ಬೆಳ್ತಂಗಡಿ: ನಿನ್ನೆಯಷ್ಟೇ ಮುಖ್ಯಮಂತ್ರಿ ಬಿಎಸ್ ಯೆಡಿಯೂರಪ್ಪನವರು ಮುಸ್ಲಿಂ ಸಮುದಾಯದ ಬಗ್ಗೆ ಯಾರಾದರೂ ಕೆಟ್ಟ ರೀತಿಯಲ್ಲಿ ಮಾತನಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದರು. ಈ ಹೇಳಿಕೆಯನ್ನೇ ಮೂಲವನ್ನಾಗಿರಿಸಿಕೊಂಡು ಬೆಳ್ತಂಗಡಿ ತಾಲೂಕು ವ್ಯಾಪ್ತಿಯ 5 ಹಿಂದೂ ಯುವಕರ ಮೇಲೆ ಕೋಮು ಪ್ರಚೋದನಾ ಹೇಳಿಕೆಯಡಿ ಕೇಸ್ ದಾಖಲಾಗಿದೆ.
ಧರ್ಮಸ್ಥಳ ಗ್ರಾಮ ಪಂಚಾಯತ್ ಸದಸ್ಯರನ್ನು ಸೇರಿಸಿ ಧರ್ಮಸ್ಥಳ, ಬೆಳ್ತಂಗಡಿ, ವೇಣೂರು ಹಾಗೂ ಪುಂಜಾಲಕಟ್ಟೆ ಠಾಣೆಯಲ್ಲಿ 5 ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಕಳೆದ 2 ವಾರಗಳ ಹಿಂದೆ ದೆಹಲಿಯಲ್ಲಿ ನಡೆದ ಮುಸ್ಲಿಂ ಸಮುದಾಯದ ಧಾರ್ಮಿಕ ಸಮಾವೇಶಕ್ಕೆ ತೆರಳಿದ್ದ ಹೆಚ್ಚಿನ ಎಲ್ಲ ಮುಖಂಡರಿಗೆ ಕೊರೋನಾ ಸೋಂಕು ತಗುಲಿರುವುದು ವರದಿಯಾಗಿತ್ತು. ಈ ಘಟನೆಯ ನಂತರ ಮುಸ್ಲಿಂ ಸಮುದಾಯದ ಬಗ್ಗೆ ಒಂದಷ್ಟು ಟೀಕೆಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.
ಆದರೆ ಈಗ ಹಿಂದಿನ ಕೋಮು ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡು ಪರಿಸ್ಥಿತಿಯ ಲಾಭ ಪಡೆಯಲು ಮುಸ್ಲಿಂ ಸಮುದಾಯ ಕೇಸ್ ಗಳನ್ನು ದಾಖಲಿಸಿ ಹಿಂದೂ ಸಂಘಟನೆಗಳ ಬಲವನ್ನು ಕುಗ್ಗಿಸುವ ಕೆಲಸವನ್ನು ನಡೆಸುತ್ತಿದೆ. ಹಿಂದೂ ಸಂಘಟನೆಯ ಕಾರ್ಯಕರ್ತರ ಮೇಲೆ ಕೇಸ್ ಮಾಡ್ಬೇಡಿ. ಯಾವುದೇ ಮತೀಯ ಶಕ್ತಿಗಳ ಅಟ್ಟಹಾಸವನ್ನು ಸಹಿಸುವುದಿಲ್ಲ ಮತ್ತು ಹಿಂದೂಗಳಿಗೆ ತೊಂದರೆಯಾಗಲು ಬಿಡುವುದಿಲ್ಲ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದ್ದಾರೆ.
ಬೆಳ್ತಂಗಡಿ: ಕೋಮು ಪ್ರಚೋದನಕಾರಿ ಹೇಳಿಕೆ, 5 ಹಿಂದೂ ಯುವಕರ ಮೇಲೆ ಕೇಸ್
- Advertisement -
- Advertisement -
- Advertisement -