Monday, June 8, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಪ್ರಸನ್ನ ಎಜುಕೇಷನ್ ಟ್ರಸ್ಟ್ ನಿಂದ ಸರಕಾರಿ ಜಮೀನಿಗಾಗಿ ಪ್ರಸ್ತಾವನೆ;  ಕಂದಾಯ ಇಲಾಖೆಯಿಂದ ಸಾರ್ವಜನಿಕ...

ಬೆಳ್ತಂಗಡಿ : ಪ್ರಸನ್ನ ಎಜುಕೇಷನ್ ಟ್ರಸ್ಟ್ ನಿಂದ ಸರಕಾರಿ ಜಮೀನಿಗಾಗಿ ಪ್ರಸ್ತಾವನೆ;  ಕಂದಾಯ ಇಲಾಖೆಯಿಂದ ಸಾರ್ವಜನಿಕ ಪ್ರಕಟಣೆ ; ಮಂಜೂರಾತಿಗೆ ಸಾರ್ವಜನಿಕರ ವಿರೋಧ

- Advertisement -
- Advertisement -

ಬೆಳ್ತಂಗಡಿ : ಸರಕಾರಿ ಜಮೀನು ತಮ್ಮ ಶಿಕ್ಷಣ ಸಂಸ್ಥೆಗೆ ಮಂಜೂರು ಮಾಡಬೇಕೆಂದು ಸರಕಾರಕ್ಕೆ ಪ್ರಸ್ಥಾವನೆ ಸಲ್ಲಿಸಿರುವ ಬಗ್ಗೆ ಬೆಳ್ತಂಗಡಿ ಕಂದಾಯ ಇಲಾಖೆ ಸಾರ್ವಜನಿಕ ಪ್ರಕಟಣೆ ಹೊರಡಿಸಿದ ಬೆನ್ನಲ್ಲೇ ಮಂಜೂರು ಮಾಡಿಸಲು ಲಾಯಿಲ ಗ್ರಾಮಸ್ಥರ ವಿರೋಧಗಳು ಬರಲು ಆರಂಭವಾಗಿದೆ. ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಪ್ರಸನ್ನ ಎಜುಕೇಷನ್ ಟ್ರಸ್ಟ್(ರಿ) ಇದರ ಅಧ್ಯಕ್ಷ ಮಾಜಿ ಕಾಂಗ್ರೆಸ್ ಸಚಿವರಾಗಿರುವ ಗಂಗಾಧರ ಗೌಡ ಅವರು ಲಾಯಿಲದ 160/1 ರಲ್ಲಿ 3.66 ಎಕ್ರರೆ, 198/2 ರಲ್ಲಿ 3.31 ಎಕ್ರರೆ, 300/1A1 ರಲ್ಲಿ 2.90 ಎಕ್ರರೆ ಸೇರಿ ಒಟ್ಟು 9.87 ಎಕ್ರರೆ ಸರಕಾರಿ ಜಮೀನು ತಮ್ಮ ಟ್ರಸ್ಟ್ ಗೆ ಮಂಜೂರು ಮಾಡುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

ಈ ಸರಕಾರಿ ಜಮೀನು ಮಂಜೂರು ಮಾಡಲು ಮುಂದಿನ ಕ್ರಮ ಕೈಗೊಳ್ಳಲು ತಿಳಿಸಿದಂತೆ ಕಂದಾಯ ಇಲಾಖೆ ಸ್ಥಳ ತನಿಖೆ ಮಾಡಿ ವರದಿ ತಯಾರಿಸಿ ಸಾರ್ವಜನಿಕ ಆಕ್ಷೇಪಣೆಗಳ ಬಗ್ಗೆ ಏ.8 ರಂದು ಪ್ರಕಟಣೆ ಹೊರಡಿಸಿದ್ದಾರೆ. ಮಂಜೂರಾತಿಗೆ ಉದ್ದೇಶಲಾದ ಭೂಮಿಯಲ್ಲಿ ಯಾವುದೇ ವ್ಯಕ್ತಿಗೆ ಅಥವಾ ಸಾರ್ವಜನಿಕರಿಗೆ ಯಾವುದೇ ತರಹದ ಹಕ್ಕು ಸಂಬಂಧಗಳಿದ್ದಲ್ಲಿ, ಇನ್ನಿತರ ಹಿತಾಸಕ್ತಿಗಳಿದ್ದಲ್ಲಿ ಅಥವಾ ಭೂ ಮಂಜೂರಾತಿ ವಿಚಾರದಲ್ಲಿ ಹೇಳಿಕೊಳ್ಳುವಂತಹ ವಿಚಾರಗಳಿದ್ದಲ್ಲಿ ಅಥವಾ ಯಾವುದೇ ತರಹದ ಆಕ್ಷೇಪಣೆಗಳಿದ್ದಲ್ಲಿ. ಈ ಪ್ರಕಟಣೆಯ ದಿನಾಂಕದಿಂದ 15 ದಿನದ ಒಳಗಡೆ ಲಿಖಿತ ಮೂಲಕ ಅವಶ್ಯಕವುಳ್ಳ ಸಾಕ್ಷಾಧಾರಗಳೊಂದಿಗೆ ಬೆಳ್ತಂಗಡಿ ತಾಲೂಕು ತಹಶೀಲ್ದಾರ್ ರವರಿಗೆ ತಿಳಿಸುವುದು. ನಿಗದಿತ ಸಮಯದೊಳಗಾಗಿ ಯಾವುದೇ ಆಕ್ಷೇಪಣೆಗಳು ಬಾರದೇ ಇದ್ದಲ್ಲಿ ಭೂಮಿ ಮಂಜೂರಾತಿಗೆ ಸಾರ್ವಜನಿಕ ಅಭ್ಯಂತರಗಳಿಲ್ಲವೆಂದು ಪರಿಗಣಿಸಿ ಪ್ರಸ್ಥಾವನೆಯನ್ನು ಮುಂದುವರಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸರಕಾರದ ಜಾಗವನ್ನು ಮಂಜೂರು ಮಾಡಲು ಗ್ರಾಮಸ್ಥರ ವಿರೋಧ: ಪ್ರಸನ್ನ ಎಜುಕೇಷನ್ ಟ್ರಸ್ಟ್ ಈ ಹಿಂದೆ ಕೂಡ ಸುಮಾರು 6 ಎಕ್ರರೆ ಸರಕಾರಿ ಜಮೀನು ಸರಕಾರದಿಂದ ಮಂಜೂರು ಮಾಡಿಸಿ ಬೃಹತ್ ಕಟ್ಟಡಗಳನ್ನು ನಿರ್ಮಿಸಿ ಶಿಕ್ಷಣ ನಡೆಸುತ್ತಿದ್ದಾರೆ. ಹೀಗಿರುವಾಗ ಮತ್ತೆ 9 ಎಕ್ರರೆಯಷ್ಟು ಸರಕಾರಿ ಜಾಗವನ್ನು ಮಂಜೂರು ಮಾಡಿಸಿದ್ರೆ ಹಲವು ವರ್ಷಗಳಿಂದ ಮನೆಯಿಲ್ಲದ ಬಡವರು ಎಷ್ಟು ಲಾಯಿಲ ಗ್ರಾಮ ಪಂಚಾಯತ್ ಗೆ ಅರ್ಜಿ ಸಲ್ಲಿಸಿದ್ರೂ ಜಾಗ ಸಿಗದೆ ಬಾಡಿಗೆ ಮನೆಯಲ್ಲಿ ಇನ್ನೂ ಇರುವಂತೆ ಆಗಿದೆ. ಬಡವರಿಗೆ ಒಂದು ನ್ಯಾಯ ಶ್ರೀಮಂತರಿಗೆ ಒಂದು ನ್ಯಾಯ ಇದು ಹೇಗೆ ಸಾಧ್ಯ ಎಂಬ ಪ್ರಶ್ನೆ ಎದ್ದು ಬರುತ್ತಿದೆ. ಸರಕಾರಿ ಜಾಗವನ್ನು ಮಂಜೂರು ಮಾಡದಂತೆ ಲಾಯಿಲ ಗ್ರಾಮಸ್ಥರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಸರಕಾರಿ ಜಾಗವನ್ನು ಮೊದಲು ಒತ್ತುವರಿ ಮಾಡಿಕೊಂಡ ಗಂಗಾಧರ ಗೌಡ್ರು: ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಮೊದಲೇ ಸರಕಾರಿ ಜಾಗವನ್ನು ತಮ್ಮ ಜಾಗವೆಂದು ಒತ್ತುವರಿ ಮಾಡಿಕೊಂಡು ಮರಗಳನ್ನು ಕಡಿದು ಸಮತಟ್ಟು ಮಾಡಿಕೊಂಡಿ ಅನಧಿಕೃತವಾಗಿ ಬ್ಯಾನರ್ ಅಳವಡಿಸಿದ್ದ ಬಗ್ಗೆ ಬೆಳ್ತಂಗಡಿ ತಹಶೀಲ್ದಾರ್ ಸ್ಥಳಕ್ಕೆ ತೆರಳಿ ಪ್ರಸನ್ನ ಶಿಕ್ಷಣ ಸಂಸ್ಥೆಯ ಅನಧಿಕೃತ ಬ್ಯಾನರ್ ತೆಗೆಸಿ ವರದಿ ತಯಾರಿಸಿ ಮುಂದೆ ಜಾಗವನ್ನು ಒತ್ತುವರಿ ಮಾಡದಂತೆ ಎಚ್ಚರಿಕೆ ನೋಟಿಸ್ ನೀಡಿದ್ದರು.

ಸಂಬಂಧಿ ಕಾಂಗ್ರೆಸ್ ಸಚಿವರೊಬ್ಬರಿಂದ ಸರಕಾರಿ ಜಾಗ ಮಂಜೂರು ಮಾಡಿಸಲು ಸರ್ಕಸ್:  ಹೀಗಿರುವಾಗ ಕಾಂಗ್ರೆಸ್ ಮಾಜಿ ಸಚಿವ ಗಂಗಾಧರ ಗೌಡರವರು ತಮ್ಮ ಪತ್ನಿಯ ಸಂಬಂಧಿ ಕಾಂಗ್ರೆಸ್ ಸಚಿವರೊಬ್ಬರ ಮೂಲಕ ಸರಕಾರಿ ಜಾಗವನ್ನು ಪ್ರಸನ್ನ ಎಜುಕೇಷನ್ ಟ್ರಸ್ಟ್ ಗೆ ಮಂಜೂರು ಮಾಡಿಸಲು ಕಳೆದ ಕೆಲ ತಿಂಗಳಿಂದ ಕಚೇರಿಗೆ ತೆರಳಿ ನಾನಾ ರೀತಿಯ ಸರ್ಕಲ್ ನಡೆಸುತ್ತಿದ್ದಾರೆ. ಸರಕಾರಿ ಜಾಗವನ್ನು ಖಾಸಗಿ ಶಿಕ್ಷಣ ಸಂಸ್ಥೆಗೆ ಯಾವ ಕಾನೂನಿನ ಅಡಿಯಲ್ಲಿ ಹೇಗೆ ಕಾಂಗ್ರೆಸ್ ಸರಕಾರ ಮಂಜೂರು ಮಾಡಿಕೊಡುತ್ತದೆ ಎಂದು ಕಾದು ನೋಡಬೇಕಾಗಿದೆ.

- Advertisement -

Latest News

error: Content is protected !!