Tuesday, June 23, 2026
Homeತಾಜಾ ಸುದ್ದಿಮಹೇಶ್ ಶೆಟ್ಟಿ ತಿಮರೋಡಿ ಬೆಳೆಯೋದಕ್ಕೆ ಬಿಜೆಪಿ ಅವರೇ ಕಾರಣ: ಮಂಡ್ಯದಲ್ಲಿ ಶಾಸಕ ಗಾಣಿಗ ರವಿಕುಮಾರ್ ವಾಗ್ದಾಳಿ

ಮಹೇಶ್ ಶೆಟ್ಟಿ ತಿಮರೋಡಿ ಬೆಳೆಯೋದಕ್ಕೆ ಬಿಜೆಪಿ ಅವರೇ ಕಾರಣ: ಮಂಡ್ಯದಲ್ಲಿ ಶಾಸಕ ಗಾಣಿಗ ರವಿಕುಮಾರ್ ವಾಗ್ದಾಳಿ

- Advertisement -
- Advertisement -

ಮಂಡ್ಯ; ಮಹೇಶ್ ಶೆಟ್ಟಿ ತಿಮರೋಡಿ ಬೆಳೆಯೋದಕ್ಕೆ ಬಿಜೆಪಿ ಅವರೇ ಕಾರಣ ಎಂದು ಮಂಡ್ಯದಲ್ಲಿ ಶಾಸಕ ಗಾಣಿಗ ರವಿಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಮಂಡ್ಯದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು  ಮಹೇಶ್ ಶೆಟ್ಟಿ ತಿಮರೋಡಿ ಬಿಜೆಪಿಯ ಅಸೋಸಿಯೇಟ್. ಮಹೇಶ್ ಶೆಟ್ಟಿ ತಿಮರೋಡಿ ಬೆಳೆಯೋದಕ್ಕೆ ಬಿಜೆಪಿ ಅವರೇ ಕಾರಣ.ವೋಟ್ ಗಾಗಿ ದೇವಸ್ಥಾನ, ಧರ್ಮವನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ವಿರುದ್ದ ಮಂಡ್ಯದಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಧರ್ಮಸ್ಥಳ ಸಂಘದಿಂದ ಸಾಕಷ್ಟು ಕಾರ್ಯಕ್ರಮ ನಡೆಯುತ್ತಿವೆ. ನಮ್ಮ ಸರ್ಕಾರ ಯಾರ, ಪರ, ವಿರೋಧ ಇಲ್ಲ.

ಸಮಗ್ರವಾಗಿ ತನಿಖೆ ಆಗಬೇಕು. ಹಾಗಾಗಿ ಧರ್ಮಸ್ಥಳ ಪ್ರಕರಣ SIT ತನಿಖೆ ನಡೆಯುತ್ತಿದೆ.ಮಂಜುನಾಥ ಶಕ್ತಿ ಬಗ್ಗೆ ಎಲ್ಲರಿಗೂ ಗೊತ್ತಾಗಿದೆ. ಚಕ್ರ ವ್ಯೂಹ ಇವಾಗ ಯಾವ ರೀತಿ ರಿವರ್ಸ್ ತಿರುಗಿಕೊಂಡಿದೆ ಅನ್ನೋದು ಗೊತ್ತಾಗಿದೆ. ವಿರೋಧ ಪಕ್ಷದವರು ಜನರನ್ನ ಎತ್ತಿಕಟ್ಟುವ ಕೆಲಸ ಮಾಡ್ತಿದ್ದಾರೆ. ಅವರ ಸರ್ಕಾರ ಇದ್ದಾಗ ಯಾವ ನ್ಯಾಯ ಕೊಡಿಸಿಲ್ಲ.ನಮ್ಮ ಸರ್ಕಾರ ಕುತಂತ್ರದ ಬಗ್ಗೆ ತೋರಿಸುತ್ತಿದೆ. ಕೆಲವರನ್ನು ಗಡಿಪಾರು ಮಾಡಿದ್ದೇವೆ.ಕಾಂಗ್ರೆಸ್ ಸರ್ಕಾರ ಅವರ ಪರ ಇವರ ಪರ ಅಂತ ಸುಳ್ಳು ಅಪಪ್ರಚಾರ ಮಾಡಿ ಕುಮ್ಮಕ್ಕು ಕೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.

ಧರ್ಮಸ್ಥಳ ಚಲೋ ಅಂತ ಸುಮ್ಮನೆ ಡ್ರಾಮಾ ಕ್ರಿಯೆಟ್ ಮಾಡ್ತಾರೆ. ಇದರಿಂದ ಧರ್ಮಸ್ಥಳ ಸಮಸ್ಯೆ ಬಗೆಹರಿಯಲ್ಲ.ತನಿಖೆ ಮಾಡಿದ್ರೆ ಮಾತ್ರ ಸತ್ಯ ಹೊರ ಬರೋದು.  ರಾಜಕೀಯಕ್ಕಾಗಿ ಸುಮ್ಮನೆ ಜೈಕಾರ ಹಾಕೋದಲ್ಲ.ಯಾರ್ಯಾರು ಪಿತೂರಿ ಮಾಡಿದ್ರೂ ಅವರು ಗಡಿಪಾರು ಆಗಿದ್ದಾರೆ. ಸೌಜನ್ಯಗೂ ನ್ಯಾಯ ಸಿಗುತ್ತದೆ, ಧರ್ಮಸ್ಥಳಕ್ಕೂ ನ್ಯಾಯ ಸಿಗುತ್ತೆ.

ನಾವು ಎಲ್ಲರ ಪರ ಇದ್ದೇವೆ, ಬಡವರು, ಹೆಣ್ಣು ಮಕ್ಕಳ ಪರ ಇದ್ದೇವೆ. ವೋಟ್ ಗಾಗಿ ದೇವಸ್ಥಾನ, ಧರ್ಮ ವನ್ನು ದುರುಪಯೋಗ ಮಾಡಿಕೊಳ್ಳುತ್ತಿಲ್ಲ. ಎಲ್ಲರಿಗೂ ನ್ಯಾಯ ಕೊಡಿಸುವ ಕೆಲಸ ಮಾಡ್ತೇವೆ ಎಂದಿದ್ದಾರೆ,

- Advertisement -

Latest News

error: Content is protected !!