Thursday, June 25, 2026
Homeತಾಜಾ ಸುದ್ದಿಬೆಳ್ಳಿ ವಸ್ತು, ಆಭರಣಗಳಿಗಿನ್ನು ಬಿಐಎಸ್ ಹಾಲ್‌ಮಾರ್ಕ್‌, ಹೆಚ್ ಯುಐಡಿ ಕಡ್ಡಾಯ

ಬೆಳ್ಳಿ ವಸ್ತು, ಆಭರಣಗಳಿಗಿನ್ನು ಬಿಐಎಸ್ ಹಾಲ್‌ಮಾರ್ಕ್‌, ಹೆಚ್ ಯುಐಡಿ ಕಡ್ಡಾಯ

- Advertisement -
- Advertisement -

ನವದೆಹಲಿ: ಕೇಂದ್ರ ಸರ್ಕಾರ ಬೆಳ್ಳಿ ಮತ್ತು ಬೆಳ್ಳಿ ಆಭರಣಗಳ ಗುಣಮಟ್ಟ ಕಾಪಾಡುವಲ್ಲಿ ಬಿಐಎಸ್ ಹಾಲ್‌ಮಾರ್ಕ್‌ ಮತ್ತು ಹೆಚ್ ಯುಐಡಿ ಯನ್ನು ಕಡ್ಡಾಯಗೊಳಿಸಿದೆ.

ಬೆಳ್ಳಿಯ ಗುಣಮಟ್ಟದಲ್ಲಿ ಅತ್ಯುತ್ತಮ ಸುಧಾರಣೆ ತರುವ ನಿಟ್ಟಿನಲ್ಲಿ ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಈ ಕ್ರಮ ಕೈಗೊಂಡಿದೆ. ಬಿಐಎಸ್ ಹಾಲ್‌ಮಾರ್ಕ್‌ ಮಾಡಿದ ಪ್ರತಿ ಬೆಳ್ಳಿ ವಸ್ತು, ಆಭರಣಗಳ ಮೇಲೆ ಹೆಚ್ ಯುಐಡಿ ಕಡ್ಡಾಯಗೊಳಿಸಲಾಗಿದೆ.

ಪ್ರಸ್ತುತದಲ್ಲಿ 17.35 ಲಕ್ಷಕ್ಕೂ ಹೆಚ್ಚು ಬೆಳ್ಳಿ ವಸ್ತುಗಳು ಹೆಚ್ ಯುಐಡಿ -ಹಾಲ್‌ಮಾರ್ಕ್‌ ಆಗಿವೆ. ಬೆಳ್ಳಿಯ ಪರಿಶುದ್ಧತೆಯಿಂದ ಬೆಳ್ಳಿ ಖರೀದಿ ನಂತರವೂ ಪಾರದರ್ಶಕತೆ ಕಾಪಾಡಲೆಂದು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಸಚಿವ ಪ್ರಹ್ಲಾದ್ ಜೋಷಿ ತಿಳಿಸಿದ್ದಾರೆ.

ಕೇಂದ್ರ ಗ್ರಾಹಕ ಇಲಾಖೆ ಬೆಳ್ಳಿಗೆ ಬಿಐಎಸ್ ಮಾನದಂಡವನ್ನು ಪರಿಷ್ಕೃತಗೊಳಿಸಿದ್ದು, ಈವರೆಗೆ ಇದ್ದ 5 ಶ್ರೇಣಿಗಳನ್ನು 7ಕ್ಕೆ ವಿಸ್ತರಿಸಲಾಗಿದೆ. ಅದರಂತೆ ಇದೀಗ ಈ ಮಾನದಂಡವು ಒಟ್ಟು 7 ಪರಿಶುದ್ಧತೆ ಶ್ರೇಣಿಗಳನ್ನು ಒಳಗೊಂಡಿದೆ. ಇದರಲ್ಲಿ 958 ಮತ್ತು 999 ಎರಡು ಹೊಸ ಶ್ರೇಣಿಗಳನ್ನು ಸೃಷ್ಟಿಸಲಾಗಿದೆ. ಒಟ್ಟಾರೆ 800, 835, 925, 958 (ಹೊಸ), 970, 990 ಮತ್ತು 999(ಹೊಸ) ಶ್ರೇಣಿಗಳಿವೆ.

ಗ್ರಾಹಕರು ಆಭರಣದಲ್ಲಿ ನಮೂದಿಸಿರುವ ಹೆಚ್ ಯುಐಡಿ ಮೂಲಕ ಬೆಳ್ಳಿಯ ಪರಿಶುದ್ಧತೆ, ಆಭರಣದ ಪ್ರಕಾರ, ಹಾಗೂ ಬೆಳ್ಳಿ ವಸ್ತುಗಳಿಗೆ ಹಾಲ್‌ಮಾರ್ಕ್‌ ಮಾಡಿದ ಆಭರಣ ವ್ಯಾಪಾರಿಯ ವಿವರ ಮತ್ತು ಮೌಲ್ಯಮಾಪನ, ಹಾಲ್‌ಮಾರ್ಕ್‌ ಮಾಡಿದ ಕೇಂದ್ರದ ವಿವರವನ್ನೆಲ್ಲವನ್ನೂ ಪಡೆಯಬಹುದಾಗಿದೆ

- Advertisement -

Latest News

error: Content is protected !!