Thursday, June 4, 2026
Homeಕರಾವಳಿಮಂಗಳೂರು : ಒಟ್ಟು 36 ಪಿಎಸ್ಐ ಗಳ ವರ್ಗಾವಣೆ; ಬೆಳ್ತಂಗಡಿಯಲ್ಲಿ ಮೂವರು ಸಬ್ ಇನ್ಸ್‌ಪೆಕ್ಟರ್ ಗಳ...

ಮಂಗಳೂರು : ಒಟ್ಟು 36 ಪಿಎಸ್ಐ ಗಳ ವರ್ಗಾವಣೆ; ಬೆಳ್ತಂಗಡಿಯಲ್ಲಿ ಮೂವರು ಸಬ್ ಇನ್ಸ್‌ಪೆಕ್ಟರ್ ಗಳ ವರ್ಗಾವಣೆ

- Advertisement -
- Advertisement -

ಬೆಳ್ತಂಗಡಿ : ಪಶ್ಚಿಮ ವಲಯದ ಒಟ್ಟು 36 ಸಬ್ ಇನ್ಸ್‌ಪೆಕ್ಟರ್(ಪಿಎಸ್ಐ) ಗಳನ್ನು ವರ್ಗಾವಣೆ ಮಾಡಿ ಪಶ್ಚಿಮ ವಲಯ ಉಪ ಮಹಾ ನಿರೀಕ್ಷಕರು ಆದೇಶ ಮಾಡಿದ್ದಾರೆ.

ಬೆಳ್ತಂಗಡಿಯಲ್ಲಿ ವರ್ಗಾವಣೆಯಾಗಿರುವ ಪಿಎಸ್ಐ:

1)  ಬಂಟ್ವಾಳ ಪಿಎಸ್ಐ -3 ಯಾಗಿದ್ದ ಧನರಾಜ್.ಟಿ.ಎಂ ರವರನ್ನು ಬೆಳ್ತಂಗಡಿ ಪೊಲೀಸ್ ಠಾಣೆ ಕಾನೂನು ಮತ್ತು ಸುವ್ಯವಸ್ಥೆ ಪಿಎಸ್ಐ ಖಾಲಿಯಿದ್ದ ಹುದ್ದೆಗೆ ನೇಮಕ‌ ಮಾಡಲಾಗಿದೆ.

2) ಮಂಗಳೂರು ನಗರದಿಂದ ಕರ್ತವ್ಯದಲ್ಲಿದ್ದ ಚಂದ್ರಶೇಖರ.ಎ.ಎಂ ರವರನ್ನು ಬೆಳ್ತಂಗಡಿ ಪೊಲೀಸ್ ಠಾಣೆ ಅಪರಾಧ ವಿಭಾಗದ ಪಿಎಸ್ಐ‌ ನೇಮಕ ಮಾಡಲಾಗಿದೆ.

3) ಬೆಳ್ತಂಗಡಿ ಪೊಲೀಸ್‌ ಠಾಣೆ ಅಪರಾಧ ಪಿಎಸ್ಐ ಅಗಿದ್ದ ಅರ್ಜುನ್ ಹೊರಕೇರಿಯವರನ್ನು ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆ ಪಿಎಸ್ಐ -2 ನೇಮಕ ಮಾಡಿ ಪಶ್ಚಿಮ ವಲಯ ಉಪ ಮಹಾ ನಿರೀಕ್ಷಕರಾದ ಡಾ.ಚಂದ್ರಗುಪ್ತ ಐಪಿಎಸ್ ರವರು ಜುಲೈ 3 ರಂದು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.

- Advertisement -

Latest News

error: Content is protected !!