- Advertisement -
![]()
- Advertisement -
ಬೆಳ್ತಂಗಡಿ : ಉದಯ ಪೂಜಾರಿ ಬಳ್ಳಾಲ್ ಬಾಗ್ ಸ್ಥಾಪಕ ಅಧ್ಯಕ್ಷತೆಯ ಬಿರುವೆರ್ ಕುಡ್ಲ ಬೆಳ್ತಂಗಡಿ ಘಟಕದ 52ನೇ ಸೇವಾ ಯೋಜನೆಯನ್ನು ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಗರ್ಡಾಡಿ ನಿವಾಸಿ ಶ್ರೀಮತಿ ಉಮಾವತಿ ಯವರ ಪುತ್ರಿ ಪ್ರಜ್ಞಾ ಕೆ(5ವರ್ಷ )ಇವರು ಅಂಗ ವೈಕಲ್ಯತೆಗೆ ತುತ್ತಾಗಿ ಕೈ ಕಾಲುಗಳಲ್ಲಿ ಸ್ವಾಧೀನ ಕಳೆದುಕೊಂಡಿದ್ದು, ಈ ಮಗುವಿನ ಆರೈಕೆ ಯನ್ನು ತಾಯಿಯೇ ಮಾಡುತ್ತಾ ಜೀವನ ನಡೆಸುವುದು ಕಷ್ಟವಾಗಿದೆ ಎಂದು ಬಿರುವೆರ್ ಕುಡ್ಲ ಬೆಳ್ತಂಗಡಿ ಘಟಕಕ್ಕೆ ಮನವಿಯನ್ನು ಮಾಡಿರುವುದರಿಂದ ಘಟಕದಿಂದ 15,000 ರೂಪಾಯಿ ಮೊತ್ತವನ್ನು ಘಟಕದ ಸದಸ್ಯರಾದ ವಿನೋದ್ ಶೆಣೈ ಮದ್ದಡ್ಕ ಇವರು ಏ.5 ರಂದು ನೀಡಿದರು.
ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರು ರಾಜೇಶ್ ಕೋಟ್ಯಾನ್ ಉಜಿರೆ,ಸುರೇಂದ್ರ ಕೋಟ್ಯಾನ್ ಬೆಳ್ತಂಗಡಿ,ಸ್ನೇಕ್ ಅಶೋಕ್ ಬೆಳ್ತಂಗಡಿ, ರಾಜೇಂದ್ರ ಗರ್ಡಡಿ ಕೋಶಾಧಿಕಾರಿ ಹರೀಶ್ ಕೋಟ್ಯಾನ್ ಮದ್ದಡ್ಕ ಉಪಸ್ಥಿತರಿದ್ದರು.
- Advertisement -


