Wednesday, June 3, 2026
Homeಉತ್ತರ ಕನ್ನಡಭಟ್ಕಳ; ತಾಯಿ ಮಗಳು ಒಂದೇ ದಿನ ನೇಣಿಗೆ ಶರಣು

ಭಟ್ಕಳ; ತಾಯಿ ಮಗಳು ಒಂದೇ ದಿನ ನೇಣಿಗೆ ಶರಣು

- Advertisement -
- Advertisement -

ಭಟ್ಕಳ; ತಾಯಿ ಮಗಳು ಒಂದೇ ದಿನ ನೇಣಿಗೆ ಶರಣಾಗಿರುವ ಘಟನೆ ಭಟ್ಕಳ ತಾಲೂಕಿನ ಯಲ್ವಡಿಕವೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಗೋರಿಕಲ್ಲು ಎಂಬಲ್ಲಿ ನಡೆದಿದೆ.

ಗೋರಿಕಲ್ಲಿನ ಕೃಷ್ಣಮ್ಮ ನಾರಾಯಣ ನಾಯ್ಕ (57) ಹಾಗೂ ಮಗಳು ಮಾದೇವಿ ದೊಡ್ಡಯ್ಯ ನಾಯ್ಕ (36) ಮೃತ ದುರ್ದೈವಿಗಳು.

 ಕೃಷ್ಣಮ್ಮ ಅವರ ಮಗಳು ಮಾದೇವಿ ತಾಯಿಯ ಮನೆಯ ಸಮೀಪದಲ್ಲಿಯೇ ವಾಸವಿದ್ದರು. ಅವರಿಗೆ  ಓರ್ವ ಮಗಳು ಹಾಗೂ ಓರ್ವ ಮಗನಿದ್ದಾನೆ. ಮನೆಯವರು ಸಂಬಂಧಿಕರ ಮದುವೆಗೆ ಹೋದಾಗ  ಒಬ್ಬಳೇ ಇದ್ದಾಗ ಮಾದೇವಿ ನೇಣಿಗೆ ಶರಣಾಗಿದ್ದಾರೆ.
ಮಾದೇವಿ ಮನೆಗೆ ಬಂದ ಕೃಷ್ಣಮ್ಮ ಮಗಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿದ್ದನ್ನು ನೋಡಿ ಆಘಾತಕ್ಕೆ ಒಳಗಾಗಿ ಮನೆಗೆ ಹೋಗಿ ತಾನೂ ಕೂಡಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.. ಈ ಮಧ್ಯೆ ಮಾದೇವಿ ಈಕೆಯು ಸಾವಿಗೂ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದು ಅದರಲ್ಲಿ ನನ್ನ ಶವವನ್ನು ತಾಯಿ ಹಾಗೂ ಸಹೋದರ ನೋಡಬಾರದು ಎಂದು ಬರೆದಿಟ್ಟಿದ್ದಾರೆ ಎನ್ನಲಾಗಿದೆ.

ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಕೈಗೊಂಡಿದ್ದು ಇಬ್ಬರ ಸಾವಿಗೆ ನಿಖರ ಕಾರಣ ಮಾತ್ರ ತಿಳಿದು ಬಂದಿಲ್ಲ.ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!