Saturday, May 18, 2024
Homeಕರಾವಳಿಬೆಳ್ತಂಗಡಿ ಸರ್ಕಲ್ ಇನ್ಸ್ ಪೆಕ್ಟರ್ ಫೇಸ್ ಬುಕ್ ಖಾತೆ ಹ್ಯಾಕ್: ಹಣಕ್ಕಾಗಿ ಬೇಡಿಕೆ ಇಟ್ಟ ಖದೀಮರು

ಬೆಳ್ತಂಗಡಿ ಸರ್ಕಲ್ ಇನ್ಸ್ ಪೆಕ್ಟರ್ ಫೇಸ್ ಬುಕ್ ಖಾತೆ ಹ್ಯಾಕ್: ಹಣಕ್ಕಾಗಿ ಬೇಡಿಕೆ ಇಟ್ಟ ಖದೀಮರು

spot_img
- Advertisement -
- Advertisement -

ಬೆಳ್ತಂಗಡಿ: ಬೆಳ್ತಂಗಡಿ ಸರ್ಕಲ್‌ ಇನ್ಸ್‌ಪೆಕ್ಟರ್ ಸಂದೇಶ್.ಪಿ.ಜಿ ವರ ಫೇಸ್ ಬುಕ್ ಖಾತೆಯನ್ನು ಹ್ಯಾಕ್‌ ಮಾಡಲಾಗಿದೆ. ಸಂದೇಶ್.ಪಿ.ಜಿ ಅವರ ಫೇಸ್ ಬುಕ್ ಖಾತೆಯನ್ನು ಕಿಡಿಗೇಡಿಗಳು ಹ್ಯಾಕ್ ಮಾಡಿ ಅಕೌಂಟ್ ಗೆ ಹಣ ಹಾಕುವಂತೆ ಮೇಸೆಜ್ ಹಾಕುತ್ತಿರುವುದು ಬೆಳಕಿಗೆ ಬಂದಿದೆ. ಹಾಗೆಯೇ ಫೇಸ್‌ಬುಕ್ ನಲ್ಲಿದ್ದ ಎಲ್ಲಾ ಫೋಟೋಗಳನ್ನು ಬದಲಿಸಿದ್ದಾರೆ.

ಸಾರ್ವಜನಿಕ ಕಾರ್ಯಕ್ರಮ ಮತ್ತು ಪೊಲೀಸ್ ಇಲಾಖೆಯ ಮಾಹಿತಿಗಳನ್ನು ಜನರಿಗೆ ತಿಳಿಸಲು ಸರ್ಕಲ್‌ ಇನ್ಸ್‌ಪೆಕ್ಟರ್ ಸಂದೇಶ್.ಪಿ.ಜಿಯವರು ಫೇಸ್ ಬುಕ್ ಖಾತೆ ಹೊಂದಿದ್ದು, ಇದೀಗ ಅವರ ಫೇಸ್ ಬುಕ್ ಖಾತೆಯನ್ನು ಹ್ಯಾಕ್ ಮಾಡಿ ಖಾತೆಗೆ‌ ಹಣ ಹಾಕುವಂತೆ ಮನವಿ ಮಾಡಲಾಗಿದೆ.

ನನ್ನ ಫೇಸ್ ಬುಕ್ ಖಾತೆಯನ್ನು ಹ್ಯಾಕ್ ಮಾಡಿ ಹಣ ಕೇಳುತ್ತಿದ್ದಾರೆ. ನಾನು ಯಾವತ್ತೂ ಯಾರ ಬಳಿಯೂ ಹಣ ಕೇಳಿಲ್ಲ. ದಯವಿಟ್ಟು ಇಂತಹ ಮೆಸೇಜ್ ಗಳ ಬಗ್ಗೆ ಎಚ್ಚರದಿಂದಿರಿ” ಎಂದು ಸರ್ಕಲ್‌ ಇನ್ಸ್‌ಪೆಕ್ಟರ್ ಸಂದೇಶ್.ಪಿ.ಜಿಯವರು ಮನವಿ ಮಾಡಿಕೊಂಡಿದ್ದಾರೆ.

ಹಲವು ಗೆಳೆಯರು ಸಂದೇಶ್ ಅವರಿಗೆ ಕರೆ ಮಾಡಿ ಸರ್ ಹಣ ರೆಡಿ ಇದೆ ನೀವು ಮೆಸೇಜ್ ಹಾಕಿದ್ರಿ ಸ್ಟೇಷನ್ ಬಂದು ನೀಡುತ್ತೇನೆ ಎಂದು ಹೇಳಿದ ಘಟನೆಯೂ‌ ನಡೆಯಿತು.ಅದ್ರೆ ಅವರು ಅದು ಅಕೌಂಟ್ ಹ್ಯಾಕ್‌ ಅಗಿದೆ ನನಗೆ ಹಣದ ಅವಶ್ಯಕತೆ ಇಲ್ಲ‌ ಎಂದು ಉತ್ತರಿಸಿದ್ದಾರೆ.‌ ಜಿಲ್ಲೆಯ ಹಲವು ಪೊಲೀಸ್ ಅಧಿಕಾರಿಗಳ ಫೇಸ್ಬುಕ್ ಹ್ಯಾಕ್‌ ಮಾಡಿ ಈ ರೀತಿ ಹಣ ವಸೂಲಿ‌ ಮಾಡಲು ಕಿಡಿಗೇಡಿಗಳು ಪ್ರಯತ್ನಿಸುತ್ತಿದ್ದಾರೆ.

- Advertisement -
spot_img

Latest News

error: Content is protected !!