Saturday, May 18, 2024
Homeತಾಜಾ ಸುದ್ದಿನನ್ನನ್ನು 139 ಜನ ರೇಪ್ ಮಾಡಿದ್ದಾರೆಂದು ಹೇಳಿ, ಈಗ ಯೂಟರ್ನ್ ಹೊಡೆದ ಮಹಿಳೆ

ನನ್ನನ್ನು 139 ಜನ ರೇಪ್ ಮಾಡಿದ್ದಾರೆಂದು ಹೇಳಿ, ಈಗ ಯೂಟರ್ನ್ ಹೊಡೆದ ಮಹಿಳೆ

spot_img
- Advertisement -
- Advertisement -

ಹೈದರಾಬಾದ್: ಕೆಲವು ದಿನಗಳ ಹಿಂದೆ ಕಳೆದ ಹಲವು ವರ್ಷಗಳಿಂದ 139 ಜನರು ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಹೇಳುವ ಮೂಲಕ 25 ವರ್ಷದ ಮಹಿಳೆ, ದೇಶದಾದ್ಯಂತ ಸುದ್ದಿಯಾಗಿದ್ದಳು. ಆದರೆ ಈಗ ನನ್ನ ಮೇಲೆ ರೇಪ್ ಆಗಿಲ್ಲ ಎಂದು ಹೇಳುವ ಮೂಲಕ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ನೀಡಿದ್ದಾಳೆ.

ತನ್ನ ಆರೋಪಗಳ ಕುರಿತು ಮಾಧ್ಯಮಗಳ ಎದುರು ಮಾತನಾಡಿರುವ ಆಕೆ, ಬಲವಂತವಾಗಿ ತನ್ನ ದೂರಿನಲ್ಲಿ ಕೆಲ ಪ್ರಮುಖ ವ್ಯಕ್ತಿಗಳ ಹೆಸರನ್ನು ನೀಡಿದ್ದಾಗಿ ಬಹಿರಂಗಪಡಿಸಿದ್ದಾಳೆ. ಅಲ್ಲದೇ ಡಾಲರ್ ಬಾಯ್ ಅಲಿಯಾಸ್ ರಾಜಶೇಖರ್ ರೆಡ್ಡಿ ನನ್ನನ್ನು ಹಿಂಸಿಸಿ, ನನ್ನ ಹೆತ್ತರವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಎಂದು ಆಕೆ ಹೇಳಿದ್ದಾಳೆ. ಪ್ರಕರಣದಲ್ಲಿ ತಪ್ಪಾಗಿ ಹೆಸರಿಸಿದ್ದ ವ್ಯಕ್ತಿಗಳ ಕ್ಷಮೆಯನ್ನು ಕೋರಿದ್ದಾಳೆ.

ಕಳೆದ ವಾರವಷ್ಟೇ 25 ವರ್ಷದ ಮಹಿಳೆ 139 ಜನರ ವಿರುದ್ಧ ಅತ್ಯಾಚಾರ ಹಾಗೂ ಲೈಂಗಿಕ ದೂರು ದಾಖಲಿಸಿದ್ದಳು. ಪ್ರಕರಣ ಬೆಳಕಿಗೆ ಬಂದ ಬಳಿಕ ಭಾರೀ ಸಂಚಲವೇ ಸೃಷ್ಟಿಯಾಗಿತ್ತು. ಹೈದರಾಬಾದ್‍ನ ಪಂಜಾಗುಟ್ಟ ಪೊಲೀಸ್ ಠಾಣೆಗೆ ಆಗಸ್ಟ್ 20 ರಂದು ಆಗಮಿಸಿದ್ದ ಮಹಿಳೆ 42 ಪುಟಗಳ ದೂರು ದಾಖಲಿಸಿ 139 ಮಂದಿಯ ಬಗ್ಗೆ ದೂರಿನಲ್ಲಿ ಉಲ್ಲೇಖಿಸಿದ್ದಳು. ಇದರಲ್ಲಿ ಕೆಲ ಮಹಿಳೆಯರ ಹೆಸರು ಕೂಡ ಇತ್ತು. 2010 ರಿಂದ ತನ್ನ ಮೇಲೆ ಅತ್ಯಾಚಾರ ಎಸಗಿದ್ದು, ಜೊತೆಗೆ ಬೆದರಿಕೆ ಮತ್ತು ಶೋಷಣೆಗೆ ಒಳಗಾಗಿದ್ದೆ ಎಂದು ಹೇಳಿದ್ದಳು. 2010ರಲ್ಲಿ ಮದುವೆಯಾಗುವ ಮುನ್ನ ಹಾಗೂ ಆ ಬಳಿವೂ ತನ್ನ ಮೇಲೆ ದೌರ್ಜನ್ಯ ನಡೆದಿತ್ತು ಎಂದಿದ್ದಳು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಬಳಿಕ ವಿಚಾರಣೆ ಮುಂದುವರಿಸಿದ್ದರು. ದೂರಿನಲ್ಲಿ ನೀಡಿದ್ದ ವ್ಯಕ್ತಿಗಳಲ್ಲಿ ಕೆಲ ವಿದ್ಯಾರ್ಥಿಗಳು, ವೈದ್ಯರು, ಮಾಧ್ಯಮ ಹಾಗೂ ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದವರು ಸೇರಿದಂತೆ ಖ್ಯಾತ ವಾಹಿನಿಯೊಂದರ ಆ್ಯಂಕರ್ ಮೇಲೆ ಕೂಡ ಆರೋಪ ಮಾಡಲಾಗಿತ್ತು. ಸದ್ಯ ಪೊಲೀಸರ ವಿಚಾರಣೆ ಸಂದರ್ಭದಲ್ಲಿ ಮಹಿಳೆ ನೀಡಿದ್ದ ದೂರಿನ ಹಿಂದಿನ ನೈಜ ಸಂಗತಿ ಬೆಳಕಿಗೆ ಬಂದಿದ್ದು, ಪೊಲೀಸರು ಹೆಚ್ಚಿನ ತನಿಖೆಯನ್ನು ಮುಂದುವರಿಸಿದ್ದಾರೆ.

- Advertisement -
spot_img

Latest News

error: Content is protected !!