Friday, June 5, 2026
Homeಕರಾವಳಿಕಾರ್ಕಳ; ಬೈಕ್ ಮತ್ತು ಟ್ಯಾಂಕರ್ ಮಧ್ಯೆ ಅಪಘಾತ, ವಿದ್ಯಾರ್ಥಿ ಸಾವು

ಕಾರ್ಕಳ; ಬೈಕ್ ಮತ್ತು ಟ್ಯಾಂಕರ್ ಮಧ್ಯೆ ಅಪಘಾತ, ವಿದ್ಯಾರ್ಥಿ ಸಾವು

- Advertisement -
- Advertisement -

ಕಾರ್ಕಳ: ಬೈಕ್ ಮತ್ತು ಟ್ಯಾಂಕರ್ ನಡುವೆ ಅಪಘಾತ ಸಂಭವಿಸಿ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಬಜಗೋಳಿ- ಮಾಳ ಹೆದ್ದಾರಿಯ ಮಾಳ ಚೆಕ್ ಪೋಸ್ಟ್ ಬಳಿ ನಡೆದಿದೆ. ವೈಭವ್ ಮೃತ ವಿದ್ಯಾರ್ಥಿ. ಆತನ ಸ್ನೇಹಿತೆ ಗಂಭೀರ ಗಾಯಗೊಂಡಿದ್ದಾರೆ.


ಮೃತ ವೈಭವ ವೈದ್ಯಕೀಯ ವಿದ್ಯಾರ್ಥಿಯಾಗಿದ್ದು ಮಹಾರಾಷ್ಟ್ರ ಮೂಲದವರಾಗಿದ್ದಾರೆ. ಇಬ್ಬರೂ ಕರಾವಳಿ ಆಯುರ್ವೇದ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ. ಹೊರನಾಡು ದೇವಸ್ಥಾನಕ್ಕೆ ಹೋಗಿ ಬರುವ ವೇಳೆ ಅಪಘಾತ ಸಂಭವಿಸಿದೆ. ವಿದ್ಯಾರ್ಥಿನಿ ಕೋಲಾರ ಮೂಲದವರಾಗಿದ್ದಾರೆ. ವಿದ್ಯಾರ್ಥಿನಿ ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!