Friday, June 25, 2021
Homeಕರಾವಳಿಬೆಳ್ತಂಗಡಿ: ಬದುಕು ಕಟ್ಟೋಣ ಬನ್ನಿ ತಂಡ ಮತ್ತು ರೋಟರಿ ಕ್ಲಬ್ ನಿಂದ ಎರಡು ವಾಹನ ಹಸ್ತಾಂತರ

ಬೆಳ್ತಂಗಡಿ: ಬದುಕು ಕಟ್ಟೋಣ ಬನ್ನಿ ತಂಡ ಮತ್ತು ರೋಟರಿ ಕ್ಲಬ್ ನಿಂದ ಎರಡು ವಾಹನ ಹಸ್ತಾಂತರ

- Advertisement -
- Advertisement -

ಬೆಳ್ತಂಗಡಿ: ಉಜಿರೆ ಬದುಕು ಕಟ್ಟೋಣ ಬನ್ನಿ ತಂಡ ಮತ್ತು ಬೆಳ್ತಂಗಡಿ ರೋಟರಿ ಕ್ಲಬ್ ಇವರ ಸಹಯೋಗದಲ್ಲಿ ಉಜಿರೆ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಸಹಾಯವಾಣಿ ಜೊತೆಗೆ ನಾಲ್ಕು ವಾಹನವನ್ನು ಈ ಮೊದಲು ನೀಡಿದ್ದಾರೆ. ಇಂದು ಬೆಳ್ತಂಗಡಿ ನಗರ ಪಂಚಾಯತ್ ವ್ಯಾಪ್ತಿಗೆ “ಆಪ್ತರಕ್ಷಕ” ಎರಡು ವಾಹನವನ್ನು ನಗರ ಪಂಚಾಯತಿನ ಮಖ್ಯಾಧಿಕಾರಿ ಸುಧಾಕರ್ ಅವರಿಗೆ ಬದುಕು ಕಟ್ಟೋಣ ಬನ್ನಿ ತಂಡದ ಲಕ್ಷ್ಮೀ ಗ್ರೂಪ್ಸ್ ಮಾಲಕ ಮೋಹನ್ ಕುಮಾರ್ , ಸಂಧ್ಯಾ ಟ್ರೆಡರ್ಸ್ ಮಾಲಕ ರಾಜೇಶ್ ಪೈ , ಬೆಳ್ತಂಗಡಿ ರೋಟರಿ ಕ್ಲಬ್ ಅದ್ಯಕ್ಷ ಕೀ ನೀಡುವ ಮೂಲಕ ಹಸ್ತಾಂತರ ಮಾಡಲಾಯಿತು.

ಕಾರ್ಯಕ್ರಮದಲ್ಲಿ ನಗರ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ರಜನಿ ಕುಡುವ , ನಗರ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀಮತಿ ತುಳಸಿ ಕರುಣಾಕರ , ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ್, ನಗರ ಪಂಚಾಯತ್ ಇಂಜಿನಿಯರ್ ಮಹಾವೀರ ಅರಿಗ, ಬದುಕು ಕಟ್ಟೋಣ ಬನ್ನಿ ತಂಡದ ಲಕ್ಷ್ಮೀ ಗ್ರೂಪ್ಸ್ ಮಾಲಕ ಮೋಹನ್ ಕುಮಾರ್ , ಸಂಧ್ಯಾ ಟ್ರೆಡರ್ಸ್ ಮಾಲಕ ರಾಜೇಶ್ ಪೈ , ರೋಟರಿ ಕ್ಲಬ್ ಬೆಳ್ತಂಗಡಿ ಅಧ್ಯಕ್ಷರು ಧನಂಜಯ್ ರಾವ್ , ರೋಟರಿ ಕ್ಲಬ್ ನ ಕಾರ್ಯದರ್ಶಿ ಶ್ರೀಧರ್.ಕೆ.ವಿ, ರೋಟರಿ ಕ್ಲಬ್ ನ ಪೂರ್ವಧ್ಯಕ್ಷರು ಯಶವಂತ ಪಟ್ಟವರ್ದನ್ ,ಉದ್ಯಮಿ ಜೈಸನ್ , ತಾ.ಪ ಸದಸ್ಯರಾದ ಶಶಿಧರ್ ಕಲ್ಮಂಜ , ಉದ್ಯಮಿ ರವಿ ಚಕ್ಕಿತ್ತಾಯ ಮತ್ತಿತರರು ಉಪಸ್ಥಿತಿ ಇದ್ದರು.

- Advertisement -
- Advertisment -

Latest News

error: Content is protected !!