Tuesday, April 30, 2024
Homeಕರಾವಳಿಮಂಗಳೂರು: ಬೈಕ್ ಅಪಘಾತ, ಓರ್ವ ಸಾವು, ಮತ್ತೋರ್ವನಿಗೆ ಗಾಯ

ಮಂಗಳೂರು: ಬೈಕ್ ಅಪಘಾತ, ಓರ್ವ ಸಾವು, ಮತ್ತೋರ್ವನಿಗೆ ಗಾಯ

spot_img
- Advertisement -
- Advertisement -

ಮಂಗಳೂರು: ದ್ವಿಚಕ್ರ ವಾಹನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದ ಪರಿಣಾಮ ದ್ವಿಚಕ್ರ ವಾಹನ ಸವಾರ ಮೃತಪಟ್ಟು, ಇನ್ನೋರ್ವ ಗಾಯಗೊಂಡ ಘಟನೆ ಮಂಗಳೂರಿನ ಲೇಡಿಹಿಲ್ ಬಳಿ ನಿನ್ನೆ ಸಂಜೆ ನಡೆದಿದೆ. ಮುಹಮ್ಮದ್ ಹನೀಫ್(35) ಮೃತ ದುರ್ದೈವಿ. ಬಂಟ್ವಾಳದ‌ ನಿವಾಸಿ ಮುಹಮ್ಮದ್ ಖಾಸಿಂ ಗಾಯಗೊಂಡಿದ್ದಾರೆ.

ಈ ಇಬ್ಬರು ಉರ್ವ ಸ್ಟೋರ್‌ನಿಂದ ಲೇಡಿಹಿಲ್ ಕಡೆಗೆ ಬರುತ್ತಿದ್ದಾಗ ಲೇಡಿಹಿಲ್ ವೃತ್ತದ ಬಳಿ ನಿಯಂತ್ರಣ ತಪ್ಪಿ ದ್ವಿಚಕ್ರ ವಾಹನ ಡಿವೈಡರ್‌ಗೆ ಬಡಿದಿದೆ. ಪರಿಣಾಮ ರಸ್ತೆ ಪಕ್ಕದ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ಹನೀಫ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

- Advertisement -
spot_img

Latest News

error: Content is protected !!