Thursday, June 4, 2026
Homeಕರಾವಳಿಉಡುಪಿಗೋ ಕಳ್ಳರಿಗೆ ಬೆಂಬಲ: ಭಜರಂಗದಳ ಮಾಜಿ ಸಂಚಾಲಕನ ಬಂಧನ

ಗೋ ಕಳ್ಳರಿಗೆ ಬೆಂಬಲ: ಭಜರಂಗದಳ ಮಾಜಿ ಸಂಚಾಲಕನ ಬಂಧನ

- Advertisement -
- Advertisement -

ಉಡುಪಿ: ಗೋ ಹತ್ಯೆ ಬಗ್ಗೆ ಅದೆಷ್ಟೋ ವರ್ಷಗಳಿಂದ ಹೋರಾಡುತ್ತಿರುವ ಹಿಂದೂಪರ ಸಂಘಟನೆಯೊಂದರ ಮುಖಂಡರೊಬ್ಬರೇ ಇದೀಗ ಅಕ್ರಮ ದನದ ಮಾಂಸ ಸಾಗಾಟ ಪ್ರಕರಣದಲ್ಲಿ ಸಿಕ್ಕಿ ಬಿದ್ದಿದ್ದಾರೆ.

 ಗೋವು ಕಳ್ಳರಿಗೆ ಗೋವು ಸಾಗಾಟ ಮಾಡಲು ಸಹಾಯ ಮಾಡುತ್ತಿದ್ದ ಮತ್ತು ಅದಕ್ಕೆ ಪ್ರತಿಯಾಗಿ ಹಣ ಪಡೆಯುತ್ತಿದ್ದ ಕಾರ್ಕಳ ನಗರದ ಭಜರಂಗದಳ ಮಾಜಿ ಸಂಚಾಲಕ ಅನಿಲ್ ಪ್ರಭುವನ್ನು ಪೊಲೀಸರು ಬಂಧಿಸಿದ್ದಾರೆ.

ದನಗಳನ್ನು ಕಳವುಗೈದು ಅದರ ಮಾಂಸ ಮಾರಾಟ ಮಾಡುತ್ತಿದ್ದ ಆರೋಪಿಗಳು ನೀಡಿದ ಸುಳಿವಿನ ಮೇರೆಗೆ ಕಾರ್ಕಳ ಪೊಲೀಸರು ಇವರನ್ನು ಬಂಧಿಸಿದ್ದಾರೆ. ಪೊಲೀಸರಿಂದ ಯಾವುದೇ ರೀತಿ ತೊಂದರೆಯಾಗದಂತೆ ನಾನಿದ್ದೇನೆ ಎಂದು ವಾಗ್ದಾನ ನೀಡಿ, ಅವರಿಂದ ಪಾಲು ಪಡೆಯುತ್ತಿದ್ದರೆಂದು ತನಿಖೆಯ ವೇಳೆ ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿ ಅನಿಲ್ ಪ್ರಭುರನ್ನು ಬಂಧಿಸಿದ್ದಾರೆ.

ಕಾರ್ಕಳದಲ್ಲಿ ದ್ವಿಚಕ್ರ ವಾಹನದಲ್ಲಿ ಅಕ್ರಮ ದನದ ಮಾಂಸ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ, ವಿಚಾರಿಸಿದಾಗ ಈ ವಿಷಯ ಬಹಿರಂಗಗೊಂಡಿತು. ಆರೋಪಿ ಅನಿಲ್ ಪ್ರಭು ಈ ಹಿಂದೆ ಕಾರ್ಕಳ ಭಜರಂಗದಳದ ಸಂಚಾಲಕರಾಗಿದ್ದರು,

- Advertisement -

Latest News

error: Content is protected !!