Wednesday, May 1, 2024
Homeಕರಾವಳಿಬೆಳ್ತಂಗಡಿ : ಕಲ್ಮಂಜ ಸರಕಾರಿ ಜಾಗದಲ್ಲಿ ಅಕ್ರಮ ಮರ ಕಡಿದ ಪ್ರಕರಣ:ಒಂದು ವರ್ಷದ ಬಳಿಕ ಬೆಳ್ತಂಗಡಿ...

ಬೆಳ್ತಂಗಡಿ : ಕಲ್ಮಂಜ ಸರಕಾರಿ ಜಾಗದಲ್ಲಿ ಅಕ್ರಮ ಮರ ಕಡಿದ ಪ್ರಕರಣ:ಒಂದು ವರ್ಷದ ಬಳಿಕ ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ತ್ಯಾಗರಾಜ್ ಅಮಾನತು

spot_img
- Advertisement -
- Advertisement -

ಬೆಳ್ತಂಗಡಿ : ಅಕ್ರಮವಾಗಿ ಮರ ಕಡಿದು ಸಾಗಾಟ ಮಾಡಿದ ಪ್ರಕರಣ ಸಂಬಂಧಿಸಿದಂತೆ ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ತ್ಯಾಗರಾಜ್ ಹೆಚ್.ಎನ್ ಅವರನ್ನು ಒಂದು ವರ್ಷದ ಹಿಂದೆ ಅಮಾನತು ಮಾಡಲಾಗಿತ್ತು. ಆದ್ರೆ ರಾಜಕೀಯ ಪ್ರಭಾವ ಬಳಸಿ ಅಧಿಕಾರದಲ್ಲಿದ್ದು ಇದೀಗ ಮತ್ತೆ ತನಿಖೆ ನಡೆಸಿ ಅಮಾನತು ಮಾಡುವ ಮೂಲಕ ಆದೇಶ ಹೊರಡಿಸಲಾಗಿದೆ.

ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ಸರ್ವೆ ನಂಬರ್ 237/1ರ 2.30 ಎಕರೆ ಸರಕಾರಿ ಜಾಗದಲ್ಲಿ ಅಕ್ರಮವಾಗಿ ವಿವಿಧ ಜಾತಿಯ ಮರಗಳನ್ನು ಗುರುವಾಯನಕೆರೆ ಮರದ ಉದ್ಯಮಿಯೊಬ್ಬರು ಕಡಿದು ಸಾಗಾಟ ಮಾಡಿದ ಕುರಿತು ದೂರು ನೀಡಿದ್ದು ಅದರಂತೆ ಬೆಳ್ತಂಗಡಿ ಅರಣ್ಯ ಇಲಾಖೆಯಲ್ಲಿ 9-12-2022 ರಂದು ಜಾಗ ನೀಡಿದ ಮನೆ ಮಾಲೀಕ ಮತ್ತು ಗುರುವಾಯನಕೆರೆ ಮರದ ಉದ್ಯಮಿ ಮೇಲೆ ಪ್ರಕರಣ ದಾಖಸಿದ್ದರು. ಈ ಪ್ರಕರಣದಲ್ಲಿ ಬೆಳ್ತಂಗಡಿ ಅರಣ್ಯ ಇಲಾಖೆ ಶಾಮೀಲಾಗಿದ್ದರ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿದ್ದು ಅದರಂತೆ ಮಂಗಳೂರು ಸಂಚಾರಿ ಅರಣ್ಯ ದಳದ ರೇಂಜರ್ ಸಂಧ್ಯಾ ಸಚಿನ್ ಅವರ ನೇತೃತ್ವದಲ್ಲಿ ತನಿಖೆ ನಡೆಸಿ ಹಿರಿಯ ಅಧಿಕಾರಿಗಳಿಗೆ  ವರದಿ ನೀಡಿದ್ದರು. ನಂತರ ಉಪವಲಯ ಅರಣ್ಯಾಧಿಕಾರಿ ಹರಿಪ್ರಸಾದ್ ಮತ್ತು ಅರಣ್ಯ ರಕ್ಷಕ ರಾಜೇಶ್ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿತ್ತು. ನಂತರ ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ತ್ಯಾಗರಾಜ್ ಅವರನ್ನು 4-3-2022 ರಂದು ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳು ಅಮಾನತು ಮಾಡಿದ್ದರು‌.

ತ್ಯಾಗರಾಜ್ ರಾಜಕೀಯ ಪ್ರಭಾವ ಬಳಸಿ ಅಮಾನತು ಆದೇಶವನ್ನು ಹಿಂಪಡೆದುಕೊಂಡು ಕುರ್ಚಿ ಗಟ್ಟಿಮಾಡಿಕೊಂಡಿದ್ದರು. ಇದೀಗ ಇದರ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಲು ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರರು ಸಿಎಂ ಸಿದ್ದಾರಾಮಯ್ಯನವರಲ್ಲಿ ಮನವಿ ಮಾಡಿಕೊಂಡಿದ್ದರು. ಇದೀಗ ಅರಣ್ಯ ಇಲಾಖೆಯಲ್ಲಿ ಪ್ರಕರಣದ ಬಗ್ಗೆ ತನಿಖೆ ನಡೆಸಿ ಜುಲೈ 4 ರಂದು ಇಲಾಖಾ ವಿಚಾರಣೆ ಬಾಕಿ ಇರಿಸಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಜುಲೈ 5 ರಂದು ಮಂಗಳೂರು ಎಸಿಎಫ್ ಶ್ರೀಧರ್ ಬೆಳ್ತಂಗಡಿ ಅರಣ್ಯ ಇಲಾಖೆ ಕಚೇರಿಗೆ ಅಮಾನತು ಆದೇಶ ನೀಡಲು ಖುದ್ದು ಬಂದಾಗ ರೇಂಜರ್ ತ್ಯಾಗರಾಜ್ ಹೆಚ್.ಎನ್ ಕಚೇರಿಯಲ್ಲಿ ಇಲ್ಲದೆ ಸಂಪರ್ಕಕ್ಕೂ ಸಿಗದೆ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಬೆಳ್ತಂಗಡಿ ಅರಣ್ಯ ಇಲಾಖೆಯ ರೇಂಜರ್ ಅಗಿ ಬಂಟ್ವಾಳ ರೇಂಜರ್ ರಾಜೇಶ್ ಬಲ್ಲಿಗಾರ್ ಅವರಿಗೆ ಅಧಿಕಾರ (ಚಾರ್ಜ್) ನೀಡಲಾಗಿದೆ.

ಒಂದು ವರ್ಷಗಳಿಂದ ಅಕ್ರಮ ಮರದ ಕಡಿದ ಪ್ರಕರಣದಲ್ಲಿ ರಾಜಕೀಯ ಪ್ರಭಾವ ಬಳಸಿ ಕಳ್ಳ ಪೊಲೀಸ್ ಆಟ ಆಡುತ್ತಿದ್ದ ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ತ್ಯಾಗರಾಜ್ ಹೆಚ್.ಎನ್ ಕೊನೆಗೂ ಅಮಾನತು ಆಗಿದ್ದಾರೆ.

- Advertisement -
spot_img

Latest News

error: Content is protected !!