Thursday, June 25, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಮದ್ದಡ್ಕ ಮುಸ್ಲಿಂ ಜಮಾಅತ್ ವತಿಯಿಂದ ರಂಝಾನ್ ಪೂರ್ವ ಸಿದ್ಧತೆ ಉಪನ್ಯಾಸ

ಬೆಳ್ತಂಗಡಿ : ಮದ್ದಡ್ಕ ಮುಸ್ಲಿಂ ಜಮಾಅತ್ ವತಿಯಿಂದ ರಂಝಾನ್ ಪೂರ್ವ ಸಿದ್ಧತೆ ಉಪನ್ಯಾಸ

- Advertisement -
- Advertisement -

ಬೆಳ್ತಂಗಡಿ : ಕರ್ನಾಟಕ ಮುಸ್ಲಿಂ ಜಮಾಅತ್ ಗುರುವಾಯನಕರೆ ಸರ್ಕಲ್ ಸಮಿತಿ ವತಿಯಿಂದ ಮದ್ದಡ್ಕ ಮಸೀದಿ ಸಭಾಭವನದಲ್ಲಿ ಫೆ.1ರಂದು “ಮರ್ ಹಬಾ ಯಾ ರಮಳಾನ್” ಪೂರ್ವ ಸಿದ್ಧತಾ ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಬ್ದುಲ್ ಹಮೀದ್ ಫುರ್ಖಾನಿ ವಹಿಸಿದ್ದರು. ಹಿರಿಯ ವಿದ್ವಾಂಸ ಯಾಕೂಬ್ ಮುಸ್ಲಿಯಾರ್ ದುಅ ನೆರವೇರಿಸಿದರು,ಮದ್ದಡ್ಡ ಜುಮ್ಮಾ ಮಸೀದಿ ಖತೀಬರಾದ ಅಲ್ ಹಾಫಿಳ್ ಮುಈನುದ್ದೀನ್ ರಝಾ ಅಲ್ ಅಮ್ಮದಿ ಉದ್ಘಾಟಿಸಿದರು,ಅಬ್ದುಲ್ ಬಾರಿ ಉಸ್ತಾದ್ ವಿಷಯ ಮಂಡಿಸಿದರು, ಜಮಾಅತ್ ಅಧ್ಯಕ್ಷರಾದ ಅಶ್ರಫ್ ಚಿಲಿಂಬಿ, ಕೆ.ಎಂ.ಜೆ ರಾಜ್ಯ ಸಮಿತಿಯ ಅಬ್ಬೋನು ಮದ್ದಡ್ಕ ,ಹಾಗೂ ಸರ್ಕಲ್ ವ್ಯಾಪ್ತಿಯ ಹಲವಾರು ಗಣ್ಯರು ಉಪಸ್ಥಿತರಿದ್ದರು.ಕೆ.ಎಮ್ ಜೆ ಸರ್ಕಲ್ ಪ್ರಧಾನ ಕಾರ್ಯದರ್ಶಿ ಎನ್ ಎಸ್ ಉಮ್ಮರ್ ಮದ್ದಡ್ಕ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

- Advertisement -

Latest News

error: Content is protected !!