Saturday, June 6, 2026
Homeಕರಾವಳಿಬಂಟ್ವಾಳದಲ್ಲಿ ಅನಾರೋಗ್ಯದಿಂದ ಭಜರಂಗದಳ ಕಾರ್ಯಕರ್ತ ಸಾವು; ವೈದ್ಯರ ನಿರ್ಲಕ್ಷ್ಯಕ್ಕೆ ಬಲಿಯಾದನೇ ಯುವಕ?

ಬಂಟ್ವಾಳದಲ್ಲಿ ಅನಾರೋಗ್ಯದಿಂದ ಭಜರಂಗದಳ ಕಾರ್ಯಕರ್ತ ಸಾವು; ವೈದ್ಯರ ನಿರ್ಲಕ್ಷ್ಯಕ್ಕೆ ಬಲಿಯಾದನೇ ಯುವಕ?

- Advertisement -
- Advertisement -

ಬಂಟ್ವಾಳ: ಅನಾರೋಗ್ಯದಿಂದ ಭಜರಂಗ ದಳ ಕಾರ್ಯಕರ್ತ ಸಾವನ್ನಪ್ಪಿದ ಘಟನೆ ಮಣಿನಾಲ್ಕೂರು ಗ್ರಾಮದ ನೇಲ್ಯಪಲ್ಕೆ ಎಂಬಲ್ಲಿ ನಡೆದಿದೆ.

ನೇಲ್ಯಪಲ್ಕೆ ನಿವಾಸಿ ನಿತಿನ್ ಪೂಜಾರಿ(3೦) ಮೃತ ಯುವಕ. ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ನಿತಿನ್ ಮೂರು ದಿನಗಳಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ನಿನ್ನೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.ನಿತಿನ್ ಗೆ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಈ ವೇಳೆ ಲಿವರ್ ಸಮಸ್ಯೆಯ ಬಗ್ಗೆ ವೈದ್ಯರು ಹೇಳಿದ್ದಾರೆ.

ಖಾಸಗಿ ಬಸ್ ಚಾಲಕರಾಗಿ ಕೆಲಸ ಮಾಡುತ್ತಿದ್ದ  ನಿತಿನ್ ಅವಿವಾಹಿತರಾಗಿದ್ದರು.ಭಜರಂಗದಳ ಸಂಘಟನೆಗಳಲ್ಲಿ ಸಕ್ರೀಯರಾಗಿದ್ದರು. ಇನ್ನು ನಿತಿನ್ ಸಾವಿನಲ್ಲಿ ವೈದ್ಯರ ನಿರ್ಲಕ್ಷ್ಯದ ಆರೋಪ ಕೇಳಿ ಬಂದಿದೆ.ಈ ಹಿನ್ನೆಲೆ ಮೃತ ನಿತಿನ್ ಶವವನ್ನು ಆಸ್ಪತ್ರೆ ಬಳಿ ಇಟ್ಟು ಜನ ಆಕ್ರೋಶ ವ್ಯಕ್ತಪಡಿಸಿದರು

- Advertisement -

Latest News

error: Content is protected !!