Thursday, July 16, 2026
Homeಕರಾವಳಿಮಂಗಳೂರುಬೆಳ್ತಂಗಡಿ : ರಾಜಗೋಪುರ ಸಚಿವರು ಮಾಡಿದ ಉದ್ಘಾಟನೆ ಅಧಿಕೃತ: ಶಾಸಕರ ನೇತೃತ್ವದಲ್ಲಿ ನಡೆಸಿದ್ದು ಅಧಿಕೃತವಲ್ಲ -...

ಬೆಳ್ತಂಗಡಿ : ರಾಜಗೋಪುರ ಸಚಿವರು ಮಾಡಿದ ಉದ್ಘಾಟನೆ ಅಧಿಕೃತ: ಶಾಸಕರ ನೇತೃತ್ವದಲ್ಲಿ ನಡೆಸಿದ್ದು ಅಧಿಕೃತವಲ್ಲ – ಆಡಳಿತ ಮಂಡಳಿ ಸ್ಪಷ್ಟನೆ

- Advertisement -
- Advertisement -

ಬೆಳ್ತಂಗಡಿ : ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಕೇಳ ಕಾಶಿಪಟ್ನ ಇದರ ಜ.17ರಂದು ನಡೆದ ರಾಜ ಗೋಪುರ ಉದ್ಘಾಟನೆ ಕಾರ್ಯಕ್ರಮ ಅಧಿಕೃತವಲ್ಲ, ವ್ಯವಸ್ಥಾಪನಾ ಸಮಿತಿಯವರಿಗೆ ಇದರ ಬಗ್ಗೆ ಮಾಹಿತಿಯೇ ಇರಲಿಲ್ಲ ಮಧ್ಯರಾತ್ರಿ ವೇಳೆ ಇಲ್ಲಿ ಉದ್ಘಾಟನೆ ನಡೆದಿದೆ ಎಂದು ಹೇಳುತ್ತಿದ್ದಾರೆ ಜ.25 ರಂದು ಉಸ್ತುವಾರಿ ಸಚಿವರು ವ್ಯವಸ್ಥಾಪನಾ ಸಮಿತಿ ಹಾಗೂ ಗ್ರಾಮಸ್ಥರ ಉಪಸ್ಥಿತಿಯಲ್ಲಿ ಇದನ್ನು ಅಧಿಕೃತವಾಗಿ ಉದ್ಘಾಟಿಸಿದ್ದಾರೆ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಕಿ ಹರಡುತ್ತಿರುವ ವದಂತಿಗಳು ಸತ್ಯಕ್ಕೆ ದೂರವಾಗಿದೆ ಎಂದು ಕಾಶಿಪಟ್ನ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಕೇಳದ ವ್ಯವಸ್ಥಾಪನಾ ಸಮಿತಿ ಕಾರ್ಯದರ್ಶಿ ಶಂಕರ ಭಟ್ ಬಾಲ್ಯ ಹೇಳಿದರು.

ಅವರು ಜ.28 ರಂದು ಬೆಳ್ತಂಗಡಿ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಕಳೆದ ಜ.17 ಮತ್ತು ಜ.25  ರಂದು ನಡೆದ ಕಾರ್ಯಕ್ರಮಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬೇರೆ, ಬೇರೆ ರೀತಿಯಲ್ಲಿ ಚರ್ಚೆಗಳು ನಡೆಯುತ್ತಿದೆ ಅದಕ್ಕಾಗಿ ಈ ಸ್ವಷ್ಟನೆ ನೀಡುತ್ತಿದ್ದೇವೆ ಎಂದು ತಿಳಿಸಿದರು. 

2022-23ನೇ ಸಾಲಿನಲ್ಲಿ ಶಾಸಕ ಹರೀಶ್ ಪೂಂಜ ಅವರ ಪ್ರಯತ್ನದಿಂದ ಮುಜರಾಯಿ ಇಲಾಖೆ ಮೂಲಕ ರೂ.25 ಲಕ್ಷ ರಾಜಗೋಪುರಕ್ಕೆ ಅನುದಾನ ನೀಡಿದ್ದರು. ಆದರೆ ಅಷ್ಟು ಹಣ ಸಾಕಾಗುವುದಿಲ್ಲ ಎಂದು ಗುತ್ತಿಗೆದಾರರು ಕಾಮಗಾರಿ ಮಾಡಲು ಒಪ್ಪಲಿಲ್ಲ. ಆ ಸಮಯ ಉಳಿದ ಹಣ ನಾವು ಕೊಡುತ್ತೇವೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಮುತುವರ್ಜಿ ವಹಿಸಿ ಒಬ್ಬ ಗುತ್ತಿಗೆದಾರನಿಂದ ಇದರ ಕಾಮಗಾರಿ ಮಾಡಿಸಿದ್ದಾರೆ. ಜ.4 ರಂದು ಸಮಿತಿ ಸಭೆ ನಡೆಸಿ, ಜ.21ಕ್ಕೆ ಮುಜಾರಾಯಿ ಸಚಿವ ರಾಮಲಿಂಗರೆಡ್ಡಿ, ಉಸ್ತುವಾರಿ ಸಚಿವ ದಿನೇಶ್ ಗುಂಡುರಾವ್ ಮತ್ತು ಬೆಳ್ತಂಗಡಿ ಕ್ಷೇತ್ರದ  ಶಾಸಕರರಾದ ಹರೀಶ್ ಪೂಂಜರ ಅಧ್ಯಕ್ಷತೆಯಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಸುವುದೆಂದು ತೀರ್ಮಾನಿಸಲಾಗಿತ್ತು.ಆದರೆ ಜ.25 ರಂದು ಕಾಶಿಪಟ್ನ ಗ್ರಾ.ಪಂ. ಮತ್ತು ಹತ್ತಿರದ ಗ್ರಾಮಗಳ ಕಾಮಗಾರಿ ಉದ್ಘಾಟನೆಗೆ ಜಿಲ್ಲಾ ಉಸ್ತುವಾರಿ ಸಚಿವರು ಬರುವುದರಿಂದ ಆ ದಿನವೇ ನಾವು ದೇವಸ್ಥಾನದ ರಾಜಗೋಪುರ ಉದ್ಘಾಟನೆಗೆ ನಿರ್ಧರಿಸಿದೆವು. ಜ.25 ರಂದು ಸಚಿವ ದಿನೇಶ್ ಗುಂಡೂರಾವ್ ರಾಜಗೋಪುರವನ್ನು ಲೋಕಾರ್ಪಣೆ ಮಾಡಿದ್ದಾರೆ.ಪಂಚಾಯತು ಅಧ್ಯಕ್ಷ ಸತೀಶ್ ಕೆ., ದೇವಸ್ಥಾನ ಅಜಿಲ ಸೀಮೆಗೆ ಒಳಪಟ್ಟಿದ್ದರಿಂದ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾಧ ಡಾ.ಪದ್ಮಪ್ರಸಾದ ಅಜಿಲ ಬಂದಿದ್ದರು. ಅಧ್ಯಕ್ಷೆತೆಯನ್ನು ಶಾಸಕರಾದ ಹರೀಶ್ ಪೂಂಜ ಅವರು ವಹಿಸಬೇಕಾಗಿತ್ತು. ಕಟೀಲು ಅಸ್ರಣ್ಣರು ಆಶೀರ್ವಚನ ಮಾಡಿದ್ದಾರೆ. ರಾಜಗೋಪುರದ ಉದ್ಘಾಟನೆ, ಭೋಜನಾ ಶಾಲೆ, ಅನ್ನಛತ್ರ ಮತ್ತು ಸಭಾ ಭವನಕ್ಕೆ ಸಚಿವರು ಶಿಲಾನ್ಯಾಸ ಮಾಡಿದ್ದಾರೆ ಎಂದು ತಿಳಿಸಿದರು.

ಇದರಲ್ಲಿ ಯಾವುದೇ ಗೊಂದಲವಿಲ್ಲ ಶಾಸಕರು ಈ ಹಿಂದೆ ಉದ್ಘಾಟನೆ ಮಾಡಿದ್ದರೆ ಅದು ನಮಗೆ ಯಾರಿಗೂ ಮಾಹಿತಿಯಿಲ್ಲದೆ ನಡೆದಿದೆ ಎಂದುತಿಳಿಸಿದರು.ಕಾಶಿಪಟ್ನ ಗ್ರಾ.ಪಂ ಅಧ್ಯಕ್ಷ ಸತೀಶ್ ಕುಮಾರ್ ಅವರು ಮಾತನಾಡಿ, ನಾವು ಬೆಂಗಳೂರಿನಲ್ಲಿ ಸಚಿವರನ್ನು ಭೇಟಿ ಮಾಡಿ ಹೊರಗೆ ಬಂದು ತಕ್ಷಣ ನಾನು ನೇರವಾಗಿ ಶಾಸಕರಿಗೆ ಪೋನ್ ಮಾಡಿದೆ, ನಾಲ್ಕು ಸಲ ಪೋನ್ ಮಾಡಿದರೂ ಅವರು ಪೋನ್ ಎತ್ತಿಲ್ಲ. ಆಮಂತ್ರಣ ನೀಡಲು ಅವರ ಮನೆಗೂ ಕೂಡಾ ಹೋಗಿದ್ದೇನೆ ಎಂದು ತಿಳಿಸಿದರು. ಬಿಜೆಪಿ ಪಕ್ಷದ ವತಿಯಿಂದ ದೇವಸ್ಥಾನದ ಮುಂಭಾಗದ ಗದ್ದೆಯಲ್ಲಿ ನಾಟಕ ನಡೆದಿತ್ತು ಅಲ್ಲಯೇ ಶಾಸಕರು ಶಾಸಕರು ಭಾಷಣ ಮಾಡಿದ್ದರು ದ್ವಾರದ ಎದುರು ದೀಪ ಉರಿಸಿರುವುದು ಕಂಡು ಬಂದಿದೆ. ಅದು ದೇವಸ್ಥಾನದ ಅಧಿಕೃತ ಕಾರ್ಯಕ್ರಮವೇ ಅಲ್ಲ.  ಜ.25ರಂದು ನಡೆದ ರಾಜಗೋಪುರ ಉದ್ಘಾಟನೆ ಕಾರ್ಯಕ್ರಮ ಅಧಿಕೃತವಾಗಿದೆ. ನಾವು ಸಚಿವರನ್ನು ಗೌರವಿಸಿದ್ದೇವೆ. ಶಾಸಕರನ್ನು ಗೌರವಿಸಲು ತಯಾರಿ ಮಾಡಿದ್ದೇವು ಎಂದು ತಿಳಿಸಿದರು. 

ಪತ್ರಿಕಾಗೋಷ್ಠಿಯಲ್ಲಿ ಕೇಳ ಅರಮನೆಯ ವಿಕ್ರಮ್ ಕುಮಾರ್ ಜೈನ್, ಸಂಜೀವ ಪೆರಾಡಿ ಭಂಡಶಾಲೆ, ಡಿಎಸ್‌ಎಸ್ ಸಂಚಾಲಕ ಕೃಷ್ಣಪ್ಪ, ಸದಸ್ಯ ರಾಜು, ಉಪಾಧ್ಯಕ್ಷ ಸುಂದರ್ ಎನ್. ಜಯಪ್ರಸಾದ್, ರಾಜೇಶ್ ಶೆಟ್ಟಿ, ಪ್ರವೀಣ್ ಪಿಂಟೋ ಉಪಸ್ಥಿತರಿದ್ದರು.

- Advertisement -

Latest News

error: Content is protected !!