್.ಸಿ) ಮೀಸಲು ವಿಧಾನ ಸಭಾ ಕ್ಷೇತ್ರದ ಬಿಜೆಪಿ ಎಮ್.ಎಲ್‌.ಎ ಟಿಕೆಟ್ ನೀಡಿಸುವುದಾಗಿ ಹೇಳಿ 09-10-2022 ರಿಂದ 30-04-2023 ರ ಸಮಯದಲ್ಲಿ ಚೆಕ್ ಹಾಗೂ ವಿವಿಧ ಮೂಲಗಳ ಮೂಲಕ 2 ಕೋಟಿ 03 ಲಕ್ಷ ರೂಪಾಯಿ ಪಡೆದು ವಿಜಯನಗರದ ಬೆನಕನಹಳ್ಳಿ ನಿವಾಸಿ ಸಿದ್ದಲಿಂಗಪ್ಪ ಎಂಬವರ ಮಗನಾದ ಆರೋಪಿ -1 ರೇವಣ್ಣ ಸಿದ್ದಪ್ಪ(55) ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ನಿರ್ಲಕಟ್ಟೆ ನಿವಾಸಿ ಪುರುಷೋತ್ತಮ ಎಂಬವರ ಮಗನಾದ ಬಿಜೆಪಿ ನಾಯಕನಾಗಿರುವ ಆರೋಪಿ- 2 ಶೇಖರ್ ಎನ್.ಪಿ (45)ಎಂಬವರು ವಂಚಿಸಿದ್ದು. ಟಿಕೆಟ್ ಸಿಗದೆ ಇದ್ದಾಗ ನೀಡಿದ ಹಣವನ್ನು ವಾಪಸ್ ಕೇಳಿದ್ದಕ್ಕೆ ಜೀವಬೆದರಿಕೆ ಹಾಕಿರುವ ಬಗ್ಗೆ ವಿಜಯನಗರ ಜಿಲ್ಲೆಯ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಆಕ್ಟೋಬರ್ 19 ರಂದು ಐಪಿಸಿ 1869(U/s420,506,34) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ದೂರಿನಲ್ಲಿ ಬಿಜೆಪಿ ನಾಯಕನ ಭೇಟಿ ಮಾಡಿದ ವಿಚಾರಗಳು ಉಲ್ಲೇಖ:

ಬಿಜೆಪಿ ಟಿಕೆಟ್ ಕೋಡಿಸುವುದಾಗಿ ವಂಚಿಸಿರುವ ವಿಚಾರವಾಗಿ ಹಣ ಯಾರ ಮೂಲಕ ಸಂದಾಯ ಮಾಡಲಾಗಿದೆ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಲ್ಲಿ ಆರೋಪಿ ಬಿಜೆಪಿ ನಾಯಕ ಪುತ್ತೂರಿನ ಶೇಖರ್ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಭೇಟಿ ಮಾಡಿಸಿ ಟಿಕೆಟ್ ವಿಚಾರದ ವ್ಯವಹಾರಗಳನ್ನು ಶೇಖರ್ ಅವರು ನಿಮ್ಮಲ್ಲಿ ಇನ್ನೂ ಮಾತಾನಾಡುತ್ತಾರೆ ಎಂದು ನಳಿನ್ ಕುಮಾರ್ ಕಟೀಲ್ ದೂರುದಾರರ ಬಳಿ ಹೇಳಿದ ವಿಚಾರಗಳನ್ನು ದೂರಿನಲ್ಲಿ ತಿಳಿಸಲಾಗಿದೆ‌.

ಬೆಂಗಳೂರು ಸಿಸಿಬಿಯಲ್ಲಿ ತನಿಖೆ..?: ಇನ್ನೂ ಹಣದ ಡೀಲ್ ಬೆಂಗಳೂರಿನ ಹೋಟೆಲ್ ನಲ್ಲಿ ನಡೆದಿರುವ ಕಾರಣ ಪ್ರಕರಣದ ತನಿಖೆ ವಿಜಯನಗರದ ಕೊಟ್ಟೂರು ಪೊಲೀಸ್ ಠಾಣೆಯಿಂದ ಬೆಂಗಳೂರು ಸಿಸಿಬಿ ಗೆ ಸೋಮವಾರ ವರ್ಗಾವಣೆ ಮಾಡಿ ತನಿಖೆ ಮುಂದುವರಿಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

- Advertisement -
spot_img

Latest News

error: Content is protected !!