Saturday, April 27, 2024
HomeWorldಟೋಕಿಯೋ ಒಲಿಂಪಿಕ್ಸ್: ಭಾರತಕ್ಕೆ ಮತ್ತೊಂದು ಪದಕ ತಂದ ಭಜರಂಗ್

ಟೋಕಿಯೋ ಒಲಿಂಪಿಕ್ಸ್: ಭಾರತಕ್ಕೆ ಮತ್ತೊಂದು ಪದಕ ತಂದ ಭಜರಂಗ್

spot_img
- Advertisement -
- Advertisement -

ಟೋಕಿಯೊ: ಒಲಂಪಿಕ್ಸ್ ನಲ್ಲಿ ಭಾರತ ಮತ್ತೊಂದು ಸಾಧನೆ ಮಾಡಿದೆ. ನಿರೀಕ್ಷೆಯಂತೆ ಕುಸ್ತಿಯ 65 ಕೆ.ಜಿ ವಿಭಾಗದಲ್ಲಿ ಭಜರಂಗ್ ಪುನಿಯಾ ಕಂಚು ಗೆದ್ದಿದ್ದಾರೆ. ಕಂಚಿಗಾಗಿ ಭಜರಂಗ್ ಪುನಿಯಾ ಹಾಗೂ ಕಜಕಿಸ್ತಾನದ ಡಿ. ನಿಯಾಜ್ಬೆಕೋವ್ ಮುಖಾಮುಖಿಯಾಗಿದ್ದರು.

8-0 ಅಂಕಗಳಿಂದ ಭಜರಂಗ್ ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾರೆ. ಕಜಕಿಸ್ತಾನ ಆಟಗಾರ ಸಾಕಷ್ಟು ಪ್ರಯತ್ನಿಸಿದರೂ ಪೂನಿಯಾ ಅವರಿಗೆ ಒಂದೇ ಒಂದು ಅವಕಾಶವನ್ನು ನೀಡಲಿಲ್ಲ. ಮೊದಲ ಅವಧಿಯಲ್ಲಿ ಭಜರಂಗ್ 2-0 ಮುನ್ನಡೆಯಲ್ಲಿದ್ದರು.

ಎರಡನೇ ಅವಧಿಯಲ್ಲಿ, ಪೂನಿಯಾ ಇನ್ನೂ 4 ಅಂಕಗಳನ್ನು ಅದ್ಭುತ ರೀತಿಯಲ್ಲಿ ಪಡೆದರು. ಕೊನೆಯಲ್ಲಿ 8-0 ಅಂಕದಿಂದ ಗೆಲುವು ಸಾಧಿಸಿದ್ರು.

- Advertisement -
spot_img

Latest News

error: Content is protected !!