Wednesday, June 3, 2026
Homeಅಪರಾಧಮಧ್ವದ ಬಳಿ ಬೈಕ್ ಕಾರು ಅಪಘಾತ; ಬೈಕ್ ಸವಾರ ಬೆಳ್ತಂಗಡಿಯ ಪ್ರದೀಶ್ ಶೆಟ್ಟಿ ಸಾವು

ಮಧ್ವದ ಬಳಿ ಬೈಕ್ ಕಾರು ಅಪಘಾತ; ಬೈಕ್ ಸವಾರ ಬೆಳ್ತಂಗಡಿಯ ಪ್ರದೀಶ್ ಶೆಟ್ಟಿ ಸಾವು

- Advertisement -
- Advertisement -

ಬೆಳ್ತಂಗಡಿ : ಕಾರು ಮತ್ತು ಬೈಕ್ ಅಪಘಾತದಲ್ಲಿ ಬೈಕ್ ಸವಾರ ಬೆಳ್ತಂಗಡಿಯ ಯುವಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದ ಘಟನೆ ಬಂಟ್ವಾಳ ತಾಲೂಕಿನ ಮಧ್ವದಲ್ಲಿ ನಡೆದಿದೆ.

ಬಂಟ್ವಾಳ ತಾಲೂಕಿನ ಕಾವಳಪಡೂರು ಗ್ರಾಮದ ಮಧ್ವ ಅಯ್ಯಪ್ಪ ಸ್ವಾಮಿ ಮಂದಿರದ ಬಳಿ ಕಾರು ಮತ್ತು ಬೈಕ್ ನಡುವೆ ಅಪಘಾತ ನಡೆದಿದ್ದು, ಇದರಲ್ಲಿ ಬೈಕ್ ಸವಾರ ಬೆಳ್ತಂಗಡಿಯ ರಮೇಶ್ ಶೆಟ್ಟಿ ಮತ್ತು ಪ್ರೇಮ ದಂಪತಿಯ ಎರಡನೇ ಪುತ್ರ ಪ್ರದೀಶ್ ಶೆಟ್ಟಿ(27) ಎಂಬಾತ ಸಾವನ್ನಪ್ಪಿದ ಯುವಕ.

ಮಂಗಳೂರಿನಿಂದ ಬೆಳ್ತಂಗಡಿ ಕಡೆಗೆ ಬೈಕ್ಕಿನಲ್ಲಿ ಬರುತಿದ್ದ ವೇಳೆ ಮಂಗಳೂರು ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿಯ ಕಾವಳಕಟ್ಟೆ ಎಂಬಲ್ಲಿ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದು ತಕ್ಷಣ ಸ್ಥಳೀಯರು ಆಸ್ಪತ್ರೆಗೆ ಕೊಂಡು ಹೋಗಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.

ಪ್ರದೀಶ್ ಶೆಟ್ಟಿ ಬೆಳ್ತಂಗಡಿಯ ಮುತ್ತೂಟ್ಟು ಫೈನಾನ್ಸ್ ಸಂಸ್ಥೆಯೊಂದರಲ್ಲಿ ನೌಕರಿಯಲ್ಲಿದ್ದು, ಸಂಸ್ಥೆಯ ಕೆಲಸಕ್ಕಾಗಿ ಮಂಗಳೂರಿಗೆ ತೆರಳಿದ್ದ ಎನ್ನಲಾಗಿದೆ. ಈ ಬಗ್ಗೆ ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!