- Advertisement -
![]()
- Advertisement -
ಬೆಳ್ತಂಗಡಿ : ಚೆಕ್ ಬೌನ್ಸ್ ಪ್ರಕರಣದಲ್ಲಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಸುಮಾರು 5 ವರ್ಷಗಳಿಂದ ಹಾಜರಾಗದೆ ತಲೆಮರೆಸಿಕೊಂಡಿದ್ದ LPC 05/2024 ವಾರಂಟ್ ಆರೋಪಿ ಬೆಳ್ತಂಗಡಿ ತಾಲೂಕಿನ ತೋಟತ್ತಾಡಿ ಗ್ರಾಮದ ಟಿ.ಪಿ. ಪ್ರಭಾಕರನ್ ಮಗ ಸುಭಾಸ್(37) ಎಂಬಾತನನ್ನು ಬೆಳ್ತಂಗಡಿ ಪೊಲೀಸ್ ಉಪ ಅಧಿಕ್ಷಕರು ರೋಹಿಣಿ.ಸಿ.ಕೆ ಮತ್ತು ಪೊಲೀಸ್ ವೃತ್ತ ನಿರೀಕ್ಷಕ ರವಿ.ಬಿ.ಎಸ್ ಮಾರ್ಗದರ್ಶನದಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯ ಉಪ ನೀರಿಕ್ಷಕರು ಸಮರ್ಥ್ ರವರ ನೇತೃತ್ವದ ಸಿಬ್ಬಂದಿ ವ್ರಷಭ, ಚರಣ್ ರಾಜ್ ಬೆಂಗಳೂರು ಸುಂಕದಕಟ್ಟೆ ಎಂಬಲ್ಲಿಂದ ಫೆ.27 ರಂದು ಬಂಧಿಸಿ ಪುತ್ತೂರು ನ್ಯಾಯಾಧಿಸರ ಮುಂದೆ ಫೆ.28 ರಂದು ಹಾಜರುಪಡಿಸಿದ್ದಾರೆ. ಬಳಿಕ ಚೆಕ್ ಬೌನ್ಸ್ ಪ್ರಕರಣದ ಮೊತ್ತವನ್ನು ಬ್ಯಾಂಕ್ ಗೆ ಪಾವತಿಸಿ ಪ್ರಕರಣ ಮುಕ್ತಾಯಗೊಳಿಸಿರುತ್ತಾರೆ.
- Advertisement -


