Friday, June 5, 2026
Homeತಾಜಾ ಸುದ್ದಿಪುತ್ತೂರು: ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಪ್ರದೀಪ್ ಹೆಗ್ಡೆಯವರ ಮನೆಗೆ ಬೆಂಕಿ; ನಗದು ಮತ್ತು ದಾಖಲೆ...

ಪುತ್ತೂರು: ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಪ್ರದೀಪ್ ಹೆಗ್ಡೆಯವರ ಮನೆಗೆ ಬೆಂಕಿ; ನಗದು ಮತ್ತು ದಾಖಲೆ ಪ್ರತಗಳು ಭಸ್ಮ

- Advertisement -
- Advertisement -

ಪುತ್ತೂರು: ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಪ್ರದೀಪ್ ಹೆಗ್ಡೆಯವರ ಮನೆಗೆ ಬೆಂಕಿ ತಗುಲಿದ ಘಟನೆ ಉರ್ಲಾಂಡಿಯಲ್ಲಿ ಜ.24ರ ರಾತ್ರಿ ನಡೆದಿದೆ.


ಪ್ರದೀಪ್ ಹೆಗ್ಗಡೆಯವರ ತಾಯಿ ವಿಮಲ ಹೆಗ್ಗಡೆಯವರ ಹೆಸರಿನಲ್ಲಿರುವ ಉರ್ಲಾಂಡಿಯಲ್ಲಿರುವ ಮನೆಯಲ್ಲಿ ಜ.24 ರಂದು ಮನೆಮಂದಿ ರಾತ್ರಿ ದೇವಸ್ಥಾನಕ್ಕೆ ತೆರಳಿದ್ದರು. ಆದರೆ ಅವರು ಮನೆಗೆ ವಾಪಸಾದ ವೇಳೆ ಮನೆಯೊಳಗೆ ಬೆಂಕಿ ಕಾಣಿಸಿದೆ, ಈ ಸಂದರ್ಭ ತಕ್ಷಣ ಸ್ಥಳೀಯರೆಲ್ಲ ಸೇರಿ ಬೆಂಕಿಯನ್ನು ಆರಿಸಿದ್ದಾರೆ. ಆದರೆ ಬೆಂಕಿ ಹೊತ್ತಿಕೊಂಡು ಕೆಲ ಕಾಲಗಳಾದ ಕಾರಣ ಮನೆಯೊಳಗಿದ್ದ ಕಪಾಟು ಮತ್ತು ಅದಕೊಳಗಿದ್ದ ಬಟ್ಟೆ, ನಗದು ಜೊತೆಗೆ ದಾಖಲೆ ಪತ್ರಗಳು ಬೆಂಕಿಗಾಹುತಿಯಾಗಿದೆ.


ಘಟನಾ ಸ್ಥಳಕ್ಕೆ ನಗರಸಭೆ ಅಧ್ಯಕ್ಷ ಜೀವಂಧರ ಜೈನ್, ನಗರಸಭಾ ಸ್ಥಳೀಯ ಸದಸ್ಯ ಸಂತೋಷ್ ಕುಮಾರ್ ಬೋಳುವಾರ್ ಭೇಟಿ ನೀಡಿದ್ದಾರೆ.

- Advertisement -

Latest News

error: Content is protected !!