Monday, June 8, 2026
Homeಕರಾವಳಿನೆಲ್ಯಾಡಿ:‌ ಲಾಂಗ್'ರೈಡ್ ಹೊರಟ ಬೈಕ್'ಗೆ ಡಿಕ್ಕಿ ಹೊಡೆದ ಲಾರಿ, ಸವಾರ ಸಾವು

ನೆಲ್ಯಾಡಿ:‌ ಲಾಂಗ್’ರೈಡ್ ಹೊರಟ ಬೈಕ್’ಗೆ ಡಿಕ್ಕಿ ಹೊಡೆದ ಲಾರಿ, ಸವಾರ ಸಾವು

- Advertisement -
- Advertisement -

ನೆಲ್ಯಾಡಿ: ಲಾರಿ ಹಾಗೂ ಬೈಕ್‌ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟು, ಸಹ ಸವಾರ ಗಂಭೀರ ಗಾಯಗೊಂಡ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಲ್ಯಾಡಿ ಸಮೀಪದ ಎಂಜಿರ‌ ಎಂಬಲ್ಲಿ ಸೋಮವಾರದಂದು ಸಂಭವಿಸಿದೆ.

ಪುತ್ತೂರಿನ ಕುಂಬ್ರದ ‘ಡಾರ್ಕ್ ರೈಡರ್ಸ್’ ಎಂಬ ತಂಡದ 8 ಬೈಕ್ ಗಳು ಇಂದು ಸಕಲೇಶಪುರಕ್ಕೆ ಲಾಂಗ್ ರೈಡ್ ಗೆ ಹೊರಟಿದ್ದರು. ಈ ತಂಡ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಎಂಜಿರ ಮಲ್ನಾಡ್ ಹೊಟೇಲ್ ಸಮೀಪದ ತಿರುವಿನಲ್ಲಿ ಈ ದುರ್ಘಟನೆ ಸಂಭವಿಸಿದೆ. ಬೆಂಗಳೂರಿನಿಂದ ಮಂಗಳೂರು ಕಡೆಗೆ ಹೊಸ ವಾಹನಗಳನ್ನು ಸಾಗಾಟದ ಲಾರಿಗೆ ಅತಿ ವೇಗದಿಂದ ಬರುತ್ತಿದ್ದ ಬೈಕ್ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಬೈಕ್ ನಿಂದ ರಸ್ತೆಗೆ ಎಸೆಯಲ್ಪಟ್ಟ ಬೈಕ್ ಸವಾರನ ಮೇಲೆ ಲಾರಿ ಹರಿದಿದೆ. ಮೃತ ಸವಾರನನ್ನು ಕುಂಬ್ರ ಸಮೀಪದ ಮನೋಜ್ ಎಂದು ಗುರುತಿಸಲಾಗಿದೆ.

ಡಿಕ್ಕಿ ಹೊಡೆದು ಲಾರಿ ಪರಾರಿ
ಈ ದುರ್ಘಟನೆ ನಡೆದ ನಂತರ ಲಾರಿ ಚಾಲಕ ಲಾರಿಯೊಂದಿಗೆ ಸ್ಥಳದಿಂದ ಕಾಲ್ಕಿತ್ತಿದ್ದ. ಕೂಡಲೇ ಕಾರ್ಯಪ್ರವೃತ್ತರಾದ ಸ್ಥಳೀಯ ಅಂಗಡಿಯ ಗಣೇಶ್ ಮತ್ತು ಅವರ ಸ್ನೇಹಿತರು ಲಾರಿಯನ್ನು ಪೆರಿಯಶಾಂತಿ ಬಳಿ ತಡೆದು ಲಾರಿ ಚಾಲಕನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಮತ್ತೊಂದು ಅಪಘಾತ:
ಅಪಘಾತವಾದ ಬೈಕ್ ನ ಹಿಂದಿನಿಂದ ಬರುತ್ತಿದ್ದ ಅದೇ ತಂಡದ ಬೈಕ್ ಸವಾರರು, ಕೂಡಲೇ ಈ ಶಾಕಿಂಗ್ ಸುದ್ದಿಯನ್ನು ಮುಂದೆ ಹೋಗುತ್ತಿದ್ದ ಬೈಕ್ ನವರಿಗೆ ತಿಳಿಸಿದ್ದಾರೆ. ವಿಷಯ ಕೇಳಿ ಕೂಡಲೇ ಹಿಂದಕ್ಕೆ ಬರುತ್ತಿದ್ದ ಒಂದು ಬೈಕ್ ನ ಸವಾರರು ನೇಲ್ಯಡ್ಕದ ಉರ್ನಡ್ಕ ಎಂಬಲ್ಲಿ ಅಪಘಾತವಾಗಿ ಆ ಬೈಕ್ ನ ಇಬ್ಬರಿಗೆ ಗಾಯವಾಗಿದೆ. ಅದರಲ್ಲಿ ಒಬ್ಬನಿಗೆ ಗಂಭೀರವಾಗಿದೆ.

- Advertisement -

Latest News

error: Content is protected !!