Thursday, June 4, 2026
Homeಉತ್ತರ ಕನ್ನಡಭಟ್ಕಳದಲ್ಲಿ ನಾಲ್ವರನ್ನು ಕೊಲೆಗೈದ ಪ್ರಕರಣ; ಇಬ್ಬರನ್ನು ಬಂಧಿಸಿದ ಪೊಲೀಸರು

ಭಟ್ಕಳದಲ್ಲಿ ನಾಲ್ವರನ್ನು ಕೊಲೆಗೈದ ಪ್ರಕರಣ; ಇಬ್ಬರನ್ನು ಬಂಧಿಸಿದ ಪೊಲೀಸರು

- Advertisement -
- Advertisement -

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಹಾಡವಳ್ಳಿಯಲ್ಲಿ ಆಸ್ತಿಗಾಗಿ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಟ್ಕಳ ಪೊಲೀಸರು ಇಬ್ಬರು ಬಂಧಿಸಿದ್ದಾರೆ.

ಕೊಲೆಯಾದವರ ಪುತ್ರಿ ಜಯಾ ಅಡಿಗ ನೀಡಿರುವ ದೂರಿನ ಮೇರೆಗೆ ಆರೋಪಿಗಳಾದ ಸೊಸೆ ವಿದ್ಯಾಭಟ್, ಶ್ರೀಧರ್ ಭಟ್ ನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಮುಖ ಆರೋಪಿ ವಿನಯ್ ಭಟ್ ನಾಪತ್ತೆಯಾಗಿದ್ದು, ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ.

ಹಾಡವಳ್ಳಿಯಲ್ಲಿ ಒಂದೇ ಕುಟುಂಬದ ನಾಲ್ವರನ್ನು ಮಾರಕಾಸ್ತ್ರದಿಂದ ಬರ್ಬರವಾಗಿ ಕೊಚ್ಚಿ ಕೊಲೆಗೈದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿತ್ತು. ಹಾಡವಳ್ಳಿ ನಿವಾಸಿಗಳಾದ ಶಂಭು ವೆಂಕಟ್ರಮಣ ಭಟ್ಟ (70) ಮಾದೇವಿ ಶಂಭು ಭಟ್ಟ (62), ರಾಜೀವಶಂಭು ಭಟ್ಟ(36), ಕುಸುಮಾ ರಾಜೀವ ಭಟ್ಟ (31) ರನ್ನು ಕೊಲೆ ಮಾಡಲಾಗಿತ್ತುಯ

- Advertisement -

Latest News

error: Content is protected !!