- Advertisement -
![]()
- Advertisement -
ಬೆಳ್ತಂಗಡಿ: ಕಾರು ಡಿಕ್ಕಿಯಾಗಿ ಸ್ಕೂಟರ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಜ. 24ರಂದು ರಾತ್ರಿ ಮಡಂತ್ಯಾರಿನಲ್ಲಿ ನಡೆದಿದೆ.
ಕಾವಳಮೂಡೂರು ಕಾರಿಂಜ ಪಡಿ ನಿವಾಸಿ ಪದ್ಮನಾಭ ದೇವಾಡಿಗ(45) ಮೃತಪಟ್ಟ ವ್ಯಕ್ತಿ.ಅವರು ಉಪ್ಪಿನಂಗಡಿ ಹೋಟೆಲ್ ಒಂದರಲ್ಲಿ ಸಪ್ಲಾಯರ್ ಕೆಲಸ ಮಾಡುತ್ತಿದ್ದು, ಕರಲಸ ಮುಗಿಸಿ ಮನೆಗೆ ಬರುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಜ.23ರಂದು ರಾತ್ರಿ ಹೋಟೆಲ್ ನಲ್ಲಿ ಕೆಲಸ ಮುಗಿಸಿ ಸುಮಾರು 11.30ರ ವೇಳೆ ಬರುತ್ತಿದ್ದಾಗ ಮಡಂತ್ಯಾರು ಸಮೀಪ ಮಂಗಳೂರಿನಿಂದ ಬರುತ್ತಿದ್ದ ಕಾರು ಅವರು ಸಂಚರಿಸುತ್ತಿದ್ದ ಬೈಕ್ ಗೆ ಡಿಕ್ಕಿಯಾಗಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ
ಮೃತರು ಪತ್ನಿ ಮಕ್ಕಳನ್ನು ಅಗಲಿದ್ದಾರೆ. ಘಟನಾ ಸ್ಥಳಕ್ಕೆ ಪುಂಜಾಲಕಟ್ಟೆ ಪೋಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
- Advertisement -


