Saturday, April 27, 2024
Homeಕರಾವಳಿಬಾರ್ಯ: ಬಿಜೆಪಿ-ಕಾಂಗ್ರೆಸ್ ಬೆಂಬಲಿತರಿಗೆ ಸಡ್ಡು ಹೊಡೆದ ಪಕ್ಷೇತರರು

ಬಾರ್ಯ: ಬಿಜೆಪಿ-ಕಾಂಗ್ರೆಸ್ ಬೆಂಬಲಿತರಿಗೆ ಸಡ್ಡು ಹೊಡೆದ ಪಕ್ಷೇತರರು

spot_img
- Advertisement -
- Advertisement -

ಬೆಳ್ತಂಗಡಿ: ಬಾರ್ಯ ಗ್ರಾಮ ಪಂಚಾಯತಿ ಚುನಾವಣಾ ಕಣದಲ್ಲಿ ಬಾರ್ಯ ಎರಡನೇ ವಾರ್ಡಿನಲ್ಲಿ ಪಕ್ಷೇತರರ ಪ್ರಚಾರವು ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಗೆಲುವಿನ ಲೆಕ್ಕಾಚಾರವನ್ನೇ ತಲೆಕೆಳಗಾಗಿಸಿದೆ ಎನ್ನಲಾಗಿದೆ.

ಬಾರ್ಯ 2ನೇ ವಾರ್ಡಿನಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಹಾಲಿ ಸದಸ್ಯ ಧರ್ಣಪ್ಪ ಗೌಡ, ದಿನೇಶ ಬಂಗೇರ, ಜಯಶ್ರೀ, ಪವಿತ್ರ ಮತ್ತು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಬಾಲಕೃಷ್ಣ ಶೆಟ್ಟಿ, ದಾವೂದು ಬ್ಯಾರಿ, ಭವಾನಿ, ವಸಂತಿ ಕಣದಲ್ಲಿದ್ದು ಇವರ ಗೆಲುವಿಗೆ ಪಕ್ಷೇತರ ಅಭ್ಯರ್ಥಿಗಳಾದ ಆಸಿಫ್, ಸವಾದ್ ಮತ್ತು ಮಾಧವ ಉಮೇದುವಾರಿಕೆಯನ್ನು ಸಲ್ಲಿಸುತ್ತಿದ್ದಂತೆ ಬಿಜೆಪಿ ಮತ್ತು ಕಾಂಗ್ರೆಸ್ ಬೆಂಬಲಿತರಿಗೆ ತಲೆನೋವಾಗಿ ಪರಿಣಮಿಸಿದೆ.

ಪಕ್ಷೇತರ ಅಭ್ಯರ್ಥಿಗಳ ಪ್ರಚಾರದ ಭರಾಟೆಯಿಂದ ತತ್ತರಿಸಿದ ಕಾಂಗ್ರೆಸ್ ಮತ್ತು ಬಿಜೆಪಿಯ ಅಭ್ಯರ್ಥಿಗಳು ಪಕ್ಷೇತರ ಅಭ್ಯರ್ಥಿಗಳ ಬಗ್ಗೆ ಅಪಪ್ರಚಾರದಲ್ಲಿ ತೊಡಗಿದ್ದು, ಅಪಪ್ರಚಾರಕ್ಕೆ ಪಕ್ಷೇತರ ಅಭ್ಯರ್ಥಿಗಳು ಕೌಂಟರ್ ಕೊಡುತ್ತಿದ್ದು ಬಿಜೆಪಿ ಮತ್ತು ಕಾಂಗ್ರೆಸ್ ಈ ಹಿಂದೆ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ನಡೆಸಿದ ಅವ್ಯವಹಾರಗಳ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸುತ್ತಿದ್ದು, ಗ್ರಾಮದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳದ ಸದಸ್ಯರುಗಳ ಬಗ್ಗೆ ಮತದಾರರಿಗೆ ಮನವರಿಕೆ ಮಾಡುತ್ತಿದ್ದು ಸಾರ್ವಜನಿಕರಲ್ಲಿ ಮತದಾನದ ಮಹತ್ವವನ್ನು ತಿಳಿಯಪಡಿಸುವ ಕಾರ್ಯವನ್ನು ಕೈಗೊಂಡಿದ್ದಾರೆ ಎನ್ನಲಾಗಿದೆ.

ಗ್ರಾಮ ಪಂಚಾಯತ್ ಚುನಾವಣ ಅಖಾಡ ದಿನದಿಂದ ‌ದಿನಕ್ಕೆ ವಿಚಿತ್ರ ತಿರುವುಗಳನ್ನು ಪಡೆಯುತ್ತಿದೆ. ಬಾರ್ಯ ಗ್ರಾಮ ಪಂಚಾಯತ್ ಕಾಂಗ್ರೆಸ್ ನ ಭದ್ರಕೋಟೆ. ಆದ್ರೆ ಈ ಭದ್ರಕೋಟೆಯನ್ನು ಈ ಭಾರೀ ಪಕ್ಷೇತರ ಅಭ್ಯರ್ಥಿಗಳು ಧೂಳೀಪಟ ಮಾಡುವುದು ಖಚಿತವಾಗಿದೆ. ಕಾಂಗ್ರೆಸ್ ನ ಭದ್ರಕೋಟೆಯಲ್ಲೀಗ ಬಿಜೆಪಿ ಮತ್ತು ಪಕ್ಷೇತರ ಅಭ್ಯರ್ಥಿಗಳು ಮುಂಚೂಣಿಯಲ್ಲಿದ್ದಾರೆ.

ಅಷ್ಟೇ ಅಲ್ಲ ಇಲ್ಲಿ ಹಲವು ವರ್ಷಗಳಿಂದಲೂ ಕಾಂಗ್ರೆಸ್ ಅಧಿಕಾರವನ್ನ ಪಡೀತಾನೇ ಇದೆ. ಆದ್ರೆ ಈ ಭಾರೀ ಕಾಂಗ್ರೆಸ್ ಮತ್ತೆ ಅಧಿಕಾರಿ ಪಡೆಯಬೇಕಾದರೆ ಬಲೂ ಕಠಿಣವೇ ಸರಿ. ವಾರ್ಡ್ ನಂಬರ್ 2 ಕಾಂಗ್ರೆಸ್ ಗೆ ಪಕ್ಷೇತರರು ತಲೆನೋವಾಗಿ ಪರಿಣಮಿಸಿದ್ದಾರೆ. ಕಾಂಗ್ರೆಸ್ ಗೆ ಗೆಲುವು ಪಡೆಯಲು ತುಸು ಕಷ್ಟದ ಹಾದಿ ಇದೆ. ಹಾಗಾಗಿ ಬಿಜೆಪಿ ಅಧಿಕಾರ ಪಡೆಯಲು ಇನ್ನಿಲ್ಲದ ಕಸರತ್ತು ಮಾಡ್ತಾ ಇದೆ.ಹಾಗೆಯೇ ಭಾರೀ ಕುತೂಹಲ ಎಬ್ಬಿಸಿರುವ ಎರಡನೇ ವಾರ್ಡ್ ಇದು ಕಾಂಗ್ರೆಸಿಗೆ ನುಂಗಲಾರದ ತುತ್ತಾಗಿ ಪರಿಣಾಮಿಸಿದೆ.

ಪಕ್ಷೇತರರು ಈ ವಾರ್ಡ್ ನಲ್ಲಿ ಗೆಲುವಿನ ನಗೆ ಬೀರುವುದರಲ್ಲೂ ಸಂಶಯ ಇಲ್ಲ. ಬಿಜೆಪಿಯಿಂದ ಬಂಡಾಯ ಎದ್ದಿರುವ ಮಾಧವ ಇಲ್ಲಿ ಬಿಜೆಪಿ ಮತವನ್ನ ಕಸಿಯುವ ಸಾಧ್ಯತೆ ಇದೆ. ಪಕ್ಷೇತರರು ಇದೀಗ ಮುಳುವಾಗಿದ್ದಾರೆ. ಜೊತೆಗೆ ಪಕ್ಷೇತರರು ಇಲ್ಲಿ ಗೆಲುವಿನ ನಗೆ ಬೀರುವ ಸಾಧ್ಯತೆ ಇದೆ ಎನ್ನಲಾಗಿದೆ.

- Advertisement -
spot_img

Latest News

error: Content is protected !!