Thursday, September 17, 2026
Homeಕರಾವಳಿಮಂಗಳೂರುಬೆಳ್ತಂಗಡಿ : ನಾಳೆಯಿಂದ ಗಡಾಯಿಕಲ್ಲು ಚಾರಣಕ್ಕೆ ಅವಕಾಶ

ಬೆಳ್ತಂಗಡಿ : ನಾಳೆಯಿಂದ ಗಡಾಯಿಕಲ್ಲು ಚಾರಣಕ್ಕೆ ಅವಕಾಶ

- Advertisement -
- Advertisement -

ಬೆಳ್ತಂಗಡಿ: ತಾಲೂಕಿನ ಇತಿಹಾಸ ಪ್ರಸಿದ್ಧ ಗಡಾಯಿಕಲ್ಲು ಚಾರಣಕ್ಕೆ ಪ್ರವಾಸಿಗರಿಗೆ ಸೆ.೧೭ರಿಂದ ಪ್ರವೇಶಾತಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಬೆಳ್ತಂಗಡಿ ವನ್ಯಜೀವಿ ವಿಭಾಗ ಪ್ರಕಟಣೆಯಲ್ಲಿ ತಿಳಿಸಿದೆ.

ಮಳೆಗಾಲದಲ್ಲಿ ಕಲ್ಲುಗಳು ಜಾರುವ ಕಾರಣ ಪ್ರವೇಶ ನಿಷೇಧ ಹೇರಲಾಗಿತ್ತು ಬೇಸಿಗೆ ಕಾಲದಲ್ಲಿ ಬೆಂಕಿ ಪ್ರಕರಣ, ಕಾಡ್ಗಿಚ್ಚು ಇತ್ಯಾದಿ ಅನಾಹುತಗಳು ನಡೆಯದಂತೆ ಹಾಗೂ ಹುಲಿಗಣತಿ ಹಿನ್ನೆಲೆಯಲ್ಲಿ ಪ್ರವಾಸಿಗರ ಪ್ರವೇಶಕ್ಕೆ ನಿಷೇಧ ಹೇರಲಾಗಿತ್ತು. ಜೂ.೧ ರಿಂದ ಪ್ರವಾಸಿಗರ ವೀಕ್ಷಣೆಗೆ ತೆರೆದುಕೊಂಡು ಮೊದಲ ವಾರಾಂತ್ಯದ ರವಿವಾರ ಜೂ.೭ರಂದು ೧೦೦೦ಕ್ಕೂ ಹೆಚ್ಚು ಮಂದಿ ಪ್ರವಾಸಿಗರು ವೀಕ್ಷಿಸಿ ಇತಿಹಾಸ ನಿರ್ಮಾಣವಾಗಿತ್ತು. ಜೂ. ೧ರಿಂದ ಪ್ರವಾಸಿಗರ ವಿಕ್ಷಣೇಗೆ ಮುಕ್ತಗೊಂಡಿದ್ದ ಗಡಾಯಿಕಲ್ಲಿನಲ್ಲಿ ಜೂ.೧೪ಕ್ಕೆ ಮತ್ತೊಮ್ಮೆ ಪ್ರವಾಸಿಗರ ವಿಕ್ಷಣಗೆ ನಿಷೇಧ ಹೇರಲಾಗಿತ್ತು ಇದಾದ ಬಳಿಕ ನಿರಂತರ ಜೋರು ಮಳೆ ಸುರಿದ ಕಾರಣ ಜು.೮ರಿಂದ ಮತ್ತೆ ಪ್ರವೇಶಕ್ಕೆ ನಿಷೇಧ ಹೇರಿ ಮುಂದುವರಿದಿದ್ದು ನಾಳೆಯಿಂದ ವೀಕ್ಷಣೆಗೆ ತೆರೆದುಕೊಂಡಿದೆ. ಒಂದು ದಿನದಲ್ಲಿ ೫೦೦ ಮಂದಿಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಪೂರ್ವ ನೋಂದವಣಿ ಕಡ್ಡಾಯವಾಗಿದೆ.

- Advertisement -

Latest News

error: Content is protected !!