Thursday, June 4, 2026
Homeಕರಾವಳಿಬೆಳ್ತಂಗಡಿ : ಕುವೆಟ್ಟು ಗ್ರಾಮದ ಪಿಲಿಚಾಮುಂಡಿಕಲ್ಲು ನಿವಾಸಿ ಕೊರೊನ ಸೋಂಕಿತ ವೃದ್ಧ ಸಾವು

ಬೆಳ್ತಂಗಡಿ : ಕುವೆಟ್ಟು ಗ್ರಾಮದ ಪಿಲಿಚಾಮುಂಡಿಕಲ್ಲು ನಿವಾಸಿ ಕೊರೊನ ಸೋಂಕಿತ ವೃದ್ಧ ಸಾವು

- Advertisement -
- Advertisement -

ಬೆಳ್ತಂಗಡಿ : ಸದ್ಯಕ್ಕಂತೂ ಹೆಮ್ಮಾರಿ ಕೊರೊನ ತನ್ನ ರುದ್ರನರ್ತನವನ್ನು ನಿಲ್ಲಿಸುವಂತೆ ಕಾಣುತ್ತಿಲ್ಲ. ಕೊರೊನ ಸೋಂಕಿನ ಕಾರಣದಿಂದ ತಾಲೂಕಿನ ಕುವೆಟ್ಟು ಗ್ರಾಮದ ಪಿಲಿಚಾಮುಂಡಿಕಲ್ಲು ನಿವಾಸಿ ಸುಮಾರು 55 ವರ್ಷ ಪ್ರಾಯದ ವೃಧ್ದ ಇಂದು ಬೆಳಿಗ್ಗೆ ತಮ್ಮ ಸ್ವಗ್ರಹದಲ್ಲಿ ಸಾವನ್ನಪ್ಪಿದ್ದಾರೆ.

ಅನಾರೋಗ್ಯದ ಕಾರಣದಿಂದ ಎರಡು ದಿನದ ಹಿಂದೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಗಂಟಲು ದ್ರವ ಪರೀಕ್ಷೆ ಮಾಡಲಾಗಿತ್ತು ,ಅದರ ವರದಿ ಇದೀಗ ಕೈ ಸೇರಿದ್ದು ಸೋಂಕು ದೃಢ ಪಟ್ಟಿದೆ.

ಮೃತ ದೇಹ ಮನೆಯಲಿದ್ದು, ಸ್ಥಳಕ್ಕೆ ತಹಶೀಲ್ದಾರ್,ಪೊಲೀಸ್ ಇಲಾಖೆ ,ಅರೋಗ್ಯ ಇಲಾಖೆ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿದ್ದು. ಮುಂಜಾಗ್ರತಾ ಕ್ರಮವಾಗಿ ಪ್ರದೇಶದ ಪ್ರವೇಶವನ್ನು ನಿಷೇದಿಸಿದ್ದಾರೆ ಎಂದು ವರದಿಯಾಗಿದೆ .
ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.

- Advertisement -

Latest News

error: Content is protected !!