Monday, May 20, 2024
Homeತಾಜಾ ಸುದ್ದಿಟೈಲರ್ ಕನ್ಹಯ್ಯ ಲಾಲ್‌ ಕೊಂದ ಹಂತಕರ ಜೊತೆ ಬಿಜೆಪಿ ನಂಟು? ಕಾಂಗ್ರೆಸ್ ಗಂಭೀರ ಆರೋಪ

ಟೈಲರ್ ಕನ್ಹಯ್ಯ ಲಾಲ್‌ ಕೊಂದ ಹಂತಕರ ಜೊತೆ ಬಿಜೆಪಿ ನಂಟು? ಕಾಂಗ್ರೆಸ್ ಗಂಭೀರ ಆರೋಪ

spot_img
- Advertisement -
- Advertisement -

ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಕನ್ಹಯ್ಯ ಲಾಲ್ ಅವರ ಬರ್ಬರ ಹತ್ಯೆ ಪ್ರಕರಣದ ಕೊಲೆಗಡುಕರಲ್ಲಿ ಒಬ್ಬನ ಜತೆ ನಂಟು ಇರುವ ಆರೋಪವನ್ನು ಬಿಜೆಪಿ ಖಡಾಖಂಡಿತವಾಗಿ ನಿರಾಕರಿಸಿದೆ. ಬಿಜೆಪಿ ಮತ್ತು ಆರೋಪಿಯೊಬ್ಬನಿಗೆ ಸಂಬಂಧ ಇದೆ ಎಂದು ಮಾಧ್ಯಮ ವರದಿಗಳು ಮತ್ತು ಸಾಮಾಜಿಕ ಜಾಲತಾಣ ಪೋಸ್ಟ್‌ಗಳನ್ನು ಉಲ್ಲೇಖಿಸಿ ಕಾಂಗ್ರೆಸ್ ಆರೋಪ ಮಾಡಿದ ಬಳಿಕ, ಬಿಜೆಪಿ ಸ್ಪಷ್ಟನೆ ನೀಡಿದೆ

ನಮಗೆ ಯಾವ ಆರೋಪಿ ಜತೆಯೂ ಯಾವುದೇ ನಂಟು ಇಲ್ಲ” ಎಂದು ರಾಜಸ್ಥಾನದ ಬಿಜೆಪಿ ಅಲ್ಪಸಂಖ್ಯಾತ ಘಟಕದ ಮುಖ್ಯಸ್ಥ ಸಾದಿಕ್ ಖಾನ್ ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಟೈಲರ್ ಕನ್ಹಯ್ಯ ಅವರ ಅಮಾನುಷ ಹತ್ಯೆಯು ರಾಜಸ್ಥಾನದಲ್ಲಿನ ಕಾಂಗ್ರೆಸ್ ಸರ್ಕಾರದ ವೈಫಲ್ಯ ಎಂದು ಆರೋಪಿಸಿದ್ದಾರೆ

ಉದಯಪುರದಲ್ಲಿ ಅತ್ಯಂತ ಕ್ರೂರವಾಗಿ ಟೈಲರ್ ಕನ್ಹಯ್ಯ ಲಾಲ್ ಅವರನ್ನು ಹತ್ಯೆ ಮಾಡಿದ ಮುಖ್ಯ ಆರೋಪಿಗಳಲ್ಲಿ ಒಬ್ಬಾತ, ‘ಬಿಜೆಪಿ ಸದಸ್ಯ’ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ಪ್ರಕರಣದ ಕಲೆಯನ್ನು ತನ್ನ ಕಾರ್ಪೆಟ್ ಅಡಿ ಗುಡಿಸಿ ಹಾಕುವುದಕ್ಕಾಗಿ ಕೇಂದ್ರ ಸರ್ಕಾರ ಎನ್‌ಐಎಗೆ ವರ್ಗಾಯಿಸಲು ತರಾತುರಿ ತೋರಿಸಿತ್ತೇ ಎಂದು ಅದು ಪ್ರಶ್ನಿಸಿದೆ.

ಆರೋಪಿಗಳಲ್ಲಿ ಒಬ್ಬನಾದ ರಿಯಾಜ್ ಅಟ್ಟಾರಿ ಅಲಿಯಾಸ್ ರಿಯಾಜ್ ಅಖ್ತಾರಿ ಜತೆಗೆ ಬಿಜೆಪಿ ನಂಟು ಇದೆ ಎಂದು ಮಾಧ್ಯಮ ಸಮೂಹವೊಂದು ಮಾಡಿದ ವರದಿಯನ್ನು ಹಿರಿಯ ಕಾಂಗ್ರೆಸ್ ನಾಯಕ ಪವನ್ ಖೇರಾ ಉಲ್ಲೇಖಿಸಿದ್ದಾರೆ

ಕನ್ಹಯ್ಯ ಲಾಲ್ ಅವರ ಹಂತಕ ರಿಯಾಜ್ ಅಟ್ಟಾರಿ ಬಿಜೆಪಿ ಸದಸ್ಯ” ಎಂದು ಪವನ್ ಖೇರಾ ಅವರು ಟ್ವೀಟ್ ಮಾಡಿದ್ದಾರೆ. ಕಾಂಗ್ರೆಸ್‌ನ ಇತರೆ ನಾಯಕರು ಕೂಡ ಟ್ವಿಟ್ಟರ್‌ನಲ್ಲಿ ಇದೇ ಆರೋಪಗಳನ್ನು ಮಾಡಿದ್ದಾರೆ. “ನನಗೆ ಯಾವುದೇ ಅಚ್ಚರಿಯಾಗಿಲ್ಲ. ನಿಮಗೆ ಆಗಿದೆಯೇ?” ಎಂದು ರೇಣುಕಾ ಚೌಧುರಿ ಅವರು ಟೆಲಿವಿಷನ್ ವರದಿಯ ತುಣುಕುಗಳನ್ನು ಇರುವ ಪೋಸ್ಟ್ ಹಂಚಿಕೊಂಡಿದ್ದಾರೆ.

ಇದು ‘ಫೇಕ್ ನ್ಯೂಸ್’ ಎಂದು ಬಿಜೆಪಿ ಐಟಿ ಮುಖ್ಯಸ್ಥ ಅಮಿತ್ ಮಾಳವೀಯ ಕಿಡಿಕಾರಿದ್ದಾರೆ. “ನೀವು ಸುಳ್ಳು ಸುದ್ದಿ ಸೃಷ್ಟಿಸುತ್ತಿರುವುದು ನನಗೆ ಅಚ್ಚರಿ ಮೂಡಿಸಿಲ್ಲ. ಉದಯಪುರ ಕೊಲೆಗಡುಕರು ಬಿಜೆಪಿ ಸದಸ್ಯರಾಗಿರಲಿಲ್ಲ. ರಾಜೀವ್ ಗಾಂಧಿ ಅವರನ್ನು ಕೊಲೆ ಮಾಡಲು ಎಲ್‌ಟಿಟಿಇ ಹಂತಕರು ಕಾಂಗ್ರೆಸ್‌ಗೆ ಸೇರ್ಪಡೆಯಾಗಲು ಪ್ರಯತ್ನ ಮಾಡಿದ್ದಂತೆ ಅವರ ಪ್ರಯತ್ನ ಕಾಣಿಸುತ್ತಿದೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.

ಬಿಜೆಪಿ ನಾಯಕರಾದ ಇರ್ಷಾದ್ ಚೈನ್‌ವಾಲಾ ಮತ್ತು ಮೊಹಮ್ಮದ್ ತಾಹಿರ್ ಜತೆಗೆ ಅಟ್ಟಾರಿ ಇರುವ ಚಿತ್ರಗಳನ್ನು ಮತ್ತು ಪೋಸ್ಟ್‌ಗಳನ್ನು ಪವನ್ ಖೇರಾ ಉಲ್ಲೇಖಿಸಿದ್ದಾರೆ. “ಮುಖ್ಯ ಆರೋಪಿ ರಿಯಾಜ್ ಅಟ್ಟಾರಿ ರಾಜಸ್ಥಾನ ಬಿಜೆಪಿ ನಾಯಕ ಮತ್ತು ಮಾಜಿ ಸಚಿವ ಗುಲಾಬ್‌ಚಂದ್ ಕಟಾರಿಯಾ ಅವರ ಕಾರ್ಯಕ್ರಮಗಳಲ್ಲಿ ಅನೇಕ ಬಾರಿ ಭಾಗಿಯಾಗಿರುವುದು ಕೂಡ ಇದರಿಂದ ಬಹಿರಂಗವಾಗಿದೆ” ಎಂದು ಆರೋಪಿಸಿದ್ದಾರೆ.

“ಇದು ಮಾತ್ರವಲ್ಲದೆ, ಮುಖ್ಯ ಆರೋಪಿ ರಿಯಾಜ್ ಅಟ್ಟಾರಿ ರಾಜಸ್ಥಾನ ಬಿಜೆಪಿ ಅಲ್ಪಸಂಖ್ಯಾತ ಘಟಕದ ಸಭೆಗಳಲ್ಲಿ ಭಾಗವಹಿಸುತ್ತಾ ಇದ್ದದ್ದು ಕೂಡ ಈಗ ಜಗತ್ತಿನ ಮುಂದೆ ಇದೆ” ಎಂದು ಖೇರಾ ಹೇಳಿದ್ದಾರೆ.

- Advertisement -
spot_img

Latest News

error: Content is protected !!