- Advertisement -
![]()
- Advertisement -
ಬೆಳ್ತಂಗಡಿ : 6 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದ ಆರೋಪಿಯನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಕುಂಬಳಗೋಡು ಗೇರು ಪಾಳ್ಯ ನಿವಾಸಿ ಗಂಗಾಧರಪ್ಪ ಪುತ್ರ ವೆಂಕಟೇಶ್ @ ಡಾಬರ್ ವೆಂಕಟೇಶ್(38) ಬಂಧಿತ ಆರೋಪಿ.
ವೆಂಕಟೇಶ್ @ ಡಾಬರ್ ವೆಂಕಟೇಶ್ ಪ್ರಕರಣವೊಂದರಲ್ಲಿ ಆರು ವರ್ಷಗಳಿಂದ ತಲೆಮರೆಸಿಕೊಂಡಿದ್ದ. ಈತನನ್ನು ಬೆಳ್ತಂಗಡಿ ಪೊಲೀಸ್ ಉಪ ಅಧಿಕ್ಷಕರು ರೋಹಿಣಿ.ಸಿ.ಕೆ ಮತ್ತು ಪೊಲೀಸ್ ವೃತ್ತ ನಿರೀಕ್ಷಕರು ರವಿ.ಬಿ.ಎಸ್ ಮಾರ್ಗದರ್ಶನದಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯ ಉಪನೀರಿಕ್ಷಕರು ಸಮರ್ಥ್ ಆರ್ ಗಾಣಿಗೇರ ನೇತೃತ್ವದ ಸಿಬ್ಬಂದಿ ವ್ರಷಭ, ಚರಣ್ ರಾಜ್ ತಂಡ ತುಮಕೂರು ಜಿಲ್ಲೆಯ ತಿಪಟೂರ್ ಎಂಬಲ್ಲಿ ಮಾ.4 ರಂದು ಬಂಧಿಸಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಮಾ.5 ರಂದು ಹಾಜರುಪಡಿಸಿದ್ದಾರೆ. ಬಳಿಕ ಜಾಮೀನಿನ ಮೇಲೆ ಆತನನ್ನು ಬಿಡುಗಡೆಗೊಳಿಸಲಾಗಿದೆ.
- Advertisement -


