- Advertisement -
- Advertisement -
ಉಪ್ಪಿನಂಗಡಿ: ಕ್ವಾರಂಟೈನ್ ಉಲ್ಲಂಘಿಸಿದ ಬೆಳ್ತಂಗಡಿ ತಾಲೂಕು ಕರಾಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಲೇರಿ ನಿವಾಸಿ ಕೊರೊನಾ ಸೋಂಕಿತ ವ್ಯಕ್ತಿಯ ಮೇಲೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುತ್ತೂರು ಸಹಾಯಕ ಆಯುಕ್ತರಾದ ಡಾ.ಯತೀಶ್ ಉಳ್ಳಾಲ್ ರವರು ಈತನ ವಿರುದ್ದ ದೂರು ದಾಖಲಿಸಿದ್ದಾರೆ. ಈತ ಮಾರ್ಚ್ 21 ರಂದು ದುಬೈನಿಂದ ಬೆಂಗಳೂರು ಮೂಲಕ ಊರಿಗೆ ಬಂದು ನಂತರದಲ್ಲಿ 14 ದಿನಗಳು ಮನೆಯಲ್ಲೇ ಇರುವಂತೆ ಈತನಿಗೆ ಆದೇಶ ನೀಡಲಾಗಿದ್ದರೂ ಅದನ್ನು ಉಲ್ಲಂಘಿಸಿದ್ದ.ಈ ಕಾರಣದಿಂದ ಈತನ ಮತ್ತು ಈತನ ಮನೆಯವರ ವಿರುದ್ದ ಪುತ್ತೂರು ಸಹಾಯಕ ಆಯುಕ್ತರು ಉಪ್ಪಿನಂಗಡಿ ಪೋಲಿಸರಿಗೆ ದೂರನ್ನು ನೀಡಿದ್ದಾರೆ.
- Advertisement -