Thursday, June 4, 2026
Homeಕರಾವಳಿವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ಅಧಿಕಾರಿಗಳಿಂದ ನೋಟಿಸ್‌ ; 15 ದಿನಗಳಿಂದ ಭವಾನಿ ರೇವಣ್ಣ ನಾಪತ್ತೆ?

ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ಅಧಿಕಾರಿಗಳಿಂದ ನೋಟಿಸ್‌ ; 15 ದಿನಗಳಿಂದ ಭವಾನಿ ರೇವಣ್ಣ ನಾಪತ್ತೆ?

- Advertisement -
- Advertisement -

ಬೆಂಗಳೂರು: ಮಹಿಳೆಯೊಬ್ಬರ ಕಿಡ್ಯಾಪ್‌ ಪ್ರಕರಣ ಸಂಬಂಧಪಟ್ಟಂತೆ ನಾಳೆ ಸಂಜೆ ಐದು ಗಂಟೆಗೆ  ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಿದ್ದಾರೆ. ಇದಲ್ಲದೇ ನೋಟಿಸ್‌ನಲ್ಲಿ ನೀವು ಹೊಳೆ ನರಸೀಪುರದಲ್ಲಿರುವ ನಿಮ್ಮ ಮನೆಯಲ್ಲೇ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ ಎನ್ನಲಾಗಿದೆ. ಇದರ ಬೆನ್ನಲ್ಲೇ ಭವಾನಿ ನಿರೀಕ್ಷಣಾ ಜಾಮೀನು ಅರ್ಜಿಗೆ ಸಂಬಂಧಪಟ್ಟಂತೆ ಇಂದು ಮಧ್ಯಾಹ್ನ 2.45ಕ್ಕೆ ನ್ಯಾಯಾಲದಿಂದ ತೀರ್ಪು ಪ್ರಕಟವಾಗಲಿದೆ.

 ಇವೆದಲ್ಲದರ ನಡುವೆ ಕಳೆದ ಹದಿನೈದು ದಿನಗಳಿಂದ ಅವರು ನಾಪತ್ತೆಯಾಗಿದ್ದಾರೆ ಎನ್ನಲಾಗಿದ್ದು, ಅವರು ಯಾರ ಸಂಪರ್ಕಕ್ಕೆ ಸಿಕ್ಕಿಲ್ಲ, ಇದಲ್ಲದೇ ಎಸ್‌ಐಟಿ ಅಧಿಕಾರಿಗಳು ನೀಡಿರುವ ನೋಟಿಸ್‌ಗೆ ಕೂಡ ಅವರು ಉತ್ತರ ನೀಡಿಲ್ಲ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಎಸ್‌ಐಟಿ ಅಧಿಕಾರಿಗಳು ಅವರನ್ನು ಹುಡುಕಾಟ ನಡೆಸುತ್ತಿದ್ದು, ಒಂದು ವೇಳೆ ಇಂದು ಮಧ್ಯಾಹ್ನ ನ್ಯಾಯಾಲವರ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾ ಮಾಡಿದರೆ ಅವರನ್ನು ಬಂಧಿಸಲೇ ಬೇಕು, ಇಲ್ಲವೇ ಜಾಮೀನು ನೀಡಿದರೆ ಅವರು ಎಸ್‌ಐಟಿ ಅಧಿಕಾರಿಗಳು ನೀಡಿರುವ ನೋಟಿಸ್‌ಗೆ ಹಾಜರಾಗಿ ಉತ್ತರಿಸಲೇ ಬೇಕಾಗಿದೆ. ಇವೆಲ್ಲದಕ್ಕೂ ಇಂದು ಮಧ್ಯಾಹ್ನ 2.45ಕ್ಕೆ ನ್ಯಾಯಾಲಯ ನೀಡಲಿರುವ ಆದೇಶದಲ್ಲಿ ಉತ್ತರ ಸಿಗಲಿದೆ.

- Advertisement -

Latest News

error: Content is protected !!