Friday, June 26, 2026
Homeತಾಜಾ ಸುದ್ದಿಬಿಗ್‌ ಬಾಸ್‌ ಸೀಸನ್‌ -11ರ ವಿನ್ನರ್ ಹನುಮಂತು ಮನೆಯಲ್ಲಿ ಸೂತಕ

ಬಿಗ್‌ ಬಾಸ್‌ ಸೀಸನ್‌ -11ರ ವಿನ್ನರ್ ಹನುಮಂತು ಮನೆಯಲ್ಲಿ ಸೂತಕ

- Advertisement -
- Advertisement -

ಬೆಂಗಳೂರು: ಖಾಸಗಿ ವಾಹಿನಿಯ ಪ್ರಸಿದ್ಧ ರಿಯಾಲಿಟಿ ಶೋ ಬಿಗ್‌ ಬಾಸ್‌ ಕನ್ನಡ ಸೀಸನ್‌ -11ರ ಟ್ರೋಫಿ ಗೆದ್ದ ಹನುಮಂತು ಮನೆಯಲ್ಲಿ ಇದೀಗ ಸೂತಕದ ವಾತಾವರಣ ನಿರ್ಮಾಣವಾಗಿದೆ.

5 ಕೋಟಿ ವೋಟ್ಸ್‌ ಪಡೆಯುವ ಮೂಲಕ ಹನುಮಂತ ಟ್ರೋಫಿ ಗೆದಿದ್ದು, ಇಷ್ಟು ದೊಡ್ಡ ಸಂಖ್ಯೆಯ ವೋಟ್‌ ಪಡೆದು ‘ಬಿಗ್‌ ಬಾಸ್‌ʼ ಟ್ರೋಫಿ ಗೆದ್ದಿರುವುದು ಕನ್ನಡದಲ್ಲಿ ಇದೇ ಮೊದಲು.

ಹನುಮಂತು ಅವರು ಇನ್ನೇನು ಮನೆಗೆ ಹೋಗಿ, ಊರ ಜನರ ಮುಂದೆ ಸಂಭ್ರಮಿಸಬೇಕೆಂದುಕೊಂಡಿದ್ದರು. ಆದರೆ ಆಗಲೇ ಹನುಮಂತು ಅವರಿಗೆ ಆಘಾತಕಾರಿ ಸುದ್ದಿಯೊಂದು ತಲುಪಿದ್ದು ಅವರು ಚಿಕ್ಕಪ್ಪ ದೇವಪ್ಪ ಎನ್ನುವರು ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಈ ನಿಟ್ಟಿನಲ್ಲಿ ಅವರ ಊರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಈಗಾಗಲೇ ಹನುಮಂತ ಅವರಿಗೆ ವಿಶ್‌ ಮಾಡುವ ಸಲುವಾಗಿ ಅವರ ಗ್ರಾಮಕ್ಕೆ ಅನೇಕರು ಬರುತ್ತಿದ್ದಾರೆ. ಆದರೆ ಅವರನ್ನೆಲ್ಲ ಮನೆಮಂದಿ ವಾಪಾಸ್‌ ಕಳುಹಿಸುತ್ತಿದ್ದಾರೆ ಎನ್ನಲಾಗಿದೆ. 

- Advertisement -

Latest News

error: Content is protected !!