Saturday, June 6, 2026
Homeಕರಾವಳಿಪುತ್ತೂರು: ಆಟವಾಡುತ್ತಿದ್ದ ಮೂರುವರೆ ವರ್ಷದ ಮಗು ಈಜುಕೊಳಕ್ಕೆ ಬಿದ್ದು ಮೃತ್ಯು

ಪುತ್ತೂರು: ಆಟವಾಡುತ್ತಿದ್ದ ಮೂರುವರೆ ವರ್ಷದ ಮಗು ಈಜುಕೊಳಕ್ಕೆ ಬಿದ್ದು ಮೃತ್ಯು

- Advertisement -
- Advertisement -

ಪುತ್ತೂರು: ಮನೆಯಂಗಳದಲ್ಲಿ ಆಟವಾಡುತ್ತಿದ್ದ ಮೂರುವರೆ ವರ್ಷದ ಪುಟ್ಟ ಬಾಲಕ ಸ್ಥಳೀಯ ತೋಟದಲ್ಲಿದ್ದ ಈಜು ಕೊಳದಲ್ಲಿ ಬಿದ್ದು ಮೃತಪಟ್ಟ ಬಗ್ಗೆ ಪುತ್ತೂರು ತಾಲೂಕಿನ ಪಾಣಾಜೆ ಗ್ರಾಮದ ಅಪಿನಿಮೂಲೆ ಎಂಬಲ್ಲಿ ನಡೆದಿದೆ.

ಅಪಿನಮೂಲೆ ನಿವಾಸಿ ಅಬೂಬಕ್ಕರ್ ಸಿದ್ದಿಕ್ ಮತ್ತು ಆಶ್ಮಾ ದಂಪತಿಯ ಮೂರುವರೆ ವರ್ಷದ ಬಾಲಕ ಮಹಮ್ಮದ್ ಸಾನಿದ್ ಮೃತಪಟ್ಟವರು. ಮನೆಯ ವರಾಂಡದಲ್ಲಿ ಆಟವಾಡಿಕೊಂಡು ಇದ್ದ ಬಾಲಕ ಮನೆಯಲ್ಲಿ ಕಾಣಿಸದೇ ಇದ್ದಾಗ ಸುತ್ತಮುತ್ತ ಹುಡುಕಾಡಿದಾಗ ನೆರೆಯ ರಾಮ್ ಕುಮಾರ್‌ರವರ ತೋಟದ ಈಜು ಕೊಳದ ಬಳಿ ಬಂದಾಗ ಅದರ ನೀರಿನಲ್ಲಿ ಮಹಮ್ಮದ್ ಸಾನಿದ್ ಬಿದ್ದಿರುವುದು ಬೆಳಕಿಗೆ ಬಂದಿತ್ತು.

ತಕ್ಷಣ ಬಾಲಕನನ್ನು ನೀರಿನಿಂದ ಮೇಲಕ್ಕೆತ್ತಿ ಪುತ್ತೂರು ಸರಕಾರಿ ಆಸ್ಪತ್ತೆಗೆ ಕರೆ ತಂದಾಗ ಬಾಲಕ ಮೃತಪಟ್ಟಿದ್ದನು. ಘಟನೆ ಕುರಿತು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!