Monday, June 30, 2025
Homeಕರಾವಳಿಬೆಳ್ತಂಗಡಿ: ಎರಡು ದಿನಗಳ ಹಿಂದೆ ತಂದೆಯನ್ನು ಕೊಲೆ‌ ಮಾಡಿ ತಲೆಮರೆಸಿಕೊಂಡಿದ್ದ ಮಗ ಕೊನೆಗೂ‌ ಅಂದರ್ !

ಬೆಳ್ತಂಗಡಿ: ಎರಡು ದಿನಗಳ ಹಿಂದೆ ತಂದೆಯನ್ನು ಕೊಲೆ‌ ಮಾಡಿ ತಲೆಮರೆಸಿಕೊಂಡಿದ್ದ ಮಗ ಕೊನೆಗೂ‌ ಅಂದರ್ !

spot_img
- Advertisement -
- Advertisement -

ಬೆಳ್ತಂಗಡಿ: ನಗರದ ಜ್ಯೂನಿಯರ್ ಕಾಲೇಜ್ ಬಳಿಯ ನಿವಾಸಿ ವಾಸು ಸಪಲ್ಯ(66) ರನ್ನು ಕಳೆದ ಸೋಮವಾರ ಬೆಳಗ್ಗೆ ತಲವಾರಿನಿಂದ ಕೊಲೆ‌ ಮಾಡಿ ಪರಾರಿಯಾಗಿದ್ದ ಮಗ ದಯಾನಂದ ಸಪಲ್ಯ (38) ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಕೊನೆ ನಡೆದ ದಿನ 6:30 ರ ಸುಮಾರಿಗೆ ತಂದೆ ಮೇಲೆ ತಲವಾರಿನಿಂದ ಕಡಿದು ಬೆಳಗ್ಗೆ 7 ಗಂಟೆಗೆ KSRTC ಬಸ್ ಮೂಲಕ ಮಂಗಳೂರು ಹೋಗಿದ್ದು ನಂತರ ಮೊಬೈಲ್ ಸ್ವೀಚ್ ಮಾಡಿ ಕೆಲಸಕ್ಕಾಗಿ ತಿರುಗಾಡುತ್ತಿದ್ದ. ನಂತರ ಮಂಗಳೂರಿನ ನಂತೂರು ಬಳಿ ಉದ್ಯಮಿಯ ಬಳಿ ಚಾಲಕನಾಗಿ ಕೆಲಸಕ್ಕೆ ಸೇರಿದ್ದು ಅಲ್ಲಿ ಆತನಿಗೆ ವಸತಿ, ಊಟದ ವ್ಯವಸ್ಥೆ ಕೂಡ ಮಾಡಿಕೊಟ್ಟಿದ್ದರು

ಬಂಧಿತ ಆರೋಪಿ ದಯಾನಂದ

ತನ್ನ ಬಳಿ ಹಣ ಇಲ್ಲದೆ ಕೊನೆಗೆ ಸ್ನೇಹಿತನ ಬಳಿ ಹಣವನ್ನು ಸ್ಟೇಟ್ ಬ್ಯಾಂಕ್ ಬಳಿ ಪಡೆಯುತ್ತಿದ್ದಾಗ ಬೆಳ್ತಂಗಡಿ ಪೊಲೀಸರು ಬಂಧಿಸುವಲ್ಲಿ ಯಶ್ವಸ್ಬಿಯಾಗಿದ್ದಾರೆ. ಬೆಳ್ತಂಗಡಿ ಸರ್ಕಲ್‌ ಇನ್ಸ್‌ಪೆಕ್ಟರ್ ಸಂದೇಶ್.ಪಿ.ಜಿ ನೇತ್ರತ್ವದಲ್ಲಿ ಬೆಳ್ತಂಗಡಿ ಪಿಎಸ್ಐ ನಂದಕುಮಾರ್‌ ತಂಡದ ಇಬ್ರಾಹಿಂ ಗರ್ಡಾಡಿ, ವೆಂಕಟೇಶ್, ಲತೀಫ್ ಘಟನೆ ನಡೆದ ದಿನದಿಂದ ಸತತ ಎರಡು ದಿನಗಳಿಂದ ಕಾರ್ಯಾಚರಣೆ ನಡೆಸಿ ಬುಧವಾರ ಸಂಜೆ ಬಂಧಿಸುವಲ್ಲಿ ಯಶ್ವಸ್ಬಿಯಾಗಿದ್ದಾರೆ.

ಒಬ್ಬನೇ ತಲವಾರಿನಿಂದ ಕೊಲೆ
ಮಂಗಳೂರಲ್ಲಿ ಬಂಧಿಸಿ ಬೆಳ್ತಂಗಡಿ ಠಾಣೆಗೆ ಪೊಲೀಸರು ಕರೆತಂದು ‌ವಿಚಾರಣೆ ನಡೆಸಿದಾಗ ತಾನೂ ಒಬ್ಬನೇ ಕೊಲೆ ಮಾಡಿರುವುದು ಬೇರೆ ಯಾರು ಈ ಘಟನೆಯಲ್ಲಿ ಭಾಗಿಯಾಗಿಲ್ಲ. ಅಲ್ಲದೆ ಸ್ಥಳೀಯ ಒಬ್ಬರಿಂದ ಕೆಲಸಮಯದ ಹಿಂದೆ ತಲವಾರು ಮಾಡಿಸಿಕೊಂಡಿದ್ದೇನೆಂದು ತಪ್ಪೋಪ್ಪಿಕೊಂಡಿದ್ದಾನೆ.

ಬಂಧನಕ್ಕೆ ಆರೋಪಿ ಸ್ನೇಹಿತರು ಸಹಾಯ:
ಪ್ರಕರಣ ಸಂಬಂಧ ಬೆಳ್ತಂಗಡಿ ಪೊಲೀಸರು ಆತನ ಮೊಬೈನ್ ನಂಬರ್ ನ ಆಧಾರದಲ್ಲಿ ಆತನ ಸ್ನೇಹಿತರ ಬಗ್ಗೆ ಮಾಹಿತಿ ಕಲೆ ಹಾಕಿ ಪೊಲೀಸ್ ಸಿಬ್ಬಂದಿಗಳಾದ ಇಬ್ರಾಹಿಂ ಗರ್ಡಾಡಿ , ವೆಂಕಟೇಶ್, ಲತೀಫ್ ಮಂಗಳೂರು ತೆರಳಿ ಸ್ನೇಹಿತನ ವಿಚಾರಣೆ ನಡೆಸಿದರು. ಆತ ಬಂದು ಹಣ ಕೇಳಿ ಹೋಗಿದ್ದ ಬಗ್ಗೆ ಮಾಹಿತಿಯನ್ನು ಪೊಲೀಸರಿಗೆ ನೀಡಿದರು. ಅದರಲ್ಲಿ ಭರತ್ ಹಾಗೂ ಪುನೀತ್ ಪೊಲೀಸರ ಜೊತೆ ಇದ್ದು ಪತ್ತೆಗೆ ಸಹಾಯ ನೀಡಿದ್ದರಿಂದ ಆರೋಪಿ ದಯಾನಂದನ ಬಂಧನಕ್ಕೆ ಸಹಕಾರವಾಗಿದೆ.

- Advertisement -
spot_img

Latest News

error: Content is protected !!