Friday, June 27, 2025
Homeಕರಾವಳಿಬೆಳ್ತಂಗಡಿ: ಸೋಜಾ ಇಲೆಕ್ಟ್ರಾನಿಕ್ಸ್ ಬೆಳ್ಳಿ ಹಬ್ಬ ಸಂಭ್ರಮ - ಸಂಸ್ಥೆಯ ನೌಕರರಿಗೆ ಗಾಯನ ಸ್ಪರ್ಧೆ

ಬೆಳ್ತಂಗಡಿ: ಸೋಜಾ ಇಲೆಕ್ಟ್ರಾನಿಕ್ಸ್ ಬೆಳ್ಳಿ ಹಬ್ಬ ಸಂಭ್ರಮ – ಸಂಸ್ಥೆಯ ನೌಕರರಿಗೆ ಗಾಯನ ಸ್ಪರ್ಧೆ

spot_img
- Advertisement -
- Advertisement -

ಬೆಳ್ತಂಗಡಿ: ಪೇಟೆಯ ಹೆಸರಾಂತ ಗೃಹೋಪಯೋಗಿ ವಸ್ತುಗಳ ಮಳಿಗೆ ಸೋಜಾ ಇಲೆಕ್ಟ್ರಾನಿಕ್ಸ್ ಇವರ ಬೆಳ್ಳಿ ಹಬ್ಬ ಪ್ರಯುಕ್ತ ಸಂಸ್ಥೆಯ ನೌಕರರಿಗೆ ಗಾಯನ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ವಿಜೇತರಾದ ನೌಕರರಿಗೆ ಕ್ರಿಸ್ಟಲ್ ಟ್ರೇಡಿಂಗ್ ವಿತರಕರಾದ ಶ್ರೀ ಕೆಲ್ವಿನ್ ಡಿ ಸೋಜಾ ಇವರ ಪ್ರಾಯೋಜಕತ್ವದಲ್ಲಿ ಗ್ರೀನೆಜ್ ಮಿಕ್ಸರ್ ಗ್ರೈಂಡರ್ ಬಹುಮಾನವಾಗಿ ನೀಡಲಾಯಿತು.

ಈ‌ ಸುಮಧುರ ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತ ಪಾಲುದಾರರಾದ ಆಲ್ಫೋನ್ಸ್ ಫ್ರಾಂಕೋ ಹಾಗೂ ನ್ಯಾಷನಲ್ ಇನ್ಶೂರೆನ್ಸ್ ಕಂಪನಿಯ ಡೆವಲಪ್ಮೆಂಟ್ ಆಫೀಸರ್ ಜೋನ್ ಅರ್ವಿನ್ ಡಿ ಸೋಜಾ ,ಹಾಗೂ‌ ಧೂಮ್ ಧಮಾಕ ಜವಳಿ ಮಳಿಗೆಯ ಮಾಲಕರಾದ ಇಮ್ರಾನ್ ರವರು ಭಾಗವಹಿಸಿದರು.

ನಿಝಾಮ್ ರವರಿಗೆ ಪ್ರಥಮ ಬಹುಮಾನವನ್ನು ಹಾಗೂ ಸ್ವಾತಿ ಮತ್ತು ರಾಝಿಕ್ ರವರಿಗೆ ದ್ವಿತಿಯ ಬಹುಮಾನವನ್ನು ನೀಡಲಾಯಿತು.

ಈ‌ ಕಾರ್ಯಕ್ರಮ ದಲ್ಲಿ ಸಂಸ್ಥೆಯ ಆಡಳಿತ ಅಧಿಕಾರಿ ಲ್ಯಾನ್ಸಿ ಡಿ ಸೋಜಾ ಉಪಸ್ಥಿತರಿದ್ದರು. ವಿಶೇಷವಾಗಿ ನಿರ್ಣಾಯಕರಾದ ಜೋನ್ ಅರ್ವಿನ್ ಡಿ ಸೋಜಾ ಅವರು ಸುಮಧುರ ಗೀತೆಯನ್ನು ಹಾಡುವ ಮೂಲಕ ನೆರೆದಿದ್ದ ಎಲ್ಲರನ್ನು ಮನರಂಜಿಸಿದರು.

ಬೆಳ್ಳಿ ಹಬ್ಬದ ಪ್ರಯುಕ್ತ ವರ್ಷದ ಕಾರ್ಯಕ್ರಮದ ಉದ್ದೇಶವನ್ನು ವೃತ್ತಿ ಬಾಂಧವರಿಗೆ ವಿವರಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು.

- Advertisement -
spot_img

Latest News

error: Content is protected !!