Sunday, May 19, 2024
Homeಕರಾವಳಿಬೆಳ್ತಂಗಡಿಯಿಂದ ಕಳ್ಳತನವಾಗಿದ್ದ ಬೈಕ್ ಉಳ್ಳಾಲದಲ್ಲಿ ಪತ್ತೆ; ಪತ್ತೆಯಾದ ಬೈಕ್ ನೋಡಿ ಮಾಲೀಕನಿಗೆ ಶಾಕ್

ಬೆಳ್ತಂಗಡಿಯಿಂದ ಕಳ್ಳತನವಾಗಿದ್ದ ಬೈಕ್ ಉಳ್ಳಾಲದಲ್ಲಿ ಪತ್ತೆ; ಪತ್ತೆಯಾದ ಬೈಕ್ ನೋಡಿ ಮಾಲೀಕನಿಗೆ ಶಾಕ್

spot_img
- Advertisement -
- Advertisement -

ಬೆಳ್ತಂಗಡಿ : ಮೂರು ತಿಂಗಳ ಹಿಂದೆ ನಿಲ್ಲಿಸಿದ ಬೈಕ್ ಕಳ್ಳತನ ಮಾಡಲಾಗಿದ್ದು. ಇದೀಗ ಬೈಕ್ ಮಾತ್ರ ಸಂಪೂರ್ಣ ಬದಲಾಗಿ ಉಳ್ಳಾಲ ಪೊಲೀಸರು ಪತ್ತೆ ಹಚ್ಚಿ ಮಾಲೀಕನ ಕೈ ಸೇರಿದ್ದಾರೆ. ಮಾಲೀಕ ಬೈಕ್ ನೋಡಿ ಶಾಕ್ ಆಗಿದ್ದಾನೆ.

ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ ಮಾವಿನಕಟ್ಟೆ ನಿವಾಸಿ ರವಿ ಎಂಬವರು ವಿದ್ಯುತ್ ಲೈನ್ ಕೆಲಸಕ್ಕೆ ಹೋಗಲು ಪಲ್ಸರ್ 150 ಬೈಕ್ ನಲ್ಲಿ ಬರುತ್ತಿದ್ದರು. ಬೈಕ್ ನ್ನು ಬೆಳ್ತಂಗಡಿಯ ಬಸ್ ನಿಲ್ದಾಣದ ಬಳಿಯ ಓಣಿಯಲ್ಲಿ ನಿಲ್ಲಿಸಿ ಹೋಗುತ್ತಿದ್ದರು. ಡಿ.22 ರಂದು ಬೆಳಗ್ಗೆ ಎಂದಿನಂತೆ 9:30 ಕ್ಕೆ ಬೈಕ್ ನಿಲ್ಲಿಸಿ ಹೋಗಿದ್ದರು ಸಂಜೆ 6:30 ಕ್ಕೆ ಮನೆಗೆ ತೆರಳಲು ಬೈಕ್ ಬಳಿ ಹೋದಾಗ ಬೈಕ್ ನಾಪತ್ತೆಯಾಗಿತ್ತು.  ಸುತ್ತಮುತ್ತ ಹುಡುಕಾಟ ನಡೆಸಿದರೂ ಪ್ರಯೋಜವಾಗಿರಲಿಲ್ಲ.ಕೊನೆಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಬೈಕ್ ಕಳ್ಳತನ ದೂರು ದಾಖಲಿಸಿದ್ದರು.ಇದೀಗ ಮೂರು ತಿಂಗಳ ಬಳಿಕ ಉಳ್ಳಾಲದಲ್ಲಿ ಮಾಲೀಕನ ಕೈಸೇರಿದೆ‌.

ಇಬ್ಬರು ಯುವಕರು ಉಳ್ಳಾಲದ ರಸ್ತೆಯಲ್ಲಿ ಬೈಕ್ ಚೈನ್ ಕಟ್ಟ್ ಅಗಿ ನಿಲ್ಲಿಸಿ ರಿಪೇರಿಯಾಲ್ಲಿದ್ದರು ಈ ವೇಳೆ ಉಳ್ಳಾಲ ಪೊಲೀಸರು ನೈಟ್ ರೌಂಡ್ಸ್ ಮಾಡುತ್ತಿದ್ದಾಗ ಪೊಲೀಸ್ ವಾಹನ ನೋಡಿ ಬೈಕ್ ಬಿಟ್ಟು ಯುವಕರಿಬ್ಬರು ಪರಾರಿಯಾದರು ಬೈಕ್ ಠಾಣೆಗೆ ತಂದು ಪರಿಶೀಲನೆ ಮಾಡಿದಾಗ ಬೈಕ್ ನಂಬರ್ ಬೇರೆ ಇತ್ತು. ಚಾಸಿ ನಂಬರ್ ಮೂಲಕ ಪರಿಶೀಲನೆ ನಡೆಸಿದಾಗ ಬೆಳ್ತಂಗಡಿಯಿಂದ ಕಳ್ಳತನ ಮಾಡಲಾದ ಬೈಕ್ ಎಂದು ಖಾತರಿಯಾಗಿದೆ. ಉಳ್ಳಾಲ ಪೊಲೀಸರು ಬೆಳ್ತಂಗಡಿ ಪೊಲೀಸರ ಮೂಲಕ ಬೈಕ್ ಮಾಲೀಕ ರವಿಯನ್ನು ಕರೆದು ಬೈಕ್ ಹಸ್ತಾಂತರ ಮಾಡಿದ್ದಾರೆ. ಈ ವೇಳೆ ಬೈಕ್ ನೋಡಿ ಮಾಲೀಕ ಶಾಕ್ ಅಗಿ ಹೋಗಿದ್ದ ಯಾಕೆಂದರೆ ಕಳ್ಳತನವಾಗುವ ವೇಳೆ ಇದ್ದು ರೀತಿಯಲ್ಲಿ ಇಲ್ಲದೆ ಬೈಕ್ ನಿಂದ ಎಲ್ಲವನ್ನೂ ಬದಲಿಸಿ ಹಳೆಯ ಬೈಕ್ ರೀತಿ ಮಾಡಿದ್ದರು

- Advertisement -
spot_img

Latest News

error: Content is protected !!