Thursday, June 25, 2026
Homeಕರಾವಳಿಭಜನಾ ಸಾಮ್ರಾಟ್ 6 ನೆಯ ಸೀಸನ್ ಧರ್ಮಸ್ಥಳದಿಂದ ಪ್ರಾರಂಭ

ಭಜನಾ ಸಾಮ್ರಾಟ್ 6 ನೆಯ ಸೀಸನ್ ಧರ್ಮಸ್ಥಳದಿಂದ ಪ್ರಾರಂಭ

- Advertisement -
- Advertisement -

ಧರ್ಮಸ್ಥಳ: ವಿಶ್ವಾದ್ಯಂತ ಭಜನೆಯ ಮನೆ ಮಾತಾಗಿರುವ ಶಂಕರ ಟಿ.ವಿ.ಯವರ 6 ನೆಯ ಭಜನಾ ಸ್ಪರ್ದಾ ಕಾರ್ಯಕ್ರಮ ಶ್ರೀ ಧರ್ಮಸ್ಥಳದಿಂದ ಪ್ರಾರಂಭಗೊಂಡಿತು.‌ ಭಜನಾ ಸಾಮ್ರಾಟ್ ಕಾರ್ಯಕ್ರಮವನ್ನು ಪೂಜ್ಯ ಧರ್ಮಾಧಿಕಾರಿ ಶ್ರೀ ಡಿ.ವೀರೆಂದ್ರ ಹೆಗ್ಗಡೆಯವರು ಉದ್ಗಾಟಿಸಿ ಶುಭಾಶಯ ಕೊರಿದರು.

ಧರ್ಮಾಧಿಕಾರಿಗಳು ಮಾತಾಡುತ್ತಾ ಶಂಕರ ಟಿ.ವಿಯು ಭಜನೆಯನ್ನು ವಿಶ್ವಕ್ಕೆ ವ್ಯಾಪಿಸಿ ಮನೆ ಮಂದಿ ನೊಡುವಂತೆ ಮಾಡಿದೆ.ಮನೆ ಮಂದಿ ನೋಡಿ ಆನಂದಿಸುವ ಕಾರ್ಯಕ್ರಮವಾಗಿ ಮೂಡಿ ಬರುತ್ತಿದೆ ಎಂದರು. ಬಹುಮಾನದ ಮೊತ್ತದಿಂದ ಭಜನೆಗೆ ಮೌಲ್ಯ ಬಂದಿದೆ.ಭಜನೆಗೆ ಭಗವಂತನೆ ಸಾಮ್ರಾಟ್.ಸಾಮ್ರಾಟ್ ಬಳಿ ಹೊಗಬೆಕಾದರೆ ಭಕ್ತಿ, ಭಜನೆ ಬೇಕು. ಇದನ್ನು ಶಂಕರ ಟಿ.ವಿ.ಯವರು ಮಾಡುತ್ತಿರುವುದು ಅಭಿನಂದನೀಯ ಎಂದು ಶುಭಕೊರಿದರು.

ರಾಜ್ಯದ 6 ಮುಖ್ಯ ಕಡೆಯಲ್ಲಿ ನಡೆಯಲಿರುವ ಈ ಭಜನಾ ಸಾಮ್ರಾಟ್ ಕಾರ್ಯಕ್ರಮ ‌ಪ್ರಥಮ‌ತಂಡಕ್ಕೆ‌ ರೂ 10 ಲಕ್ಷ ಮತ್ತು ದೇಶದ ವಿವಿಧ ರಾಜ್ಯದಲ್ಲಿ ಸ್ಪರ್ದೆ ನಡೆದು ಪ್ರಥಮ ತಂಡಕ್ಕೆ 50 ಲಕ್ಷ ಬಹಮಾನ‌ ದೊರಕಲಿದೆ. ಇಂದಿನ ಕಾರ್ಯಕ್ರಮದಲ್ಲಿ ದ.ಕ ಜಿಲ್ಲೆಯ ವಿವಿಧ ಭಜನಾ ತಂಡಗಳು ಹಾಜರಾಗಿದ್ದವು.

ಕಾರ್ಯಕ್ರಮ ದಲ್ಲಿ ಕನ್ಯಕುಮಾರಿ ಯುವತಿ ಮಂಡಳಿಯ ಸದಸ್ಯ ಪ್ರಾರ್ಥನೆ ಮಾಡಿದ್ದರು. ಸ್ವಾಗತವನ್ನು ನಿರ್ದೇಶಕರಾದ ಶ್ರೀ ಮತಿ ಮಮತಾರಾವ್ ಮಾಡಿ ಧನ್ಯವಾದ ಭಜನಾ ಪರಿಷತ್ತಿನ ಬಿ.ಜಯರಾ ನೆಲ್ಲಿತ್ತಾಯ ಮಾಡಿದ್ದರು. ಕಾರ್ಯಕ್ರಮ ನಿರ್ವಹಣೆಯನ್ನು ಯೋಜನಾಧಿಕಾರಿ ಶ್ರೀ ಬಾಲಕೃಷ್ಣ ಮಾಡಿದ್ದರು.ಕಾರ್ಯಕ್ರಮದಲ್ಲಿ ಶಂಕರ ಟಿ.ವಿ ಅಧಿಕಾರಿ ಶ್ರೀ ಅರವಿಂದ್ ಮತ್ತು ಕು.ನಿತ್ಯಾ ಹಾಜರಿದ್ದರು

- Advertisement -

Latest News

error: Content is protected !!