Saturday, May 18, 2024
Homeಕರಾವಳಿಕಾಸರಗೋಡುಪಕ್ಕದ ರಾಜ್ಯ ಕೇರಳಕ್ಕೆ ಕಾಲಿಟ್ಟ ಹಕ್ಕಿ ಜ್ವರ: 12 ಸಾವಿರ ಬಾತುಕೋಳಿಗಳು ಸಾವು

ಪಕ್ಕದ ರಾಜ್ಯ ಕೇರಳಕ್ಕೆ ಕಾಲಿಟ್ಟ ಹಕ್ಕಿ ಜ್ವರ: 12 ಸಾವಿರ ಬಾತುಕೋಳಿಗಳು ಸಾವು

spot_img
- Advertisement -
- Advertisement -

ಕೇರಳ : ನಿನ್ನೆ ರಾಜಸ್ಥಾನದಲ್ಲಿ 400ಕ್ಕೂ ಹೆಚ್ಚು ಕಾಗೆಗಳು ಹಕ್ಕಿಜ್ವರದಿಂದಾಗಿ ಸಾವನ್ನಪ್ಪಿದ್ದವು. ಇದೀಗ ನಮ್ಮ ನೆರೆಯ ರಾಜ್ಯ ಕೇರಳದಲ್ಲೂ ಹಕ್ಕಿ ಜ್ವರದಿಂದಾಗಿ 12 ಸಾವಿರ ಬಾತುಕೋಳಿಗಳು ಸಾವನ್ನಪ್ಪಿದ್ದು ಆತಂಕ ಮೂಡಿಸಿವೆ.  ಅಲ್ಲದೇ ರಾಜ್ಯಕ್ಕೂ ಹಕ್ಕಿ ಜ್ವರದ ಭೀತಿ ಎದುರಾಗಿದೆ.

ಕಳೆದ ಶನಿವಾರ ರಾಜಸ್ಥಾನದಲ್ಲಿ ಹಕ್ಕಿಜ್ವರದಿಂದಾಗಿ ಝಾಲಾವರ್ ನಲ್ಲಿ 25, ಬಾರಾದಲ್ಲಿ 19 ಮತ್ತು ಕೋಟಾದಲ್ಲಿ 22 ಕಾಗೆಗಳು ಮೃತಪಟ್ಟಿವೆ. ಭಾನುವಾರದಂದು ‘ಕೋಟಾದಲ್ಲಿ ಇದುವರೆಗೆ 47 ಕಾಗೆಗಳು, ಝಾಲಾವರ್ ನಲ್ಲಿ 100 ಮತ್ತು ಬರಾನ್ ನಲ್ಲಿ 72 ಕಾಗೆಗಳು ಮೃತಪಟ್ಟಿವೆ. ಜೋಧಪುರದಲ್ಲಿ 152 ಕಾಗೆಗಳು ಸತ್ತಿವೆ.

ಇಂದು ಕೇರಳದ ಅಲಪ್ಪುಳ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ಹಕ್ಕಿ ಜ್ವರ ವೈರಸ್ ಪತ್ತೆಯಾಗಿದೆ. ಎರಡು ಜಿಲ್ಲೆಗಳಲ್ಲಿ ಹಕ್ಕಿ ಜ್ವರದಿಂದಾಗಿ ಇದುವರೆಗೆ 12,000 ಬಾತುಕೋಳಿಗಳು ಸತ್ತಿವೆ. 36,000ಕ್ಕೂ ಹೆಚ್ಚು ಬಾತುಕೋಳಿಗಳು ಹರಡುವುದನ್ನು ತಪ್ಪಿಸಲು ಅಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.

ಇದೀಗ ರಾಜಸ್ಥಾನ, ಕೇರಳದ ನಂತ್ರ ರಾಜ್ಯಕ್ಕೂ ಹಕ್ಕಿ ಜ್ವರ ಹರಡುವ ಭೀತಿ ಎದುರಾಗಿದೆ. ಕೇರಳದಲ್ಲಿ ಕಾಣಿಸಿಕೊಂಡಿರುವಂತ ಹಕ್ಕಿ ಜ್ವರವು ರಾಜ್ಯಕ್ಕೂ ಕಾಲಿಡಲಿದೆ ಎನ್ನಲಾಗುತ್ತಿದೆ. ಹೀಗಾಗಿ ಅದಕ್ಕೂ ಮೊದಲು ರಾಜ್ಯ ಸರ್ಕಾರ ಮುಂಜಾಗ್ರತಾ ಕ್ರಮ ಕೈಗೊಳ್ಳದಿದ್ದರೇ, ರಾಜ್ಯಕ್ಕೂ ಹಕ್ಕಿ ಜ್ವರ ಹರಡಬಹುದು ಎನ್ನಲಾಗುತ್ತಿದೆ.

- Advertisement -
spot_img

Latest News

error: Content is protected !!