Sunday, June 7, 2026
Homeಕರಾವಳಿಉಪ್ಪಿನಂಗಡಿ : ರಸ್ತೆ ಕೇಳುವ ನೆಪದಲ್ಲಿ ತಂಡದಿಂದ ದರೋಡೆ

ಉಪ್ಪಿನಂಗಡಿ : ರಸ್ತೆ ಕೇಳುವ ನೆಪದಲ್ಲಿ ತಂಡದಿಂದ ದರೋಡೆ

- Advertisement -
- Advertisement -

ಉಪ್ಪಿನಂಗಡಿ: ಬೈಕ್ ನಲ್ಲಿ ಬಂದ ವ್ಯಕ್ತಿಗಳಿಬ್ಬರು ರಸ್ತೆ ಕೇಳುವ ನೆಪದಲ್ಲಿ ಮೊಬೈಲ್ ಫೋನ್ ಮತ್ತು ದ್ವಿಚಕ್ರ ವಾಹನದ ಕೀ ಯನ್ನು ದರೋಡೆಗೈದ ಘಟನೆ ಶುಕ್ರವಾರ ರಾತ್ರಿ ಉಪ್ಪಿನಂಗಡಿಯ ಸುಬ್ರಹ್ಮಣ್ಯ ಕ್ರಾಸ್ ಬಳಿ ಸಂಭವಿಸಿದೆ.

ಉಪ್ಪಿನಂಗಡಿಯ ಐಡಿಯಲ್ ಚಿಕನ್ ಸೆಂಟರಿನ ಸಿಬ್ಬಂದಿ ಕರಾಯ ನಿವಾಸಿ ದೀಪಕ್ (20) ಎಂಬವರು ದರೋಡೆಗೊಳಗಾದ ವ್ಯಕ್ತಿ.

ಅವರು ಕೋಳಿ ಮಾಂಸ ಮಾರಾಟದ ಹಣ ಸಂಗ್ರಹಣೆಗಾಗಿ ಹೆದ್ದಾರಿ ಬದಿಯ ಹೋಟೇಲೊಂದಕ್ಕೆ ಹೋಗುವ ಸಂದರ್ಭದಲ್ಲಿ ನೆಲ್ಯಾಡಿ ಕಡೆಯಿಂದ ಬೈಕೊಂದರಲ್ಲಿ ಬಂದ ಇಬ್ಬರು ಹಿಂದಿ ಮಿಶ್ರಿತ ಭಾಷೆಯಲ್ಲಿ ಮತನಾಡಿ ಪುತ್ತೂರಿಗೆ ದಾರಿ ಕೇಳಿದ್ದಾರೆಂದೂ, ಆ ಬಳಿಕ ಹಿಂಬದಿ ಸವಾರ ಕೆಳಗಿಳಿದು ದೀಪಕ್ ಕೈಯಲ್ಲಿದ್ದ ಮೊಬೈಲ್ ನ್ನು ಹಾಗೂ ಅವರ ದ್ವಿ ಚಕ್ರ ವಾಹನದ ಕೀಯನ್ನು ಕಿತ್ತೊಯ್ದಿದ್ದಾರೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಲಾಗಿದೆ.

- Advertisement -

Latest News

error: Content is protected !!