Thursday, June 4, 2026
Homeಕರಾವಳಿಬಂಟ್ವಾಳದ ರಾಯಿಯಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ

ಬಂಟ್ವಾಳದ ರಾಯಿಯಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ

- Advertisement -
- Advertisement -

ಬಂಟ್ವಾಳ; 2023ರ ಧರ್ಮ ಯುದ್ಧಕ್ಕೆ ದಿನ ನಿಗದಿಯಾಗಿದ್ದು ಯುದ್ಧದಲ್ಲಿ ಗೆಲ್ಲಲು ಮಾನಸಿಕವಾಗಿ ಸಿದ್ದರಾಗಿ,ಚುನಾವಣೆಯವರೆಗೆ ವಿರಮಿಸದೆ ಶಕ್ತಿ ಮೀರಿ ಕೆಲಸಮಾಡಿ ಎಂದು ಶಾಸಕ ರಾಜೇಶ್ ನಾಯ್ಕ್ ಅವರು ತಿಳಿಸಿದರು. ರಾಯಿ ಶಕ್ತಿ ಕೇಂದ್ರದ ಸಂತೋಷ್ ಗೋಳಿತೊಟ್ಟು ಎಂಬವರ ಮನೆಯಲ್ಲಿ ಪ್ರಮುಖ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ರಾಯಿ ಬಿಜೆಪಿಗೆ ಶಕ್ತಿ ನೀಡುವ ಗ್ರಾಮವಾಗಿದ್ದು, ಈ ಬಾರಿಯ ಚುನಾವಣೆಯಲ್ಲಿ ಅತ್ಯಂತ ಅಧಿಕ ಮತಗಳನ್ನು ನೀಡಿ ಬಂಟ್ವಾಳ ಕ್ಷೇತ್ರದ ಮಹತ್ತರವಾದ ಅಭಿವೃದ್ಧಿಗೆ ಕಾರಣರಾಗುವಂತೆ ಅವರು ಮನವಿ ಮಾಡಿದರು.

  ಈ ಸಂದರ್ಭದಲ್ಲಿ ರಾಜ್ಯ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ, ಕ್ಷೇತ್ರದ ಸಮಿತ ಅಧ್ಯಕ್ಷ ದೇವಪ್ಪ ಪೂಜಾರಿ, ಕಾರ್ಯದರ್ಶಿ ರಮನಾಥ ರಾಯಿ, ಮಹಾಶಕ್ತಿ  ಕೇಂದ್ರದ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಪ್ರಭು, ಗ್ರಾಮಪಂಚಾಯತ್ ಅಧ್ಯಕ್ಷೆ ರತ್ನ, ಸದಸ್ಯರಾದ ಸಂತೋಷ್ ರಾಯಿಬೆಟ್ಟು, ಉಷಾ ಸಂತೋಷ್, ಯಶೋಧ,  ಬೂತ್ ಅಧ್ಯಕ್ಷರಾದ ಸಂತೋಷ್ ಗೋಳಿತ್ತಬೆಟ್ಟು, ಶಿವಪ್ರಸಾದ್, ಶಕ್ತಿ ಕೇಂದ್ರದ ಪ್ರಮುಖ್ ಮದುಕರ ಬಂಗೇರ ಮತ್ತಿತರರು ಉಪಸ್ಥಿತರಿದ್ದರು.

- Advertisement -

Latest News

error: Content is protected !!