Wednesday, June 24, 2026
Homeಕರಾವಳಿಮಂಗಳೂರುಬೆಳ್ತಂಗಡಿ : ತಿಮರೋಡಿ ಮಹೇಶ್ ಶೆಟ್ಟಿ ಗಡಿಪಾರು ಆದೇಶ ಪ್ರಕರಣ; ತಿಮರೋಡಿ ಗಡಿಪಾರು ಬಗ್ಗೆ ಪೊಲೀಸರಿಂದ...

ಬೆಳ್ತಂಗಡಿ : ತಿಮರೋಡಿ ಮಹೇಶ್ ಶೆಟ್ಟಿ ಗಡಿಪಾರು ಆದೇಶ ಪ್ರಕರಣ; ತಿಮರೋಡಿ ಗಡಿಪಾರು ಬಗ್ಗೆ ಪೊಲೀಸರಿಂದ ಮೈಕ್ ಮೂಲಕ ಪ್ರಕಟಣೆ

- Advertisement -
- Advertisement -

ಬೆಳ್ತಂಗಡಿ : ರೌಡಿಶೀಟರ್ ಉಜಿರೆಯ ಮಹೇಶ್ ಶೆಟ್ಟಿ ತಿಮರೋಡಿಯನ್ನು 16-12-2025 ರಿಂದ 16-09-2026 ರವೆಗೆ ಗಡಿಪಾರು (10 ತಿಂಗಳು) ವರೆಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಎರಡನೇ ಭಾರಿಗೆ ಹೈಕೋರ್ಟ್ ಆದೇಶದಂತೆ ಮೊದಲ ಗಡಿಪಾರು ಆದೇಶವನ್ನು ಮರು ಪರಿಶೀಲನೆ ಮಾಡಿ ಮತ್ತೆ ಡಿ.16 ರಂದು ಗಡಿಪಾರು ಮಾಡಿ ಪುತ್ತೂರು ಎ.ಸಿ.ಸ್ಟೆಲ್ಲಾ ವರ್ಗಿಸ್ ಆದೇಶ ಮಾಡಿದ್ದರು.

ಈ ಆದೇಶದ ಬೆನ್ನಲ್ಲೇ ಬೆಳ್ತಂಗಡಿ ಪೊಲೀಸರು ಉಜಿರೆಯಲ್ಲಿರುವ ರೌಡಿಶೀಟರ್ ಮಹೇಶ್ ಶೆಟ್ಟಿ ತಿಮರೋಡಿ ಮನೆಗೆ ಗಡಿಪಾರು ಆದೇಶದ ಪ್ರತಿ ಜಾರಿ ಮಾಡಿ ತಿಮರೋಡಿಯನ್ನು ದಕ್ಷಿಣ ಕನ್ನಡದಿಂದ ಗಡಿಪಾರು ಮಾಡಲು ಡಿ.18 ರಂದು ಬೆಳಗ್ಗೆ ತೆರಳಿದಾಗ ಪೊಲೀಸರು ಬರುವ ಬಗ್ಗೆ ಮೊದಲೇ ಮಾಹಿತಿ ತಿಳಿದು ಮನೆಯಿಂದ ತಲೆಮರೆಸಿಕೊಂಡು ಪರಾರಿಯಾಗಿದ್ದರು.

ಗಡಿಪಾರು ಆದೇಶವಾಗಿ ತಲೆಮರೆಸಿಕೊಂಡು ನಾಪತ್ತೆಯಾಗಿರುವ ರೌಡಿಶೀಟರ್ ತಿಮರೋಡಿ ಮಹೇಶ್ ಶೆಟ್ಟಿ ಬಗ್ಗೆ ಬೆಳ್ತಂಗಡಿ ಪೊಲೀಸರು ಡಿ.18 ರಂದು ಸಂಜೆ ಉಜಿರೆ ಪೇಟೆಯಲ್ಲಿ ಸಾರ್ವಜನಿಕ ಪ್ರಕಟಣೆಯನ್ನು ಮೈಕ್ ಮೂಲಕ ಜನರಿಗೆ ಮಾಹಿತಿ ನೀಡಿದ್ದಾರೆ.

- Advertisement -

Latest News

error: Content is protected !!