Saturday, June 6, 2026
Homeಕರಾವಳಿಗಿಡ ನೆಡುವ ಮೂಲಕ ಶರತ್ ಮಡಿವಾಳರಿಗೆ ನಮನ

ಗಿಡ ನೆಡುವ ಮೂಲಕ ಶರತ್ ಮಡಿವಾಳರಿಗೆ ನಮನ

- Advertisement -
- Advertisement -

ಬಂಟ್ವಾಳ : ಸ್ವಯಂಸೇವಕ ಸಂಘದ ಸ್ವಯಂಸೇವಕ ಶರತ್ ಮಡಿವಾಳರ ಬಲಿದಾನ ಸ್ಮರಣ ದಿನದ ಅಂಗವಾಗಿ, ಸಜೀಪ ವಲಯದ ಸಂಘ ಪರಿವಾರದ ಕಾರ್ಯಕರ್ತರು, ತಮ್ಮ ತಮ್ಮ ಮನೆ ಮತ್ತು ವಠಾರದಲ್ಲಿ ಗಿಡ ನೆಡುವ ಮೂಲಕ ಹುತಾತ್ಮ ಸ್ವಯಂಸೇವಕ ಶರತ್ ಮಡಿವಾಳರಿಗೆ ನಮನ ಸಲ್ಲಿಸಿದರು.
ಸಜೀಪದ ಸಂಘ ಪರಿವಾರದ ಕಾರ್ಯಕರ್ತರು ಹುತಾತ್ಮ ಸ್ವಯಂಸೇವಕನ ಸ್ಮಾರಕ ಪೀಠದಲ್ಲಿ ಸೇರದೇ ತಮ್ಮ ತಮ್ಮ ಮನೆಗಳಲ್ಲೇ ಶರತ್ ಮಡಿವಾಳರನ್ನು ಮನಃಪೂರ್ವಕವಾಗಿ ಸ್ಮರಿಸುವ ಜೊತೆಗೆ ಕೊರೊನ ವಿರುದ್ಧ ಜಾಗೃತಿ ಮೂಡಿಸಿದರು.
ಹುತಾತ್ಮನ ಬಲಿದಾನದ ದಿನ ಗೌರವಾರ್ಥವಾಗಿ ಪರಿಸರ ಜಾಗೃತಿ ಮತ್ತು ಸಾಮಾಜಿಕ ಜಾಗೃತಿಯನ್ನು ಮೂಡಿಸಿ ಶಿಸ್ತು ಮತ್ತು ಜವಾಬ್ದಾರಿ ತೋರಿದ ಸಜೀಪದ ಸಂಘ ಪರಿವಾರದ ಕಾರ್ಯಕರ್ತರ ಬಗ್ಗೆ ಎಲ್ಲಾ ಕಡೆ ಪ್ರಶಂಸೆ ವ್ಯಕ್ತವಾಗಿದೆ.

- Advertisement -

Latest News

error: Content is protected !!