
ಬಿ.ಸಿ.ರೋಡ್: ಬಿಜೆಪಿ ಕಚೇರಿಯಲ್ಲಿ ಬಂಟ್ವಾಳ ಮಂಡಲದ ಕಾನೂನು ಪ್ರಕೋಷ್ಠದ ನೂತನ ಪದಾಧಿಕಾರಿಗಳ ಘೋಷಣಾ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದಲ್ಲಿ ಕಾನೂನು ಪ್ರಕೋಷ್ಠದ ಜಿಲ್ಲಾ ಸಂಚಾಲಕರಾದ ಶ್ರೀಧರ್ ಶೆಟ್ಟಿ ಪುಲಿಂಚರವರು ಪ್ರಸ್ತಾವನೆಯನ್ನು ಮಾಡಿದರು.
ಜಿಲ್ಲಾ ಸಹ ಸಂಚಾಲಕರಾದ ಪ್ರಮೋದ್ ಪೂಜಾರಿ ಕೆರ್ವಾಶೆ ಕಾನೂನು ಪ್ರಕೋಷ್ಠದ ಮುಂದಿನ ಕಾರ್ಯ ಯೋಜನೆಯ ಬಗ್ಗೆ ವಿವರಿಸಿದ್ದರು. ಬಿಜೆಪಿ ಬಂಟ್ವಾಳ ಮಂಡಲದ ಅಧ್ಯಕ್ಷರಾದ ಚೆನ್ನಪ್ಪ ಕೋಟ್ಯಾನ್ ರವರು ಮಾತನಾಡಿ ಪಕ್ಷವನ್ನು ಬಲಗೊಳಿಸುವ ನಿಟ್ಟಿನಲ್ಲಿ ಕಾನೂನು ಪ್ರಕೋಷ್ಠದ ಅವಶ್ಯಕತೆ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಬಿಜೆಪಿ ಬಂಟ್ವಾಳ ಮಂಡಲದ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಭಜರವರು ಸಂಘಟನಾತ್ಮಕ ಕಾರ್ಯಗಳ ಬಗ್ಗೆ ವಿವರಿಸಿದರು.
ಬಿಜೆಪಿ ಬಂಟ್ವಾಳ ಮಂಡಲದ ಕಾನೂನು ಪ್ರಕೋಷ್ಠದ ಸಂಚಾಲಕರಾದ ವೀರೇಂದ್ರ ಎಂ ಸಿದ್ದಕಟ್ಟೆಯವರು ಬಂಟ್ವಾಳ ಮಂಡಲದ ಕಾನೂನು ಪ್ರಕೋಷ್ಠದ ನೂತನ ಪದಾಧಿಕಾರಿಗಳ ಘೋಷಣೆ ಮಾಡಿದರು. ಸದಸ್ಯರಾಗಿ ಶ್ರೀ ಕೃಷ್ಣ, ಪ್ರಜ್ವಲ್ ಆಚಾರ್ಯ, ನಿತಿನ್, ಶಿವಾನಿ ಮತ್ತು ಶ್ರುತಿ ಕೆ ನಾವಿಲರವರನ್ನು ಘೋಷಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಕಾನೂನು ಪ್ರಕೋಷ್ಠದ ಪ್ರಭಾರಿ ಪುರಂದರ ಶೆಟ್ಟಿ ಬಳ್ಯ ಮತ್ತು ಕಾನೂನು ಪ್ರಕೋಷ್ಠ ಬಂಟ್ವಾಳ ಮಂಡಲದ ಸಹ ಸಂಚಾಲಕರಾದ ರಮೇಶ್ ಕೆ ಮಠದ ಮೂಲೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವೀರೇಂದ್ರ ಎಂ ಸಿದ್ದಕಟ್ಟೆ ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀ ಕೃಷ್ಣರವರು ಧನ್ಯವಾದ ಸಮರ್ಪಿಸಿದರು.


