Friday, June 5, 2026
Homeಕರಾವಳಿಬೆಳ್ತಂಗಡಿ: ಕಲ್ಲು ಜಾರಿ ತಲೆಗೆ ಬಿದ್ದು ಜ್ಯೂ. ಕಾಪಿಕಾಡ್ ಖ್ಯಾತಿಯ ಯುವ ಕಲಾವಿದ ದಾರುಣ ಸಾವು

ಬೆಳ್ತಂಗಡಿ: ಕಲ್ಲು ಜಾರಿ ತಲೆಗೆ ಬಿದ್ದು ಜ್ಯೂ. ಕಾಪಿಕಾಡ್ ಖ್ಯಾತಿಯ ಯುವ ಕಲಾವಿದ ದಾರುಣ ಸಾವು

- Advertisement -
- Advertisement -

ಬೆಳ್ತಂಗಡಿ: ಮನೆಯಲ್ಲಿ ಕೆಲಸ ಮಾಡುತ್ತಿರುವ ಸಂದರ್ಭ ಕಲ್ಲು ಜಾರಿ ಬಿದ್ದು ಯುವ ಕಲಾವಿದ ರಾಘವೇಂದ್ರ ಆಚಾರ್ಯ (38ವ )ದಾರುಣವಾಗಿ ಮೃತಪಟ್ಟ ಘಟನೆ ತಾಲೂಕಿನ ನಾವರದಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ನಾವರ ಗ್ರಾಮದ ಗೊಳಿಕಟ್ಟೆ ನಿವಾಸಿ ರಾಘವೇಂದ್ರ ಆಚಾರ್ಯ ಕಳೆದ ಹಲವು ವರ್ಷಗಳಿಂದ ಕಾವಲಿ ಮಾಡುವ ಕೆಲಸ ಮಾಡುತ್ತಿದ್ದು ಇಂದು ಕೂಡ ಕೆಲಸದಲ್ಲಿ ನಿರತರಾಗಿದ್ದು ಕಲ್ಲು ಜಾರಿ ತಲೆಗೆ ಬಿದ್ದು ಸ್ಥಳದಲ್ಲೇ ಮೃತರಾದರು.

ಊರಿನಲ್ಲಿ ಎಲ್ಲರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದು, ಉತ್ತಮ ನಾಟಕ ಕಲಾವಿದರಾಗಿ ಜ್ಯೂನಿಯಾರ್ ದೇವಿದಾಸ್ ಕಾಪಿಕಾಡ್ ಎಂದೇ ಖ್ಯಾತಿಪಡೆದಿದ್ದರು.

ಇವರು ತಾಯಿ, ಪತ್ನಿ, 2 ಸಣ್ಣ ಮಕ್ಕಳು, ಸಹೋದರ, ಸಹೋದರಿಯನ್ನು ಆಗಲಿದ್ದಾರೆ. ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!