ಬೆಳ್ತಂಗಡಿ: ಮನುಷ್ಯನ ಹುಟ್ಟು ಹೇಗೆ ಪ್ರಮುಖವೋ ಅಷ್ಟೆ ಮಹತ್ವ ಸಾವಿನಲ್ಲೂ ಇದೆ.ಇಂದು ನಿವೇಶನದ ಕೊರತೆಯ ಸಂದರ್ಭದಲ್ಲಿ ಅಂತಿಮ ದಹನಕ್ಕಾಗಿ ಸ್ಮಶಾನದ ಅಗತ್ಯವಿದೆ. ರುದ್ರ ಭೂಮಿಯ ಅಭಿವೃದ್ಧಿಗೆ ರಾಜಕೀಯ ಬಿಟ್ಟು ಎಲ್ಲರು ಕೈಜೋಡಿಸಬೇಕು . ನದಿಯ ತಟದಲ್ಲಿರುವ ರುದ್ರ ಭೂಮಿಯನ್ನು ಇನ್ನು ಅಭಿವೃದ್ದಿ ಮಾಡಬೇಕಿದ್ದು ಈಗಾಗಲೇ ನಗರೋಥ್ಥಾನದಿಂದ 40 ಲಕ್ಷ ರೂ ಮಂಜೂರು ಮಾಡಿದ್ದು ಶಾಸಕರ ಅನುದಾನದಿಂದ ಮತ್ತೆ 5 ಲಕ್ಷ ಮೀಸಲಿಟ್ಟಿದ್ದು ಮುಂದೆ ಅನುದಾನ ಬಂದರೆ ನದಿಗೆ ಇಳಿಯುವ ಮೆಟ್ಟಿಲು ನಿರ್ಮಾಣಕ್ಕೆ ಅನುದಾನ ನೀಡುತ್ತೇನೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ಅವರು ಅ.27 ರಂದು ಸೋಮವಾರ ಪಟ್ಟಣ ಪಂಚಾಯತ್ ಬೆಳ್ತಂಗಡಿ ಮತ್ತು ಹಿಂದೂರುದ್ರಭೂಮಿ ಅಭಿವೃದ್ದಿ ಸಮಿತಿ, ದಾನಿಗಳ ನೆರವಿನಿಂದ ನಿರ್ಮಾಣಗೊಂಡ ಹಿಂದೂ ರುದ್ರ ಭೂಮಿ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಊರಿನ ದೇವಸ್ಥಾನ ಅಭಿವೃದ್ದಿ ಮಾಡಿದಂತೆ ರುದ್ರಭೂಮಿಯ ಅಭಿವೃದ್ದಿ ಮಾಡಬೇಕು. ಮುಂದಿನ ದಿನಗಳಲ್ಲಿ ಅತ್ಯಾಧುನಿಕ ರೀತಿಯಲ್ಲಿ ಅಭಿವೃದ್ಧಿ ಮಾಡಬೇಕಿದೆ ಎಂದರು. ಪಟ್ಟಣ ಪಂಚಾಯತ್ ಅದ್ಯಕ್ಷ ಜಯಾನಂದ ಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ ಅತೀ ಅಗತ್ಯವಾದ ರುದ್ದಭೂಮಿ ಸುಸಜ್ಜಿತವಾಗಿ ನಿರ್ಮಿಸಬೇಕು ಎಂದು ಪ್ರಯತ್ನಿಸಲಾಗಿದ್ದು ಆದರೆ ಈ ಭಾರಿ ನಿರ್ಮಿಸಲು ಸಹಕಾರಿಯಾಯಿತು. ಇದಕ್ಕೆ ಶಾಸಕರು, ದಾನಿಗಳ ಸಹಕಾರವೇ ಕಾರಣ. ಇದರಲ್ಲಿ ಯಾವುದೇ ರಾಜಕೀಯ ಮಾಡಬಾರದು. ಇದು ಸಾರ್ವಜನಿಕರ ಸ್ವತ್ತು. ಮುಂದಿನ ದಿನಗಳಲ್ಲಿ ಇನ್ನು ಇತ್ತಮ ರೀತಿಯಲ್ಲಿ ನಿರ್ಮಿಸಲಾಗುವುದು ಎಂದರು. ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ಉಪಸ್ಥಿತರಿದ್ದರು. ಪಟ್ಟಣ ಪಂಚಾಯತ್ ಉಪಾಧ್ಯಕ್ಷೆ ಗೌರಿ, ಹಿಂದೂರುದ್ರಭೂಮಿ ಅಭಿವೃದ್ದಿ ಸಮಿತಿ ಅಧ್ಯಕ್ಷ ಶಶಿಧರ ಪೈ, ಕೋಶಾಧಿಕಾರಿ ಪುಷ್ಪರಾಜ್ ಶೆಟ್ಟಿ, ಪಟ್ಟಣ ಪಂಚಾಯತ್ ಸದಸ್ಯೆ ರಜನಿ ಕುಡ್ವ ಉಪಸ್ಥಿತರಿದ್ದರು. ಮುಖ್ಯಾಧಿಕಾರಿ ರಾಜೇಶ್ ಸ್ವಾಗತಿಸಿ ಶಶಿಧರ ಪೈ ವಂದಿಸಿದರು. ಇದೇ ಸಂದರ್ಭದಲ್ಲಿ ದಾನಿಗಳನ್ನು ಅಭಿನಂದಿಸಲಾಯಿತು. ಪದ್ಮಕುಲಾಲ್ ಕಾರ್ಯಕ್ರಮ ನಿರೂಪಿಸಿದರು.


