Thursday, June 25, 2026
Homeಕರಾವಳಿಬೆಳ್ತಂಗಡಿ : ಗುರುವಾಯನಕೆರೆ ಕೆರೆ ಅಭಿವೃದ್ಧಿಪಡಿಸಲು ಲೋಕಾಯುಕ್ತ ಅಧಿಕಾರಿಗಳಿಂದ ಸ್ಥಳ ಪರಿಶೀಲನೆ

ಬೆಳ್ತಂಗಡಿ : ಗುರುವಾಯನಕೆರೆ ಕೆರೆ ಅಭಿವೃದ್ಧಿಪಡಿಸಲು ಲೋಕಾಯುಕ್ತ ಅಧಿಕಾರಿಗಳಿಂದ ಸ್ಥಳ ಪರಿಶೀಲನೆ

- Advertisement -
- Advertisement -

ಬೆಳ್ತಂಗಡಿ : ಕರ್ನಾಟಕದ ಲೋಕಾಯಯಕ್ತ ನ್ಯಾಯಮೂರ್ತಿಗಳು ರಾಜ್ಯದ ವಿವಿಧ ಕಡೆಗಳಲ್ಲಿ ಅಭಿವೃದ್ಧಿಯಾಗದೆ ಉಳಿದ ಸರಕಾರಿ ಕೆರೆಗಳ ಬಗ್ಗೆ ತಹಶೀಲ್ದಾರ್ ಗಳಿಂದ ವರದಿ ತರಿಸಿಕೊಂಡಿದ್ದು ಅಭಿವೃದ್ಧಿ ಪಡಿಸಲು ಸಂಬಂಧ ಪಟ್ಟ ಅಧಿಕಾರಿಗಳಿಂದ ವಿವಿಧ ರೀತಿಯಲ್ಲಿ ವಿಶೇಷ ಅನುದಾನ ತರಿಸಿಕೊಂಡು ಯೋಜನೆ ರೂಪಿಸುತ್ತಿದ್ದಾರೆ. ಅದರಂತೆ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಗುರುವಾಯನಕೆರೆ ಕೆರೆಯನ್ನು ಲೋಕಾಯಯಕ್ತ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿ ಅಭಿವೃದ್ಧಿಪಡಿಸುವ ಬಗ್ಗೆ ಚರ್ಚಿಸಲಾಯಿತು.

ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಗುರುವಾಯನಕೆರೆಯಲ್ಲಿ ಒಟ್ಟು 14.71 ಎಕ್ರರೆ ಕೆರೆ ಇದ್ದು 2021 ರಲ್ಲಿ ಬೆಳ್ತಂಗಡಿ ತಹಶೀಲ್ದಾರ್ ಕಚೇರಿಯಿಂದ ಈ ಜಾಗ ಯಾವುದೇ ತಕರಾರು ಇಲ್ಲ ಎಂದು ಕುವೆಟ್ಟು ಗ್ರಾಮ ಪಂಚಾಯತ್ ಗೆ ಹಸ್ತಾಂತರ ಮಾಡಿದ್ದರು. ಈ  ಬಗ್ಗೆ ದಕ್ಷಿಣ ಕನ್ನಡ ಲೋಕಾಯುಕ್ತ ಪೊಲೀಸರಿಗೆ ವರದಿ ಬಂದಿದ್ದು. ಆ.29 ರಂದು ಲೋಕಾಯುಕ್ತ ಇನ್ಸ್ಪೆಕ್ಟರ್ ನೇತೃತ್ವದ ತಂಡ ಭೇಟಿ ನೀಡಿ ಬೆಳ್ತಂಗಡಿ ತಹಶೀಲ್ದಾರ್ ಜೊತೆಯಲ್ಲಿ ಸ್ಥಳ ಪರಿಶೀಲನೆ ನಡೆಸಿ ಅಭಿವೃದ್ಧಿ ಪಡಿಸುವ ಬಗ್ಗೆ ಚರ್ಚೆ ನಡೆಸಿ  ವರದಿ ಪಡೆದುಕೊಂಡರು.

ದಕ್ಷಿಣ ಕನ್ನಡ ಜಿಲ್ಲಾ ಲೋಕಾಯುಕ್ತ ಇನ್ಸ್ಪೆಕ್ಟರ್ ಅಮಾನುಲ್ಲಾ , ಸಿಬ್ಬಂದಿ ಗಂಗಣ್ಣ, ವಿನಾಯಕ, ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ, ಡಿ.ಟಿ.ರವಿ ಕುಮಾರ್, ಕಂದಾಯ ಇನ್ಸ್ಪೆಕ್ಟರ್ ಪ್ರತಿಷ್,ಕುವೆಟ್ಟು ಗ್ರಾ.ಪಂ ಪಿಡಿಓ ಇಮ್ತಿಯಾಜ್ , ಓಡಿಲ್ನಾಳ ಗ್ರಾಮ ಆಡಳಿತಾಧಿಕಾರಿ ಪೃಥ್ವಿರಾಜ್ ಶೆಟ್ಟಿ ಮತ್ತು ಕುವೆಟ್ಟು ಗ್ರಾಮ ಆಡಳಿತಧಿಕಾರಿ ಗೌತಮಿ ಭಾಗಿಯಾಗಿದ್ದರು.

- Advertisement -

Latest News

error: Content is protected !!