Sunday, June 7, 2026
Homeಕರಾವಳಿಉಡುಪಿಸಚಿವ ಕೋಟ ಶ್ರೀನಿವಾಸ ಪೂಜಾರಿ ಮುಂದೆ ಸಿಟ್ಟಾದ ಬಿಜೆಪಿ ಶಾಸಕ!

ಸಚಿವ ಕೋಟ ಶ್ರೀನಿವಾಸ ಪೂಜಾರಿ ಮುಂದೆ ಸಿಟ್ಟಾದ ಬಿಜೆಪಿ ಶಾಸಕ!

- Advertisement -
- Advertisement -

ಬೆಂಗಳೂರು: ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಮುಂದೆ ಆಡಳಿತ ಪಕ್ಷದ ಶಾಸಕರೊಬ್ಬರು ಸಿಟ್ಟಾದ ಘಟನೆ ಇಂದು ವಿಧಾನಸೌಧದಲ್ಲಿ ನಡೆದಿದೆ. ಹೊಸದುರ್ಗ ಕ್ಷೇತ್ರದ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಶಾಸಕರಿಗೆ ಸಚಿವರು ಸ್ವಂದಿಸುತ್ತಿಲ್ಲ ಎಂದು ಗರಂ ಆಗಿದ್ದರು‌.

ವಿಧಾನಸೌಧದ ಸಚಿವರ ಕಚೇರಿಗೆ ಭೇಟಿಗೆ ಬಂದಿದ್ದ ಶಾಸಕ ಗೂಳಿಹಟ್ಟಿ ಶೇಖರ್, ಸಚಿವರ ಮುಂದೆಯೇ ಬಹಿರಂಗವಾಗಿ ಅಸಮಾಧಾನ ತೋಡಿಕೊಂಡಿದ್ದಾರೆ. ಸಚಿವ ಕೋಟಾ ಶ್ರೀನಿವಾಸ್ ಪೂಜಾರಿಗೆ ಕಾದು ಸುಸ್ತಾದ ಗೂಳಿಹಟ್ಟಿ ಶೇಖರ್, ಸಿಟ್ಟಿನಲ್ಲಿ ಸಚಿವರ ಮುಂದೆ ಏರು‌ ಧ್ವನಿಯಲ್ಲಿ ಆಕ್ರೋಶ ಹೊರ ಹಾಕಿದ್ದಾರೆ.

ಬಳಿಕ ಶಾಸಕ ಗೂಳಿಹಟ್ಟಿ ಶೇಖರ್ ಅವರನ್ನು ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಸಮಾಧಾನಪಡಿಸಿದರು. ಇಂದು ಮಧ್ಯಾಹ್ನ ವಿಧಾನಸೌಧದಲ್ಲಿ ಈ ಘಟನೆ ನಡೆದಿದೆ.

- Advertisement -

Latest News

error: Content is protected !!