Monday, June 15, 2026
Homeಕರಾವಳಿಮಂಗಳೂರುಬೆಳ್ತಂಗಡಿ :  ಚಾರ್ಮಾಡಿಯಲ್ಲಿ ನಿಯಂತ್ರಣ ತಪ್ಪಿ ಬೊಲೆರೋ ವಾಹನ ಪಲ್ಟಿ

ಬೆಳ್ತಂಗಡಿ :  ಚಾರ್ಮಾಡಿಯಲ್ಲಿ ನಿಯಂತ್ರಣ ತಪ್ಪಿ ಬೊಲೆರೋ ವಾಹನ ಪಲ್ಟಿ

- Advertisement -
- Advertisement -

ಬೆಳ್ತಂಗಡಿ : ನಾಯಿ ಅಡ್ಡ ಬಂದ ಕಾರಣ ನಿಯಂತ್ರಣ ತಪ್ಪಿದ ಬೊಲೆರೋ ವಾಹನ ಪಲ್ಟಿಯಾಗಿ ಚರಂಡಿಗೆ ಬಿದ್ದು ಸಿಲುಕಿದ ಘಟನೆ ಚಾರ್ಮಾಡಿ ಗ್ರಾಮದ ಬೀಟಿಗೆಯ ಹೆದ್ದಾರಿಯಲ್ಲಿ ಜೂ.8 ರಂದು ರಾತ್ರಿ 9:30 ಸುಮಾರಿಗೆ ಘಟನೆ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ನಿವಾಸಿಗಳಾದ ಚೇತನ್ ಮತ್ತು ಸುರೇಶ್ ಇಬ್ಬರು ಉಡುಪಿ ಜಿಲ್ಲೆಯ ಕಾರ್ಕಳ ಸಂಬಂಧ ಮನೆಗೆ ಹೋಗಿ ವಾಪಸ್ ಬರುವಾಗ ಚೇತನ್ ಎಂಬಾತನ ಸಂಬಂಧಿಯ ಬೊಲೆರೋ ವಾಹನ ತೆಗೆದುಕೊಂಡು ಮೂಡಿಗೆರೆಗೆ ವಾಪಸ್ ಹೋಗುವಾಗ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ಬೀಟಿಗೆ ಹೆದ್ದಾರಿಯಲ್ಲಿ ನಾಯಿ ಅಡ್ಡ ಬಂದ ಕಾರಣದಿಂದ ನಿಯಂತ್ರಣ ತಪ್ಪಿದ ಬೊಲೆರೋ ವಾಹನ ಪಲ್ಟಿಯಾಗಿ ರಸ್ತೆಯ ಬದಿಯ ಕ್ರಾಂಕ್ರಿಟ್ ಚರಂಡಿಗೆ ಬಿದ್ದು ಸಿಲುಕಿಕೊಂಡಿದೆ. ವಾಹನ ಪಲ್ಟಿ ರಭಸಕ್ಕೆ ವಾಹನದಲ್ಲಿದ್ದ ಮೂಡಿಗೆರೆಯ ಚೇತನ್ ಮತ್ತು ಸುರೇಶ್ ಗೆ ಯಾವುದೇ ಪ್ರಾಣ ಹಾನಿಯಾಗಿಲ್ಲ. ಸ್ಥಳೀಯ ಯುವಕರ ತಂಡ ಸೇರಿಕೊಂಡು ಬೊಲೆರೋ ವಾಹನವನ್ನು ಹೊರತೆಗೆದು ಸಹಕರಿಸಿದ್ದಾರೆ.

- Advertisement -

Latest News

error: Content is protected !!